ಜವರಾಯನ ಯಮಪಾಷದಿಂದ ಪಾರಾದ 'ಉಪ್ಪಿ' ಲವ್ವರ್…!!!

05 Feb 2019 4:17 PM | Entertainment
273 Report

ಕ್ಯಾನ್ಸರ್ ಪೀಡಿತ ಅನೇಕ ಸಿನಿಮಾ ಸ್ಟಾರ್ ಗಳನ್ನು ನೋಡಿದ್ದೇವೆ. ಇತ್ತೀಚಿಗಷ್ಟೇ ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ತುತ್ತಾದ ಸ್ಟಾರ್ ನಾಯಕ-ನಾಯಕಿಯರು ಎಂಬ ವರದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ  ಸುದ್ದಿಯಾಗಿತ್ತು. ಸದ್ಯ ಸಾವಿನ ಕೂಪದಿಂದ ಪಾರಾಗಿ ಕನ್ನಡ ಸಿನಿಮಾದ ನಾಯಕಿ, ಬಾಲಿವುಡ್ ತಾರೆ ವಾಪಸ್ ಬಂದಿದ್ದಾರೆ.  ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ರಿಯಲ್ ಸ್ಟಾರ್ ಉಪೇಂದ್ರ ರೊಟ್ಟಿಗೆ ಪ್ರೀತ್ಸೆ ಸಿನಿಮಾದಲ್ಲಿ ನಟಿಸಿ ಕನ್ನಾಡಭಿಮಾನಿಗಳ ಮನಗೆದ್ದ ಕಿರಣ ಪಾತ್ರಧಾರಿ ಬಾಲಿವುಡ್ ಸ್ಟಾರ್ ನಟಿ ಸೋನಾಲಿ ಬೇಂದ್ರೆ ಸದ್ಯ ಕ್ಯಾನ್ಸರ್’ನಿಂದ ರಿಲೀಫ್ ಪಡೆದಿದ್ದಾರೆ.

ಕೆಲ  ದಿನಗಳ ಹಿಂದಷ್ಟೇ  ಕ್ಯಾನ್ಸರ್ ಮಾರಕ ರೋಗಕ್ಕೆ ಬಲಿಯಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ನಟಿ ಸೋನಾಲಿ ಬೇಂದ್ರೆ ಸದ್ಯ ಚಿಕಿತ್ಸೆ ಪೂರ್ಣಗೊಳಿಸಿ ನ್ಯೂಯಾರ್ಕ್ ನಿಂದ ವಾಪಸ್ ಆಗಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಸೋನಾಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಭಾವನಾತ್ಮಕ ಪತ್ರವೊಂದನ್ನು ಬರೆದು ಸುದ್ದಿಯಾಗಿದ್ದರು. ಸದ್ಯ ಸೋನಾಲಿ ಬೇಂದ್ರೆ ಚೇತರಿಸಿಕೊಂಡು, ಶೂಟಿಂಗ್‌ಗೆ ಮರಳಿದ್ದಾರೆ.ಈ ಬಗ್ಗೆ ತಮ್ಮ ಇನ್ಸ್‌ಸ್ಟಾಗ್ರಾಂನಲ್ಲಿ ಫೋಟೋವೊಂದನ್ನ ಅಪ್ಲೋಡ್ ಮಾಡಿದ ಸೋನಾಲಿ ಬೇಂದ್ರೆ, ತುಂಬಾ ಸಮಯದ ವಿಶ್ರಾಂತಿಯಿಂದ ಹೊರಬಂದಿದ್ದು, ಶೂಟಿಂಗ್‌ಗೆ ಮರಳಿದ್ದು, ಮತ್ತೆ ಕ್ಯಾಮೆರಾ ಮುಂದೆ ಬಂದು ನಟಿಸಲು ಖುಷಿಯಾಗುತ್ತಿದೆ ಎಂದಿದ್ದಾರೆ. ಅಂದಹಾಗೇ ಸದ್ಯ ವಿಶ್ರಾಂತಿ ತೆಗೆದುಕೊಂಡು ಸಿನಿಮಾ ಕಡೆ ಮುಖ ಮಾಡಿದ್ದಾರೆ. ಅನೇಕ ಹಿಟ್ ಸಿನಿಮಾಗಳನ್ನ ಕೊಟ್ಟ ಸೋನಾಲಿ ಮತ್ತಷ್ಟು ಹೊಸ ಹೊಸ ಚಿತ್ರಗಳಲ್ಲಿ ನಟಿಸಲು ಕಾತುರರಾಗಿದ್ದಾರೆ.

ಇನ್ನು ಸೋನಾಲಿ ಬೇಂದ್ರೆ ಪೋಸ್ಟ್‌ಗೆ ಬಾಲಿವುಡ್‌ ಗಣ್ಯರಾದ ಹೃತಿಕ್ ರೋಷನ್, ಕೋರಿಯೋಗ್ರಾಫರ್ ಫರಾ ಖಾನ್, ನಟಿ ದಿಯಾ ಮಿರ್ಜಾ, ಅಭಿಷೇಕ್ ಬಚ್ಚನ್, ಡಾಲರ್ ಮೆಹಂದಿ, ಕುನಾಲ್ ಕಪೂರ್ ಸೇರಿ ಹಲವು ಕಮೆಂಟ್ ಮಾಡಿ, ಶುಭಕೋರಿದ್ದಾರೆ.ಅಂದಹಾಗೇ ಕಳೆದ ಜುಲೈನಲ್ಲಿ ಸೋನಾಲಿ ಬೇಂದ್ರೆಗೆ ಕ್ಯಾನ್ಸರ್ ಇದೆ ಎಂಬ ಕಹಿ ಸುದ್ದಿ ಬಂತು. ಆದರೆ ನಟಿ ಸೋನಾಲಿ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಧೈರ್ಯವಾಗಿ ಅದನ್ನು ಹೆದರಿಸಿದ್ದಾರೆ,ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ. ಚಿಕಿತ್ಸೆಗೆಂದು ಆಗಾಗ್ಗ ನ್ಯೂಯಾರ್ಕ್ ಗೆ ಹೋಗಿ ಹೋಗಿ ಬರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Edited By

Kavya shree

Reported By

Kavya shree

Comments