2019ಕ್ಕೆ  ಬಿಡುಗಡೆಯಾಗುವ ಸಿನಿಮಾಗಳ ಬಗ್ಗೆ ಪವರ್ ಸ್ಟಾರ್ ಹೇಳಿದ್ದೇನು..?

06 Feb 2019 2:23 PM | Entertainment
180 Report

ಚಂದನವನದಲ್ಲಿ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ಚಿತ್ರ 'ನಟಸಾರ್ವಭೌಮ' ನಾಳೆ ತೆರೆ ಕಾಣಲಿದೆ.. ಈ ಸಿನಿಮಾ ತೆರೆ ಕಂಡ ಬಳಿಕ 'ಯವರತ್ನ'ದಲ್ಲಿ  ಪುನೀತ್ ಸಿಕ್ಕಾಪಟ್ಟೆ ಬ್ಯುಸಿ ಆಗುತ್ತಿದ್ದಾರೆ. ಫೆಬ್ರವರಿ 14ರಿಂದ ಯುವರತ್ನ ಸಿನಿಮಾದ ಚಿತ್ರಿಕರಣ ಪ್ರಾರಂಭವಾಗಲಿದೆ.. 2019ರಲ್ಲೇ ಅವರು ಮತ್ತೆರಡು ಬಿಗ್‌ಬಜೆಟ್‌ ಸಿನಿಮಾಗಳಿಗೆ ಫಿಕ್ಸ್‌ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ..ಪುನೀತ್’ಗೆ ಆಫರ್‌ಗಳಿಗೇನು ಕಡಿಮೆ ಇಲ್ಲ...ಯುವರತ್ನ ಸಿನಿಮಾದಲ್ಲಿ ನಾನು ಇಷ್ಟ ಪಡುವ ಕತೆ ಮತ್ತು ಪಾತ್ರ ಇತ್ತು ಎನ್ನುವ ಕಾರಣಕ್ಕಾಗಿಯೇ 'ಯುವರತ್ನ' ಒಪ್ಪಿಕೊಂಡೆ ಎಂದು ಪುನೀತ್ ತಿಳಿಸಿದ್ದಾರೆ.

ಇನ್ನು ಎರಡು ಸಿನಿಮಾಗಳು ಮಾತುಕತೆಯ ಹಂತದಲ್ಲಿವೆ ಎನ್ನಲಾಗುತ್ತಿದೆ.. ಕತೆ ಕೇಳಿದ್ದೇನೆ. ಕತೆ ಮತ್ತು ಪಾತ್ರಗಳ ವಿಚಾರದಲ್ಲಿ ನಾನೇನು ನಿರೀಕ್ಷೆ ಮಾಡುತ್ತಿದ್ದೇನೋ ಅಂತಹ ಕತೆ ಮತ್ತು ಪಾತ್ರ ಆ ಸಿನಿಮಾದಲ್ಲಿ ಇವೆ. ಜೊತೆಗೆ ದೊಡ್ಡ ಪ್ರೊಡಕ್ಷನ್‌ ಹೌಸ್‌ಗಳೇ ಅವೆರಡು ಸಿನಿಮಾಗಳ ನಿರ್ಮಾಣಕ್ಕೆ ಮುಂದೆ ಬಂದಿವೆ. ಅವು ಈ ವರ್ಷದ ಒಳಗಾಗಿಯೇ ಶುರುವಾಗಬಹುದು. ಇದರ ಜೊತೆ ಪಿಆರ್‌ಕೆ ಬ್ಯಾನರ್‌ನ ನಾಲ್ಕನೇ ಚಿತ್ರದಲ್ಲೂ ನಾನು ಅಭಿನಯಿಸಲಿದ್ದೀನಿ ಎಂದು ಪುನೀತ್ ತಿಳಿಸಿದ್ದಾರೆ.. 2018ರಲ್ಲಿ ನನ್ನ ಸಿನಿಮಾ ಯಾವುದು ಬರಲಿಲ್ಲ. ಸ್ಟಾರ್‌ ನಟರು ಅಷ್ಟುಗ್ಯಾಪ್‌ ತೆಗೆದುಕೊಳ್ಳುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಉದ್ಯಮ ಉಳಿಯಬೇಕಾದ್ರೆ, ಹೊಸಬರ ಸಿನಿಮಾಗಳ ಜತೆಗೆ ಸ್ಟಾರ್‌ ನಟರ ಸಿನಿಮಾಗಳು ಕೂಡ ಬರಬೇಕು. ಅದೇನೋ ಗೊತ್ತಿಲ್ಲ, ನನಗೂ ಅಂತಹದೊಂದು ಗ್ಯಾಪ್‌ ಬಂದು ಹೋಯಿತು. ಆದರೆ ಈ ವರ್ಷ ಅಂತಹ ಗ್ಯಾಪ್‌ ಆಗೋದಿಲ್ಲ ಎಂದು ಪುನೀತ್ ತಿಳಿಸಿದ್ದಾರೆ. ಒಟ್ಟಾರೆ ಸಿನಿ ರಸಿಕರಿಗೆ ಈ ಬಾರಿ ಒಳ್ಳೆಯ ಸಿನಿಮಾಗಳ ರಸದೌತಣ ಎಂದರೆ ತಪ್ಪಾಗುವುದಿಲ್ಲ...

Edited By

Manjula M

Reported By

Manjula M

Comments