ಜೂನಿಯರ್ ಸಿಂಡ್ರೆಲಾಳ ಹಾರೈಕೆ ನೋಡಿಕೊಂಡ ಅಕ್ಕನಿಗೆ ಮಿಸ್ಟರ್-ಮಿಸಸ್ ರಾಮಾಚಾರಿ ವಿಶಸ್…!

05 Feb 2019 1:08 PM | Entertainment
4451 Report

ಅಂದಹಾಗೇ ಸ್ಯಾಂಡಲ್’ವುಡ್ ನ ಕ್ಯೂಟ್ ಕಪಲ್ ಯಶ್ ಅಂಡ್ ರಾಧಿಕಾ ಇಂದು ಒಬ್ಬರಿಗೆ ವಿಶೇಷವಾಗಿ ಶುಭ ಹಾರೈಸಿ ಧನ್ಯವಾದ ಅರ್ಪಿಸಿದ್ದಾರೆ. ಅಂದಹಾಗೇ ಅವರು ನಮ್ಮ ಲೈಫ್ನಲ್ಲಿ ಬಹಳ ಮುಖ್ಯ ಪಾತ್ರವಹಿಸಿದ್ದಾರೆ ಎಂದು ಕೊಂಡಾಡಿದ್ದಾರೆ. ಯಶ್ ಅಂಡ್ ರಾಧಿಕಾ ಮದುವೆಯಾಗಿ ಎರಡು ವರ್ಷಗಳು ಕಳೆದಿವೆ. ಸದ್ಯ ಯಶ್ ಫ್ಯಾಮಿಲಿಗೆ ಮಗಳ ಆಗಮನವಾಗಿದೆ. ಈ ದಿನ ತಮ್ಮ ಮಗಳನ್ನು ಸುರಕ್ಷಿತವಾಗಿ ತಮ್ಮ ಮಡಿಲಿಗೆ ಸೇರಿಸಿದ ಡಾ. ಸ್ವರ್ಣಲತಾ ಅವರನ್ನು ನೆನೆದು ಶುಭಾಶಯ ತಿಳಿಸಿದ್ದಾರೆ. ಡಾಕ್ಟರ್ ಸ್ವರ್ಣ ಲತಾ ಅವರ ಹುಟ್ಟಿದ ದಿನ. ರಾಧಿಕಾ ಪಂಡಿತ್ ತಮ್ಮ ಫೇಸ್’ಬುಕ್ ಪೇಜ್ ನಲ್ಲಿ  ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. ಡಿಸೆಂಬರ್ 2 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ರಾಧಿಕಾ ಪಂಡಿತ್  ಆರೋಗ್ಯವನ್ನು ಚೆನ್ನಾಗಿ ನೋಡಿಕೊಂಡು, ಹೆರಿಗೆ ಮಾಡಿಸಿದ ಸ್ವರ್ಣಲತಾಗೆ ಆಸ್ಪತ್ರೆಯಿಂಣದ ತೆರಳುವಾಗ ಯಶ್ ಮತ್ತು ರಾಧಿಕಾ ಧನ್ಯವಾದ ತಿಳಿಸಿದ್ದರು. ಇದೀಗ ತಮ್ಮ ಫ್ಯಾಮಿಲಿಯಲ್ಲಿನ ಸದಸ್ಯರಂಥೇ ಅವರನ್ನು ಟ್ರೀಟ್ ಮಾಡಿದ್ದಾರೆ. ಅವರೊಂದಿಗೆ ತೆಗಿಸಿಕೊಂಡ ಫೋಟೋವೊಂದನ್ನು ಪೋಸ್ಟ್ ಮಾಡಿಸಿದ್ದಾರೆ.ಒಬ್ಬರ ಜೀವನದಲ್ಲಿ ವೈದ್ಯರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನನ್ನ ಗರ್ಭಾವಸ್ಥೆಯಲ್ಲಿ ಹಾಗೂ ನನ್ನ ಹೆರಿಗೆಯ ಸಮಯದಲ್ಲಿ ಇಂತಹ ಅದ್ಭುತ ವ್ಯಕ್ತಿ ಸಿಕ್ಕಿರುವುದು ನಮ್ಮ ಅದೃಷ್ಟ. ಡಾ. ಸ್ವರ್ಣಲತಾ ನೀವು ನಮಗೆ ವೈದ್ಯರಿಕ್ಕಿಂತ ಹೆಚ್ಚು. ನನ್ನ ಗರ್ಭಾವಸ್ಥೆಯ ಸಮಯದಲ್ಲಿ ನೀವು ನನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಯಿದ್ದು, ನನ್ನ ಪಯಣವನ್ನು ಸುಂದರವಾಗಿಸಿದ್ದೀರಿ. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಅದು ಕಡಿಮೆ ಆಗುತ್ತದೆ. ನಾನು ಹಾಗೂ ಯಶ್ ನಿಮ್ಮನ್ನು ಪ್ರೀತಿಸುತ್ತೇವೆ ಹಾಗೂ ಆರಾಧಿಸುತ್ತೇವೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಅಕ್ಕ. ಲವ್ ಯೂ ಎಂದು ಪೋಸ್ಟ್ ಮಾಡಿದ್ದಾರೆ.

ರಾಧಿಕಾ ಪಂಡಿತ್  ತಾಯಿಯಾದ ಬಳಿಕ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಮೊದಲಿಗೆ ಮಗು ಹಿಡಿದುಕೊಳ್ಳುವುದು ಗೊತ್ತಿರಲಿಲ್ಲ. ಅಮ್ಮ ಹೇಳಿಕೊಟ್ಟ ಬಳಿಕ ಮಗುವನ್ನು ಎತ್ತಿಕೊಂಡೆ. ಮಗಳು ಬಂದ ನಂತರದ ಜೀವನ ಸಂಪೂರ್ಣ ಬದಲಾದಂತೆ ಆಗುತ್ತಿದೆ. ಪ್ರತಿಯೊಂದು ಕ್ಷಣವೂ ರೋಮಾಂಚನವನ್ನು ಉಂಟುಮಾಡಿದೆ ಎಂದು ಹೇಳುವ ತಾಯ್ತನದ ಹಿತವನ್ನು ಹಂಚಿಕೊಂಡಿದ್ದರು.

Edited By

Kavya shree

Reported By

Kavya shree

Comments