ಪಿಗ್ಗಿ-ನಿಕ್​ ಬೆಡ್​ರೂಮ್​ ಫೋಟೋ ವೈರಲ್..? ಆ ಪೋಟೊ ತೆಗೆದಿದ್ಯಾರು…?

06 Feb 2019 9:59 AM | Entertainment
188 Report

ಪ್ರಿಯಾಂಕ ಮತ್ತು ನಿಕ್​ ಜೋಡಿ ಮದುವೆಗೂ ಮುನ್ನವೇ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.. ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.. ಮದುವೆಗೆ ಮೊದಲು ಎಷ್ಟು ಸುದ್ದಿಯಲ್ಲಿದ್ದರೂ ಅದಕ್ಕೂ ಹೆಚ್ಚು ಮದುವೆಯಾದ ಮೇಲೆ ಸುದ್ದಿಯಲ್ಲಿದ್ದಾರೆ…ಇದೀಗ ಅವರ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.  ಅಷ್ಟೆ ಅಲ್ಲದೆ ಅದೇ ದೊಡ್ಡ ವಿಷಯವಾಗಿ ಚರ್ಚೆಯಾಗುತ್ತಿದೆ…ಬಾಲಿವುಡ್ ಸ್ಟಾರ್ ಪ್ರಿಯಾಂಕಾ ಛೋಪ್ರಾ ಮತ್ತು ಗಾಯಕ ನಿಕ್ ಜೊನಾಸ್ ಮದುವೆ ದೊಡ್ಡ ಸುದ್ದಿಯಾಗಿತ್ತು. ಇದೀಗ ಅವರ ಬೆಡ್ ರೂಂ  ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈಗಲೂ ಆಗಿರುವುದು ಅದೆ.ಎಸ್.. ಪ್ರಿಯಾಂಕಾ-ನಿಕ್​ ಅವರು ಬೆಡ್​ ರೂಮ್​ನಲ್ಲಿರುವ ಫೋಟೋವೊಂದನ್ನು ಖುದ್ದು ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡಿದ್ದಾರೆ..

ಈ ಚಿತ್ರದಲ್ಲಿ ಕುಳಿತಿರುವ ನಿಕ್​ ಎದೆ ಮೇಲೆ ಪಿಗ್ಗಿ ಮಲಗಿದ್ದಾರೆ.ಅದು ಸಹ ಸ್ನಾನದ ನಂತರ ತೊಡುವ ಉಡುಗೆಯಲ್ಲಿ ಪಿಗ್ಗಿ ನಿಕ್​ ಜತೆ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಬೆಡ್​ರೂಮ್​ನಲ್ಲಿ ಏಕಾಂತದಲ್ಲಿದ್ದಾಗ ಈ ಫೋಟೋವನ್ನು ಕ್ಲಿಕ್ಕಿಸಿದ್ದು ಯಾರು ಎನ್ನುವ ಪ್ರಶ್ನೆಯೇ ಎಲ್ಲರಲ್ಲೂ ಮೂಡಿದೆ... ಇವರ ಬೆಡ್ರೂಮ್ ಪೋಟೋ ತೆಗೆದವರು ಯಾರು ಎಂಬ ಅನುಮಾನ ಮೂಡಿದೆ. ಇದೇನು ಸಿಸಿ ಟಿವಿ ಫೂಟೇಜಾ ಎಂದು ಟ್ವೀಟ್ ಮಾಡಲಾಗುತ್ತಿದೆ. ಪೋಟೋ ಗ್ರಾಫರ್‌ನನ್ನು ಬೆಡ್ ರೂಂ ನಲ್ಲೇ ಇಟ್ಟುಕೊಂಡಿದ್ದೀರಾ? ಎಂಬುದಾಗಿ ನೆಟ್ಟಿಗರು ವ್ಯಂಗ್ಯದ ಪ್ರಶ್ನೆ ಕೇಳಿದ್ದಾರೆ.. ಅವರ ಮದುವೆ ಸಂಭ್ರಮ ಮುಗಿದ ಮೇಲೆ ಹೊರಗಡೆ  ಅರ್ಧ ಗಂಟೆಗೂ ಅಧಿಕ ಕಾಲ ಪಟಾಕಿ ಸುಡಲಾಗಿತ್ತು. ಇದಕ್ಕೂ ಸಹ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

Edited By

Manjula M

Reported By

Manjula M

Comments