ನಗ್ನ ಚಿತ್ರ ಕಳುಹಿಸಿ ಟಾರ್ಚರ್ ಕೊಡುತ್ತಿದ್ದ ಫೇಸ್ಬುಕ್ ಕಾಮಣ್ಣ ಬಂಧನ...!

06 Feb 2019 4:35 PM | Entertainment
120 Report

ಫೇಸ್’ಬುಕ್ ನಲ್ಲಿ ಪರಿಚಯವಾದ ಯುವತಿಗೆ ನಗ್ನ ವಿಡಿಯೋ, ಅಶ್ಲೀಲ ಸಂದೇಶ ಕಳುಹಿಸುವುದರ ಮೂಲಕ ಸೆಕ್ಸ್ ಗೆ ಒತ್ತಾಯಿಸುತ್ತಿದ್ದ ಮುಖಪುಟ ವಿನ್ಯಾಸಗಾರ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಬಂಧಿತ ಆರೋಪಿಯನ್ನು ತಮ್ಮಣ್ಣ ಫಕೀರಪ್ಪ ಹಾದಿಮನಿ (52) ಆಂತ ತಿಳಿದು ಬಂದಿದೆ. ಈತ ಫೇಸ್‍ಬುಕ್ ಮೂಲಕ ರೂಪದರ್ಶಿ ಯೊಬ್ಬರನ್ನು ಪರಿಚಯಿಸಿಕೊಂಡಿದ್ದನು. ನಂತರ ಸ್ನೇಹದ ಹೆಸರಿನಲ್ಲಿ ಫ್ಲರ್ಟ್ ಮಾಡುತ್ತಿದ್ದ. ಮಾತು ಮಾತಿಗೂ ಸೆಕ್ಸ್ ವಿಚಾರವೆತ್ತುತ್ತಿದ್ದ, ವೃತ್ತಿ ಬಗ್ಗೆ ಮಾತನಾಡಿದಾಗಲೆಲ್ಲಾ ನನಗೆ ಟಾರ್ಚರ್ ಕೊಡುತ್ತಿದ್ದನೆಂದು ರೂಪದರ್ಶಿ ದೂರಿನಲ್ಲಿ ತಿಳಿಸಿದ್ದಾರೆ.

 ಬಳಿಕ ತಮ್ಮಣ್ಣ ರೂಪದರ್ಶಿಗೆ ನಗ್ನ ಚಿತ್ರ ಕಳುಹಿಸುವ ಮೂಲಕ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಪದೇ ಪದೇ ತಮ್ಮಣ್ಣ ತನ್ನನ್ನು ಒತ್ತಾಯಿಸುತ್ತಿದ್ದ, ಇದರಿಂದ ಆತನ ಕಿರುಕುಳ ತಾಳಲಾರದೇ ರೂಪದರ್ಶಿ ಸೈಬರ್ ಕ್ರೈಂ ಪೋಲೀಸರಿಗೆ ದೂರು ನೀಡಿದ್ದಳು.ಈ ದೂರಿನ ಅನ್ವಯ ಪೊಲೀಸರು ಬೆಳಗಾವಿಯ ಗೋಕಾಕ್ ಬಸ್ ನಿಲ್ದಾಣವೊಂದರ ಲಾಡ್ಜ್ ವೊಂದರಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ನಟಿಯರ ಖಾಸಗಿ ಫೊಟೋಗಳು ಕೂಡ ಲೀಕ್ ಆಗುತ್ತಿವೆ. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣವನ್ನು ಫ್ಲರ್ಟ್ ಅಡ್ಡೆ ಮಾಡಿಕೊಂಡಿರುವ ಕೆಲ ಪುಂಡರು, ಸಿನಿಮಾ  ನಟಿಯರಿಗೆ,ಕೆಲ ಯುವತಿಯರಿಗೆ ಅಶ್ಲೀಲ ಪೋಟೋ, ವಿಡಿಯೋ ಕಳುಹಿಸುವುದರ ಮೂಲಕ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಈಗಾಗಲೇ ಸೈಬರ್ ಕ್ರೈಂ ಎಚ್ಚೆತ್ತುಕೊಂಡಿದ್ದು, ಕೊಟ್ಟಿರುವ ದೂರಿನನ್ವಯ ಫೇಸ್ಬುಕ್ ಕಾಮುಕನನ್ನು ಬಂಧಿಸಿದ್ದಾರೆ.

Edited By

Kavya shree

Reported By

Kavya shree

Comments