ಪಿಗ್ಗಿ ಬೆಡ್'ರೂಂ ಫೋಟೋ ತೆಗಿದಿದ್ಯಾರೆಂಬ ಸೀಕ್ರೇಟ್ ರಿವೀಲ್ : ಬೆಡ್ ರೂಂನಲ್ಲಿದ್ದವರು…?!!!

07 Feb 2019 9:43 AM | Entertainment
114 Report

ಇತ್ತೀಚಿಗೆ ಕೆಲ ಸ್ಟಾರ್''ಗಳ ಖಾಸಗೀ ಫೋಟೋಗಳು ತಮಗೆ ಅರಿವಿಲ್ಲದಂತೇ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಆಗುತ್ತಿವೆ. ಈ ಸಂಬಂಧ ಈಗಾಗಲೇ ಬಾಲಿವುಡ್ ಮತ್ತು ಟಾಲಿವುಡ್ ನ ಕೆಲ ಸ್ಟಾರ್ ನಟಿಯರು ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ. ನಮ್ಮ ಫೊನ್ ಹ್ಯಾಕ್ ಮಾಡಲಾಗಿದೆ. ನಮ್ಮ ಖಾತೆ ಹ್ಯಾಕರ್ ಕೈಗೆ ಸಿಕ್ಕಿದೆ ಎಂದು. ಆದರೆ ನಿನ್ನೆಯಷ್ಟೇ ಸೋಶಿಯಲ್ ಮಿಡಿಯಾದಲ್ಲಿ ಪ್ರಿಯಾಂಕ ಚೋಪ್ರಾ ತಮ್ಮ ಪತಿ ನಿಕ್ ಜೊತೆ ಇದ್ದ ಕೆಲ ರಸಮಯ ಕ್ಷಣವನ್ನು  ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಬೆಡ್ ರೂಂ ನಲ್ಲಿದ್ದ ಫೋಟೋವನ್ನು ಯಾರು ತೆಗೆದಿದ್ದಾರೆಂಬ ಹಲವು ಚರ್ಚೆಗಳು ಸೋಶಿಯಲ್ ಮಿಡಿಯಾದಲ್ಲಿ ಭಾರೀ ಚರ್ಚೆಯಾಯ್ತು.ಆ ಫೋಟೋವನ್ನು ಪಿಗ್ಗಿ ನೇ ಪೋಸ್ಟ್ ಮಾಡಿದ್ದರು. ಇದೀಗ ಫೋಟೋ ತೆಗೆದಿದ್ಯಾರೆಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ನಿಕ್ ಎದೆ ಮೇಲೆ ತಲೆಯಿಟ್ಟು ಪ್ರಿಯಾಂಕಾ ನಿದ್ರೆಗೆ ಜಾರಿರುವ ಫೋಟೋ ಇದು. ಪಿಗ್ಗಿ ಫೋಟೋಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಕೆಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ರೆ ಮತ್ತೆ ಕೆಲವರು ಬೆಸ್ಟ್ ಫೋಟೋ ಎಂದಿದ್ದಾರೆ. ಈಗ ಈ ಫೋಟೋ ಕ್ಲಿಕ್ಕಿಸಿದವರು ಯಾರು ಎಂಬ ಪ್ರಶ್ನೆಗೆ ಪಿಗ್ಗಿ ಉತ್ತರ ನೀಡಿದ್ದಾಳೆ.ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ನನ್ನ ಪತಿ ಯೊಟ್ಟಿಗೆ ಇರುವ ಫೋಟೋ ತೆಗೆದಿದ್ದು ಬೇರೆ ಯಾರು ಅಲ್ಲ ನನ್ನ ಸ್ನೇಹಿತೆ ದಿವ್ಯಾ ಎಂದಿದ್ದಾಳೆ. ಪ್ರಿಯಾಂಕಾ, ನಿಕ್ ಜೊತೆ ಆಕೆ ಸ್ನೇಹಿತರೆಲ್ಲ ಒಟ್ಟಿಗೆ ಕುಳಿತಿದ್ದರಂತೆ. ಪ್ರಿಯಾಂಕಾ ಅಲ್ಲಿಯೇ ನಿದ್ರೆ ಮಾಡಿದ್ದಳಂತೆ. ಈ ಕ್ಷಣವನ್ನು ದಿವ್ಯಾ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾಳೆ ಎಂದು ಪಿಗ್ಗಿ ಹೇಳಿದ್ದಾಳೆ. ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ತನಗಿಂತ 10 ವರ್ಷ ಚಿಕ್ಕ ವಯಸ್ಸಿನ ಪತಿ ನಿಕ್ ಜೊತೆ ಕ್ಯಾಲಿಫೋರ್ನಿಯಾದಲ್ಲಿ ರಜೆ ಮಜಾ ಅನುಭವಿಸಿ ಬಂದಿದ್ದಾಳೆ. ಈ ವೇಳೆ ಪ್ರಿಯಾಂಕಾ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By

Kavya shree

Reported By

Kavya shree

Comments