ಮದುವೆಯಾಗ್ತಾರಂತೆ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ..! ಹುಡುಗಿ ಬಗ್ಗೆ ಕೇಳುದ್ರೆ ಏನ್ ಅಂದ್ರು ಗೊತ್ತಾ..?

07 Feb 2019 10:33 AM | Entertainment
213 Report

ಕಿರುತೆರೆಯಲ್ಲಿ ದೊಡ್ಡ ರಿಯಾಲಿಟಿ ಷೋಗಳಲ್ಲಿ ಬಿಗ್’ಬಾಸ್ ಕೂಡ ಒಂದು.. ಕನ್ನಡ ಬಿಗ್’ಬಾಸ್ 6 ಆವೃತ್ತಿಗಳನ್ನು ಮುಗಿಸಿದೆ. ಬಿಗ್ ಬಾಸ್ ಸೀಸನ್-5ರಲ್ಲಿ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ವಿನ್ನರ್ ಆಗಿದ್ದರು..ಇದೀಗ ಅವರಿಗೆ ಹಸೆಮಣೆ ಏರುವ ಬಯಕೆ ಬಂದಿದೆಯಂತೆ. ಖಾಸಗಿ ವಾಹಿನಿಯ ಜೊತೆ ಮಾತನಾಡಿದ ಅವರು, ಹೊಸ ಅಭಿಮಾನಿಗಳು ಸಿಕ್ಕರೆ ಎಲ್ಲರೂ ಮದುವೆ ಯಾವಾಗ ಎಂಬ ಪ್ರಶ್ನೆಯನ್ನೇ ಕೇಳುತ್ತಿದ್ದಾರೆ. ಹೀಗಾಗಿ ಇದೀಗ ತಾನೂ ಮದುವೆ ಆಗಬೇಕು ಎಂದು ಅನಿಸುತ್ತಿದೆ ಎಂದು ತಿಳಿಸಿದ್ದಾರೆ. ಸ್ನೇಹಿತರ ಮದುವೆ, ಪಾರ್ಟಿ, ಫಂಕ್ಷನ್‍ಗಳಿಗೆ ಹೋದರೆ ನನ್ನ ಎಲ್ಲಾ ಸ್ನೇಹಿತರು ತಮ್ಮ ಲೈಫ್ ಪಾರ್ಟ್ನರ್ ಜೊತೆ ಬರುತ್ತಿದ್ದಾರೆ.

ನಾನು ಮಾತ್ರ ಸಿಂಗಲ್ ಆಗಿ ಹೋದಾಗ ನಾನು ಮದುವೆ ಆಗಬೇಕು ಎಂದು ಅನಿಸುತ್ತದೆ. ಹೀಗಾಗಿ ನಾನು ಅದಷ್ಟು ಬೇಗ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ. ಚಂದನ್ ಮದುವೆ ಆಗುವ ಹುಡುಗಿ ಯಾರು ಎನ್ನುವುದು ನನಗೆ ಗೊತ್ತಿಲ್ಲ.. ಮದುವೆಯಾಗುವ ಮೊದಲು ಸ್ವಂತ ಮನೆ ಮಾಡಬೇಕು. ಅದು ಆದಷ್ಟು ಬೇಗ ಮಾಡುತ್ತೀನಿ. ಆದಾದ ನಂತರ ಮದುವೆ ಆಗುತ್ತೀನಿ ಎಂದು ಹೇಳಿದ್ದಾರೆ. ಬಿಗ್‍ಬಾಸ್ ಮನೆಗೆ ಹೋಗಿ ಬಂದ ಮೇಲೆ ಚಂದನ್ ಲಕ್ ಬದಲಾಯಿತು. ಆಸ್ಟೇಲಿಯಾ, ಅಮೇರಿಕಾ ಸೇರಿದಂತೆ ಬೇರೆ ಬೇರೆ ದೇಶದಲ್ಲಿರುವ ಕನ್ನಡಿಗರು ಫೈಯರ್ ಸಾಂಗ್‍ಗೆ ಫಿದಾ ಆಗಿದ್ದಾರೆ. ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ಕೂಡ ಕಳುಹಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಇದೀಗ ಚಂದನ್‍ಗೆ ಮದುಮಗನಾಗುವ ಆಸೆ ಮನದಲ್ಲಿ ಮೂಡಿದೆ ಎನ್ನಬಹುದು.. ಬಿಗ್ ಬಾಸ್ 5 ರಲ್ಲಿ ಚಂದನ್  ನಿವೇದಿತಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದರು.. ಅಭಿಮಾನಿಗಳು ಇವರಿಬ್ಬರು ಫೇರ್ ಆದ್ರೆ ಚಂದ ಎನ್ನುತ್ತಿದ್ದರು. ಆದರೆ ನಾವು ಸ್ನೇಹಿತರಷ್ಟೆ ಎಂದು ಅವರಿಬ್ಬರು ಹೇಳಿದ್ದಾರೆ.

Edited By

Manjula M

Reported By

Manjula M

Comments