'ನಿಂತ ನೋಡು ಯಜಮಾನ’.... ಯೂಟ್ಯೂಬ್ ನಲ್ಲಿ ನಂಬರ್ 1 ಪಟ್ಟ ಗಿಟ್ಟಿಸಿಕೊಂಡ ಯಜಮಾನ ಟೈಟಲ್ ಸಾಂಗ್

06 Feb 2019 5:53 PM | Entertainment
928 Report

ಸ್ಯಾಂಡಲ್ವುಡ್ ನಲ್ಲಿ ಪುನೀತ್ ರಾಜ್ಕುಮಾರ್’ಗೆ ಬ್ರೇಕ್ ಕೊಟ್ಟ ಸಿನಿಮಾಗಳಲ್ಲಿ ರಾಜಕುಮಾರ ಕೂಡ ಒಂದು,,,ಅದರಲ್ಲಿರುವ ''ಗೊಂಬೆ ಹೇಳುತೈತೆ.. ಮತ್ತೆ ಹೇಳುತೈತೆ ನೀನೇ ರಾಜಕುಮಾರ..'' ಹಾಡು ಕನ್ನಡಿಗರ ಮನಸ್ಸಿಗೆ ಬಹಳವಾಗಿಯೇ ನಾಟಿತು ಎಂದರೆ ತಪ್ಪಾಗುವುದಿಲ್ಲ.. ಅಷ್ಟೆ ಅಲ್ಲದೆ ಬಹುತೇಕರಿಗೆ ಇಷ್ಟವಾದ ಹಾಡು. ಈಗ ಅದೇ ರೀತಿಯ ಮತ್ತೊಂದು ಹಾಡು ಬಂದಿದೆ. 'ನಿಂತ ನೋಡು ಯಜಮಾನ..' ಎಂಬ ಹೊಸ ಹಾಡು ನಿನ್ನೆ ರಿಲೀಸ್ ಆಗಿದೆ. 'ಯಜಮಾನ' ಸಿನಿಮಾದ ಈ ಹಾಡನ್ನು ಕೇಳಿದರೆ, 'ರಾಜಕುಮಾರ' ಸಿನಿಮಾದ ಹಾಡು ತಕ್ಷಣ ನೆನಪಿಗೆ ಬರುತ್ತದೆ.

ಅಷ್ಟೆ ಅಲ್ಲದೆ ಮತ್ತೊಂದು ವಿಶೇಷತೆ ಏನೆಂದರೆ ಹಾಡಿನ ಹಿಂದಿನ ಶಕ್ತಿಗಳೆ ಇಲ್ಲಿಯೂ ಕೂಡ ಒಟ್ಟಾಗಿ ಕೆಲಸ ಮಾಡಿವೆ.. ಗೊಂಬೆ ಹೇಳುತೈತೆ ಸಾಂಗ್ ಅನ್ನು ಬರೆದಿದ್ದು ಸಂತೋಷ್ ಆನಂದ್ ರಾಮ್, ಸಂಗೀತ ನೀಡಿದ್ದು ಹರಿಕೃಷ್ಣ, ಹಾಡಿದ್ದು ವಿಜಯ ಪ್ರಕಾಶ್. ಈಗ ನಿಂತ ನೋಡು ಯಜಮಾನ ಹಾಡನ್ನು ಕೂಡ ಹಾಡಿದ್ದು ವಿಜಯ ಪ್ರಕಾಶ್, ಬರೆದಿದ್ದು ಸಂತೋಷ್ ಆನಂದ್ ರಾಮ್ ಹಾಗೂ ವಿ ಹರಿಕೃಷ್ಣ ಸಂಗೀತ ಇದೆ. ಆ ಹಾಡಿಗೆ ಕೆಲಸ ಮಾಡಿದವರೆ ಇಲ್ಲಿಯೂ ಕೂಡ ಕೆಲಸ ಮಾಡಿದ್ದಾರೆ. ಹಾಡು ಕೇಳುವುದಕ್ಕೆ ಕೂಡ ಅದೇ ರೀತಿಯೇ ಇದೆ... ಅಲ್ಲಿ ಪುನೀತ್ ರಾಜ್ ಕುಮಾರ್ ಪಾತ್ರವನ್ನು ವರ್ಣನೆ ಮಾಡಿದ್ದಾರೆ.. ಆದರೆ ಇಲ್ಲಿ ದರ್ಶನ್ ಪಾತ್ರವನ್ನು ವರ್ಣಿಸಿದ್ದಾರೆ. ಎರಡು ಹಾಡುಗಳ ಸಾಹಿತ್ಯ ಸರಳ ಮತ್ತು ಸುಂದರವಾಗಿದೆ. ಸದ್ಯ, 'ನಿಂತ ನೋಡು ಯಜಮಾನ..' ಹಾಡು ಯೂ ಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ. ಹಾಡು ಬಿಡುಗಡೆಯಾಗಿ 22 ಗಂಟೆಗೆ 1.27 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಯಜಮಾನ ಸಿನಿಮಾಗಾಗಿ ದರ್ಶನ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ತೆರೆ ಮೇಲೆ ಯಜಮಾನ ಯಾವ ರೀತಿ ಮೂಡಿ ಬರುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments

Cancel
Done