ಕೆಲವು ವರ್ಷಗಳ ಹಿಂದೆ ಮಿನಿಮಮ್ ಬ್ಯಾಲೆನ್ಸ್ ಗೂ ಪರದಾಡುತ್ತಿದ್ದ ಈತ ಈಗ ಶ್ರೀಮಂತ ಸ್ಟಾರ್ ನಟ..!!

05 Feb 2019 9:38 AM | Entertainment
429 Report

ಲಕ್ ಅನ್ನೋದು ಯಾವಾಗ ಹೇಗೆ ಬದಲಾಗುತ್ತೋ ಅನ್ನೊದೆ ಗೊತ್ತಾಗಲ್ಲ…. ಇವತ್ತು ಶ್ರೀಮಂತ ಆದವನು ನಾಳೆ ಬಿಕಾರಿಯಾಗಬಹುದು..ಇವತ್ತು ಬಿಕಾರಿಯಾಗಿರುವವರು,ನಾಳೆ ಶ್ರೀಮಂತರಾಗಬಹುದು.. ಯಾವತ್ತು ಯಾರೋ ಹೇಗೆ  ಇರುತ್ತಾರೆ, ಹೇಗೆ ಬದಲಾಗುತ್ತಾರೆ ಅನ್ನೋದೆ ಗೊತ್ತಾಗಲ್ಲ… ಆದರೆ ಇಲ್ಲೊಬ್ಬ ಸ್ಟಾರ್ ನಟ ಕೇವಲ 4 ವರ್ಷಗಳ ಹಿಂದೆ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಳ್ಳಲು ಪರದಾಡುತ್ತಿದ್ದ. ಆದರೆ ಇಂದು ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂದರೆ ನೀವು ನಂಬಲೇ ಬೇಕು..

ಇದೀಗ ಫೋರ್ಬ್ ಇಂಡಿಯಾ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ್ ದೇವರಕೊಂಡ 30 ನೇ ಸ್ಥಾನ ಪಡೆದುಕೊಂಡಿದ್ದಾರೆ. ಆಂಧ್ರ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದ ವಿಜಯ ದೇವರಕೊಂಡ 4 ವರ್ಷಗಳ ಹಿಂದೆ ಮಿನಿಮಮ್ ಬ್ಯಾಲೆನ್ಸ್ ಗಾಗಿ ಪರದಾಡುತ್ತಿದ್ದರು. ಬ್ಯಾಂಕ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ಖಾತೆಯನ್ನು ಬಂದ್ ಮಾಡಲಾಗುವುದು ಎಂದು ಅವರ ತಂದೆ ಎಚ್ಚರಿಕೆ ಕೂಡ ನೀಡಿದ್ದರು. 4 ವರ್ಷದಲ್ಲಿ ಎಲ್ಲವೂ ಬದಲಾಗಿದೆ.

'ಅರ್ಜುನ್ ರೆಡ್ಡಿ' ಭರ್ಜರಿ ಯಶಸ್ಸು, 'ಗೀತ ಗೋವಿಂದಂ' ಬಿಗ್ ಸಕ್ಸಸ್ ವಿಜಯ್ ದೇವರಕೊಂಡ ಅವರನ್ನು ಸ್ಟಾರ್ ನಟರ ಸಾಲಿಗೆ ಸೇರಿಸಿವೆ. ಫೋರ್ಬ್ ಇಂಡಿಯಾ ಪಟ್ಟಿಯಲ್ಲಿ ತಾವು 30 ನೇ ಸ್ಥಾನ ಪಡೆದುಕೊಂಡಿರುವ ಬಗ್ಗೆ ವಿಜಯ ದೇವರಕೊಂಡ ತಿಳಿಸಿದ್ದು 4 ವರ್ಷಗಳ ಹಿಂದಿನ ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಯಶಸ್ಸಿಗೆ ಎಲ್ಲರು ಕೂಡ  ಅಭಿನಂದನೆಗಳ ತಿಳಿಸಿದ್ದಾರೆ.. ಗೀತ ಗೋವಿಂದಂ ಸಿನಿಮಾದ ನಂತರ ವಿಜಯ್ ಒಳ್ಳೆ ನೇಮು ಪೇಮು ಗಳಿಸಿದ್ದರು…

Edited By

Manjula M

Reported By

Manjula M

Comments