ಅಭಿಷೇಕ್ ಅಂಬರೀಷ್ ಮೊದಲನೇ ಚಿತ್ರಕ್ಕೆ ತೆಗೆದು ಕೊಂಡ ಸಂಭಾವನೆ ಎಷ್ಟು ಗೊತ್ತಾ..!!?

06 Feb 2019 10:35 AM | Entertainment
3799 Report

 ಸ್ಯಾಂಡಲ್ ವುಡ್’ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಅಂಬರೀಷ್ ಪುತ್ರ ಅಭಿಷೇಕ್ ಅಭಿನಯಿಸುತ್ತಿರುವ ಅಮರ್ ಕೂಡ ಒಂದು…  ಅಂಬರೀಷ್ ಪುತ್ರ ಅಭಿಷೇಕ್ ಮೊದಲ ಬಾರಿ ಹೀರೋ ಆಗಿ ಅಮರ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ., ಕನ್ನಡ ಚಿತ್ರರಂಗದಲ್ಲಿ ಯಶಸ್ವೀ ನಿರ್ದೇಶಕ ಎಂದು ಹೆಸರುವಾಸಿಯಾಗಿರುವ ನಾಗಶೇಖರ್ ಈ ಚಿತ್ರದ ಚಿತ್ರೀಕರಣದ ಹೊಣೆ ಹೊತ್ತಿಕೊಂಡಿದ್ದಾರೆ. ರೆಬಲ್ ಸ್ಟಾರ್ ಅಂಬರೀಷ್ ಪುತ್ರನ ಮೊದಲ ಚಿತ್ರ ಇದಾಗಿರುವುದರಿಂದ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.. ಇದೀಗ ಈ ಸಿನಿಮಾಗೆ  ಸಂಬಂಧ ಪಟ್ಟ ಸುದ್ದಿಯೊಂದು ಕೇಳಿಬರುತ್ತಿದೆ..

ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್  ಬೈಕ್ ರೇಸರ್ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದು ತಾನ್ಯಾ ಹೋಪ್ ಸ್ಕ್ರೀನ್ ಷೇರ್ ಮಾಡಿದ್ದಾರೆ. ಇನ್ನು ಉಳಿದಂತೆ ಸಂದೇಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ, ಸತ್ಯಾ ಹೆಗ್ಡೆ ಅವರ ಕ್ಯಾಮೆರಾ ಕೈಚಳಕ ಕೂಡ ಈ ಸಿನಿಮಾಕ್ಕೆ ಇದೆ.. ಅಭಿಷೇಕ್ ಈ ಸಿನಿಮಾಗಾಗಿ ಬರೋಬ್ಬರಿ ಸರಿ ಸುಮಾರು ಒಂದು ಕೋಟಿ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ ಆದರೆ ಈ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ.. ಮಗನ ಸಿನಿಮಾವನ್ನು ನೋಡಲು ಅಪ್ಪನೇ ಇಲ್ಲ ಎನ್ನುವುದು ಅಭಿಮಾನಿಗಳಿಗೂ ಮತ್ತು ಸಿನಿ ರಂಗಕ್ಕೂ ಬೇಸರದ ವಿಷಯವಾಗಿದೆ ಎನ್ನಬಹುದು.. ಈ ಸಿನಿಮಾದ ಟೀಸರ್ ಪ್ರೇಮಿಗಳ ದಿನದಂದು ಅಂದರೆ ಫೆಬ್ರವರಿ 14 ರಂದು ಬಿಡುಗೆಡೆಯಾಗಲಿದ್ದು ಎಲ್ಲರೂ ಶುಭಾಷಯವನ್ನು ತಿಳಿಸಿದ್ದಾರೆ.

Edited By

Manjula M

Reported By

Manjula M

Comments