‘ಸರಿಗಮಪ’ ಹನುಮಂತನ ಜೊತೆಗೆ ತಂಗಿಗೂ ಖುಲಾಯಿಸಿತು ಲಕ್..!

06 Feb 2019 10:45 AM | Entertainment
365 Report

ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋ ನಲ್ಲಿ ಹೆಚ್ಚು ಸದ್ದು ಮಾಡಿದ ಸ್ಪರ್ಧಿ ಹನುಮಂತ ಸದ್ಯ ಕರ್ನಾಟಕದ ಸೆಲೆಬ್ರಿಟಿಯಾಗಿದ್ದಾರೆ. ಕುಗ್ರಾಮದ ಹಳ್ಳಿಯೊಂದರಲ್ಲಿ ಕುರಿ ಮೇಯಿಸಿಕೊಂಡು ಹಾಡು ಹೇಳುತ್ತಿದ್ದ ಹನುಮಂತ ಸರಿಗಮಪ ವೇದಿಕೆ ಮೂಲಕ  ಕೋಟ್ಯಾಂತರ ಅಭಿಮಾನಿಗಳನ್ನು ಮನಗೆದ್ದಿದ್ದಾನೆ. ಈಗಾಗಲೇ ಸಿನಿಮಾದಲ್ಲಿ ಹಾಡುವ ಅವಕಾಶಗಿಟ್ಟಿಸಿಕೊಂಡಿರುವ ಹನುಮಂತ ಅವರ ಮೊದಲ ಅದೃಷ್ಟ ಪರೀಕ್ಷೆ ದರ್ಶನ್ ಸಿನಿಮಾದಿಂದಲೇ ಸಿಕ್ಕಿದೆ.

ಇತ್ತೀಚಿಗೆ ಶೋನಲ್ಲಿ ಭಾಗವಹಿಸುತ್ತಿದ್ದ ಸ್ಪರ್ಧಿಗಳ ಫ್ಯಾಮಿಲಿ ರೌಂಡ್ನಲ್ಲಿ ಹನುಮಂತಪ್ಪ ತಮ್ಮ ತಂಗಿಯ ಜೊತೆ ಹಾಡಿದ್ದಾರೆ. ಈಗಾಗಲೇ ಹನುಮಂತಪ್ಪ ಹಾಡಿಗೆ ಫಿದಾ ಆಗಿರುವ ಅಭಿಮಾನಿಗಳು ಅವನಿಗೆ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ. ಅವನ ತಂಗಿ ಧ್ವನಿಗೂ ಮನಸೋತಿದ್ದಾರೆ.ಹಳ್ಳಿಯಿಂದ ಬಂದ ತಂಗಿಯ ಜೊತೆ ಹಾಡಿದ ಹನುಮಂತಪ್ಪನಿಗೆ ವೇದಿಕೆ ಮೇಲೆ ಬಿಗ್ ಆಫರ್ ವೊಂದು ಸಿಕ್ಕಿದೆ. ಸರಿಗಮಪ ಆಯೋಜಕರು, ಕಾನ್ಫಿಡೆಂಟ್ ಗ್ರೂಪ್ ಮಾಲೀಕರು ವೇದಿಕೆ ಮೇಲಿದ್ದರು. ಹನುಮಂತ ಮತ್ತು ತಂಗಿಯ ಜುಗಲ್ಬಂಧಿ ಜಾನಪದ ಹಾಡಿಗೆ ಮನಸೋತ ಅವರು ಸ್ಥಳದಲ್ಲಿಯೇ ಹನುಮಂತನಿಗೆ ಮಾತು ಕೊಟ್ಟರು. ನಿನ್ನ ಹಾಡಿಗೆ ನಾನು 50000 ರೂ.ಗಳನ್ನು ಕೊಡುತ್ತೇನೆ. ಅದನ್ನು ನಿನ್ನ ತಂಗಿಯ ಭವಿಷ್ಯಕ್ಕೆ ಖರ್ಚು ಮಾಡಬೇಕು. ಅಷ್ಟೇ ಅಲ್ದೇ ಈಗ ಬಿಕಾಂ ಓದುತ್ತಿರುವ ಈ  ಹೆಣ್ಣು ಮಗು ವಿದ್ಯಾಭ್ಯಾಸ ಕಂಪ್ಲೀಟ್ ಮಾಡಿದ ನಂತರ ನನ್ನ ಆಫೀಸ್ ನಲ್ಲೇ ಕೆಲಸ ಕೊಡುವುದಾಗಿ ಭರವಸೆ ನೀಡಿದ್ದಾರೆ.ಅಂದಹಾಗೇ ಅಲ್ಲಿ ನೆರೆದಿದ್ದವರೆಲ್ಲಾ ಕಾನ್ಫಿಡೆನ್ಸ್ ಗ್ರೂಪ್ ಮಾಲೀಕರಿಗೆ ಧನ್ಯವಾದಗಳನ್ನು ಆರ್ಪಿಸಿದ್ದಾರೆ. ಚಪ್ಪಾಳೆಗಳ ಸುರಿಮಳೆಯಲ್ಲಿ ಹನುಮಂತಪ್ಪನಿಗೆ ಹಾಗೂ ಆತನ ತಂಗಿಯ ಖುಷಿಗೆ ಪಾರವೇ ಇರಲಿಲ್ಲ.

Edited By

Kavya shree

Reported By

Kavya shree

Comments