ಬಿಗ್’ಬಾಸ್ ಮನೆಯ ಮುಖವಾಡ ಬಿಚ್ಚಿಟ್ಟ ಸೀಸನ್-6 ಸ್ಪರ್ಧಿ....!!!

05 Feb 2019 10:57 AM | Entertainment
6199 Report

ಅಂದಹಾಗೇ ಬಿಗ್ ಬಾಸ್ ಶೋ ಮುಗಿದ್ರೂ ಅದ್ರ ಹವಾ ಮಾತ್ರ ಕಡಿಮೆಯಾಗಿಲ್ಲ. ಸ್ಕ್ರಿಪ್ಟೆಡ್ ಶೋ ಅಂತಾ ಹಲವು ಜನ ಹೇಳಿದ್ದರೂ ಬಿಗ್ಬಾಸ್ ಗೆ ಹೋದ ಸ್ಪರ್ಧಿಗಳ ಬಾಯಲ್ಲಿ ಬರೋ ಮಾತೇ ಬೇರೆ. ಬಿಗ್ ಬಾಸ್ ಸೀಸನ್ -6  ಮುಕ್ತಾಯವಾಗಿದೆ. ಮಾರ್ಡನ್ ರೈತ ಶಶಿಕುಮಾರ್ ಅವರು ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಈ ಬಗ್ಗೆ ಅನೇಕ ಚರ್ಚೆಗಳು  ಸೃಷ್ಟಿಯಾದವು. ಆದರೆ ಟಾಪ್-5 ನಲ್ಲಿದ್ದ ರ್ಯಾಪಿಡ್ ರಶ್ಮಿ ಸದ್ಯ ಬಿಗ್ ಬಾಸ್ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಶೋ ನ ಕೆಲವೊಂದಿಷ್ಟು ಬೇಸರಗಳನ್ನು ಕೂಡ ತೋಡಿಕೊಂಡಿದ್ದಾರೆ.

ಅಂದಹಾಗೇ ಇತರ ಸ್ಪರ್ಧಿಗಳಿಗೆ ಕಂಪೇರ್ ಮಾಡಿದ್ರೆ ಬಿಗ್ಬಾಸ್ ನನ್ನನ್ನು  ಪ್ರೊಜೆಕ್ಟ್ ಮಾಡಿದ ರೀತಿಯೇ ಬೇರೆಯದ್ದೇ ಆಗಿತ್ತು. ಬಿಗ್ ಬಾಸ್ ಮನೆಯಲ್ಲಿ ತೋರಿಸಿದ ಬಿಗ್ಬಾಸ್ ಜರ್ನಿ ವಿಟಿ ನನಗೆ ಇಷ್ಟ ಆಗಲಿಲ್ಲ. ಅದರಲ್ಲೂ ಅಕ್ಷತಾ –ರಾಕೇಶ್ ರನ್ನು ನೋಡಿದ ರೀತಿಯೇ ಬೇರೆಯದ್ದು ಆಗಿತ್ತು. ಕವಿತಾ-ಶಶಿ ಅವರನ್ನು ಪ್ರೊಜೆಕ್ಟ್ ಮಾಡಿದ ರೀತಿಯೇ ಬೇರೆಯದ್ದಾಗಿತ್ತು ಎಂಬುದು ರ್ಯಾಪಿಡ್ ರಶ್ಮಿಯ ಬೇಸರ. ಬೇಕಂತಲೇ ಇವರಿಬ್ಬರನ್ನು ಟಾಪ್’ಗೆ ಕರೆತರಲಾಗಿದ್ಯೇನೋ ಎಂಬ ಅನುಮಾನ ನನಗೂ ಮೂಡುತ್ತದೆ.ಬಿಗ್ಬಾಸ್ ಮನೆಯಿಂದ ಹೊರಗೆ ಬಂದಮೇಲೆ ತಮ್ಮನ್ನು ಪ್ರೊಜೆಕ್ಟ್ ಮಾಡಿರುವ ರೀತಿ ಬಗ್ಗೆ ಕೆಲವು ಸ್ಪರ್ಧಿಗಳಿಗೆ ಅಸಮಾಧಾನ ಇದೆ. ಅದರಲ್ಲೂ ನಾನು ಒಬ್ಬಳು. 

