ಮಗಳ ಫೋಟೋ ಹಾಕಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ ಬಿಗ್ ಬಿ!

05 Feb 2019 5:36 PM | Entertainment
481 Report

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸದಾ ಸೋಶಿಯಲ್ ಮಿಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಅಂದಹಾಗೇ ಟ್ವಿಟ್ಟರ್ ನಲ್ಲಿ ಪತ್ರವೊಂದನ್ನು ಪೋಸ್ಟ್  ಮಾಡುವುದರ ಮೂಲಕ ಸುದ್ದಿಯಾಗಿದ್ದಾರೆ. ಅಂದಹಾಗೇ ಅಮಿತಾಬ್ ಬಚ್ಚನ್  ಈ ಬಾರಿ ಮಗಳ ವಿಚಾರವಾಗಿ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಮಗಳ,ಮಗ ಸಿನಿಮಾ ಲ್ಯಾಂಡ್ ಗೆ ಬರುತ್ತಿದ್ದಾರೆಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಬಿಗ್ ಬಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ಪುತ್ರಿಯ ಬಾಲ್ಯದ ಫೋಟೋ ಇದೀಗ ವೈರಲ್ ಆಗಿದೆ. ಅಂದಹಾಗೇ ಮಗಳ ಬಾಲ್ಯದ ಫೋಟೋ ಹಾಕಿದ ಅಮಿತಾಬ್,  ಪುತ್ರಿ ಶ್ವೇತಾ ಬಚ್ಚನ್ ನಂದಾ ಬಗ್ಗೆ ಮಾತನಾಡಿದ್ದಾರೆ.ಅಮಿತಾಬ್ ಪುತ್ರಿ ಶ್ವೇತಾ ಬಚ್ಚನ್ ನಂದಾ ಇತ್ತೀಚೆಗೆ ಬಿಡುಗಡೆ ಮಾಡಿರುವ ಪ್ಯಾರಡೈಸ್ ಟವರ್ಸ್ ಕಾದಂಬರಿಯನ್ನು ಮೆಚ್ಚಿ ಬಿಗ್ ಬಿ ಟ್ವೀಟ್ ಮಾಡಿದ್ದಾರೆ. ಪುಸ್ತಕದ ಮುಖಪುಟ ಹಾಗೂ ಆನ್ಲೈನ್ ಮಾರಾಟದ ಸ್ಕ್ರೀನ್ ಶಾಟ್ ಜತೆಗೆ ಶ್ವೇತಾ ಚಿಕ್ಕ ಮಗುವಾಗಿದ್ದಾಗ ತಲೆ‌ಮೇಲಿನ ಪರದೆ(ಗೂಂಘಟ್) ಸರಿಸಿ ಕಣ್ಣರಳಿಸಿ ನೋಡುತ್ತಿರುವ ಭಾವಚಿತ್ರವನ್ನು ಶೇರ್ ಮಾಡಿದ್ದಾರೆ.

ಅಂದಹಾಗೇ  ಮಗಳು  ಕಾದಂಬರಿ  ಬರೆಯುವ ತನಕವೂ ಬೆಳೆದಿದ್ದಾಳೆ. ಈ ಮಟ್ಟಕ್ಕೆ ಬೆಳೆದಿರುವ ಶ್ವೇತಾ ಬಗ್ಗೆ ತುಂಬಾ ಕಾನ್ಫಿಡೆನ್ಸ್ ಇರುವ ಅಮಿತಾಬ್ ಬಚ್ಚನ್ ಫೋಟೋ ಮೂಲಕ ಮಗಳಿಗೆ ಶುಭ ಹಾರೈಸಿದ್ದಾರೆ. ಅಭಿಷೇಕ್ ಬಚ್ಚನ್ ಅವರ ಬಾಲ್ಯದ ಫೋಟೋವೊಂದನ್ನು ಶೇರ್ ಮಾಡುವುದರ ಮೂಲಕ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಗೆ ಹುಟ್ಟಹಬ್ಬದ ಶುಭಾಶಯ ತಿಳಿಸಿದ್ದಾರೆ.

Edited By

Kavya shree

Reported By

Kavya shree

Comments