ಒಳ್ಳೆ ಹುಡುಗ ಪ್ರಥಮ್ ಆಸೆ ಈಡೇರಿಸಿದ ಲೀಲಾವತಿ ಅಮ್ಮ...!

06 Feb 2019 10:20 AM | Entertainment
230 Report

ಕನ್ನಡ ಚಿತ್ರರಂಗದ ಹೆಸರಾಂತ ನಟಿ,ಅಭಿಮಾನಿಗಳ ಮನಗೆದ್ದ 'ಸ್ಯಾಂಡಲ್'ವುಡ್ ನ ಅಮ್ಮ, ಹಿರಿಯ ನಟಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ದಶಕಗಳ ನಂತರ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಆಗಾಗ್ಗ ಕಾಣಿಸಿಕೊಳ್ಳುತ್ತಿದ್ದ ಹಿರಿಯ ನಟಿ ಲೀಲಾವತಿ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ. ವಯಸ್ಸು, ಅನಾರೋಗ್ಯದ ಜಂಜಾಟದಿಂದ ಬೇಸತ್ತಿದ್ದ ಲೀಲಾವತಿಅಮ್ಮ ಎಷ್ಟೋ ಸಿನಿಮಾ ಅವಕಾಶಗಳನ್ನು ಬಿಟ್ಟಿದ್ದರು. ದಶಕಗಳ ಕಾಲ ಸಿಲ್ವರ್ ಸ್ಕ್ರೀನ್ ನಲ್ಲಿ ಮಿಂಚಿದ್ದ ಲೀಲಾವತಿ ಈ ಬಾರಿ ಬಿಗ್ ಬಾಸ್ ಸ್ಪರ್ಧಿ ಪ್ರಥಮ್ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಅಭಿನಯಿಸುತ್ತಿರುವುದೇ ವಿಶೇಷ..

ಪ್ರಥಮ್ ಡೈರೆಕ್ಷನ್ 'ನಟ ಭಯಂಕರ' ಚಿತ್ರಕ್ಕಾಗಿ ಬಣ್ಣ ಹಚ್ಚುತ್ತಿರುವ ಇವರು ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಸುತ್ತಿದ್ದಾರೆ. ಲೀಲಾವತಿ ಅವರ ಪಾತ್ರದ ಚಿತ್ರೀಕರಣ ಇದೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ಈಗಾಗ್ಲೇ ನಟ ಭಯಂಕರ ಚಿತ್ರದ ಟೀಸರ್‌ ರೆಡಿಯಾಗಿದ್ದು, ರಿಲೀಸ್ ಮಾಡೋದಿಕ್ಕೆ ಸಿನಿಮಾ ತಂಡ ರೆಡಿಯಾಗಿದೆ.ಅಂದಹಾಗೇ ಪುತ್ರ, ನಟ ವಿನೋದ್ ರಾಜ್ ಜೊತೆ ಕಾಣಿಸಿಕೊಳ್ಳುತ್ತಿದ್ದ ಲೀಲಾವತಿ ಆಸ್ತಿ ವಿಚಾರವಾಗಿ ಒಂದಷ್ಟು ದಿನಗಳ ಕಾಲ ಸುದ್ದಿಯಾಗಿದ್ದರು. ಅವರಿಗೆ ಸಂಸಾರ ನಡೆಸುವುದು ಬಹಳ ಕಷ್ಟವಾಗಿದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಹಲವರ ಬಾಯಿಯಿಂದ ಕೇಳಿ ಬಂದವು. ಒಟ್ಟಾರೆ ಲೀಲಾವತಿ ತಮ್ಮ ಜೀವನವನ್ನು ಸಾಕಷ್ಟು ದಿನಗಳ ಕಾಲ ದುಃಖದಲ್ಲಿಯೇ ಕಳೆದಿದ್ದಾರೆ ಎಂಬ ಮಾತುಗಳು ಇವೆ. ಅದೇನೇ ಇದ್ದರು ಮತ್ತೆ ಕನ್ನಡ ಚಿತ್ರರಂಗದ ನಟಿ ಬಣ್ಣ ಹಚ್ಚುತ್ತಿದ್ದಾರೆ. ಅವರ ಅಭಿನಯವನ್ನು ನೋಡಲು ಅಪಾರ ಅಭಿಮಾನಿಗಳ ಬಳಗ ಕಾತುರದಿಂದ ಕಾಯುತ್ತಿರೋದಂತೂ ಸುಳ್ಳಲ್ಲ. ಅಂದಹಾಗೇ ನಟ ಪ್ರಥಮ್ ಈ ಸಿನಿಮಾದಲ್ಲಿ ಪಾತ್ರವನ್ನು ನೀವೆ ಮಾಡಬೇಕು ಎಂದು ಒತ್ತಾಯಿಸಿದಾಗ ಲೀಲಾವತಿ ಒಪ್ಪಿದ್ದರಂತೆ. ಆರಂಭದಲ್ಲಿ ಬೇಡ ಎಂದ ಲೀಲಾವತಿ ಅಮ್ಮ ಪ್ರಥಮ್ ಅವರ ಒತ್ತಾಯಕ್ಕೆ ಮಣಿದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆಯೂ ಪ್ರಥಮ್, ನನ್ನ ಆಸೆಯನ್ನು ಈಡೇರಿಸಿದ್ದಾರೆ ಲೀಲಾವತಿಯಮ್ಮ ಎಂಬ ಹೇಳಿಕೆ ನೀಡಿದ್ದರು.

Edited By

Kavya shree

Reported By

Kavya shree

Comments