ವೀಕೆಂಡ್’ನಲ್ಲಿ ಧನರಾಜ್ ಮತ್ತು ಕವಿತಾ , ಶಶಿರನ್ನು ಪ್ರೊಟೆಕ್ಟ್ ಮಾಡಿದ ರೀತಿ ನೋಡಿದ್ರೆ ಬೇಸರ ಆಗ್ತಾಯಿತ್ತು. ಅಂದಹಾಗೇ ಸಂದರ್ಶನದಲ್ಲಿ ಅವರು, ಆ ಮೂರು ಜನರ ದ್ವಂದ್ವ ನಿಲುವು, ಅವರ ಎರಡು ಮುಖಗಳನ್ನು ನೋಡಿದ್ದೆ, ಆದರೆ ಅದನ್ನು ವೀಕೆಂಡ್ ನಲ್ಲಿ ತೋರಿಸ್ತಾ ಇರಲಿಲ್ಲ. ಅಲ್ಲಿಯೇ ಬೇರೆಯದ್ದೇ ಏನೋ ಮಾತಿತ್ತು. ಬೇಕಂತಲೇ ಅವರನ್ನು ಪ್ರೊಟೆಕ್ಟ್ ಮಾಡ್ತಿದ್ದಾರೆ ಅಂತಾ ಅನಿಸಿತು ಎಂದಿದ್ದಾರೆ.  ನಿಮ್ಮ ಯಾವ ಕ್ಯಾರೆಕ್ಟರ್’ನ್ನು ಗುರುತಿಸಿ ಮನೆಯೊಳಗೆ ಕಳುಹಿಸುತ್ತಾರೆ. ಅದನ್ನೇ ಬಿಗ್ ಬಾಸ್ ಕನ್ನಡಿಯಲ್ಲಿ ತೋರಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ನನ್ನ ಬೆನ್ನ ಹಿಂದೆ ಇಷ್ಟೊಂದು ಮಾತನಾಡಿದ್ದಾರೆ ಎಂದು ನನಗೆ ಗೊತ್ತೇ ಇರಲಿಲ್ಲ. ವಿಟಿ ನೋಡಿದಮೇಲೆ ನನಗೆ ತುಂಬಾ ಬೇಸರವಾಯ್ತು ಎಂದಿದ್ದಾರೆ. ಈಗಾಗಲೇ ಬಿಗ್ ಬಾಸ್ ಅಭಿಮಾನಿಗಳು ಬಿಗ್ಬಾಸ್ ಸ್ಕ್ರಿಪ್ಟೆಡ್ ಶೋ, ಬೇಕಾದವರನ್ನೇ ವಿನ್ನರ್ ಅಂತಾ ಅನೌನ್ಸ್ ಮಾಡ್ತಾರೆ ಎಂಬೆಲ್ಲಾ ಕಮೆಂಟ್ ಹಾಕ್ತಿರುವ ಮಧ್ಯೆ ಬಿಗ್ ಬಾಸ್ ಮನೆಯೊಳಗೆ ಹೋದ ಸ್ಪರ್ಧಿಗಳು ಕೂಡ ಹೇಳೋದು ಸ್ವಲ್ಪ ಸಿಂಕ್ ಆಗ್ತಿದೆಯೇನೋ ಅನಿಸುತ್ತೆ. ಬಿಗ್ಬಾಸ್ ಮನೆಯಲ್ಲಿಯ ಸ್ಪರ್ಧಿಯೊಬ್ಬರು ರಶ್ಮಿಯನ್ನು ಯಾವ ಕಸದ ತೊಟ್ಟಿಯಿಂದ ಬಂದಿದ್ದಾಳೆ ಎಂಬ ಮಾತು ರಶ್ಮಿ ಮನಸ್ಸಿಗೆ ಹರ್ಟ್ ಮಾಡಿದ್ಯಂತೆ.

Edited By

Kavya shree

Reported By

Kavya shree

Comments