'ಸೀತಾ ರಾಮ ಕಲ್ಯಾಣ'ದ ಆರ್ಯ ಮತ್ತು ಗೀತಾಳ ಸ್ಟೇಟ್'ಮೆಂಟ್ ಸೇಮ್ ಟೂ ಸೇಮ್...!!!

04 Feb 2019 6:03 PM | Entertainment
208 Report

ಸೀತಾರಾಮ ಕಲ್ಯಾಣ  ಸಿನಿಮಾ ಸದ್ಯ ಹೌಸ್’ಫುಲ್ ಆಗಿದೆ. ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಸಿನಿಮಾ ಆಡಿಯೋ ಸೂಪರ್ ಹಿಟ್ ಆಗಿದೆ. ಜನ ನಿಖಿಲ್ ಕುಮಾರಸ್ವಾಮಿ ಮತ್ತುಡಿಂಪಲ್ ಕ್ವೀನ್ ಜೋಡಿಯನ್ನು ಮೆಚ್ಚಿದ್ದಾರೆ. ರೀಲ್ ನಲ್ಲಿ ಇಬ್ಬರ ಕೆಮಿಸ್ಟ್ರಿ ತುಂಬ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾ ಹಿಟ್ ಆಗುತ್ತಿದ್ದಂತೇ ರಚ್ಚು ಮದುವೆ ವಿಚಾರ ಜೋರು ಸದ್ದು ಮಾಡುತ್ತಿದೆ. ಪ್ರೆಸ್ ಮೀಟ್’ಗಳಲ್ಲಿ ರಚಿತಾ ಹೋದ ಕಡೆಯೆಲ್ಲಾ ಹುಡುಗ, ಲವ್, ಮದುವೆ ಬಗ್ಗೆ ಹೆಚ್ಚು ಮಾತು. ಅಂದಹಾಗೇ ಇತ್ತೀಚಿಗೆ ಮದುವೆ ಬಗ್ಗೆ ಗ್ರೀನ್ ಸಿಗ್ನಲ್ ಕೊಟ್ಟ ರಚಿತಾ ರಾಂ ನನಗೆ ಗೌಡ್ರು ಹುಡುಗನೇ ಬೇಕು. ನಾವು ಗೌಡರು ಆಗಿದ್ದಕ್ಕೆ ನನ್ನ ಪ್ರಾಶಸ್ತ್ಯ ಗೌಡರ ಮನೆ ಹುಡಗನಿಗೆ ಎಂದಿದ್ದರು. ಈ ಹೇಳಿಕೆ ಕೊಟ್ಟ ಬೆನ್ನಲ್ಲೇ ಅನೇಕ ಊಹಾಪೋಹಾಗಳು  ಸೃಷ್ಟಿಯಾದವು. ಅಂದಹಾಗೇ ಸೀತಾರಾಮ ರಿಲೀಸ್ ಆದಾಗ  ಈ ಸ್ಟೇಟ್ಮೆಂಟ್ ಹೇಳಿದ ರಚ್ಚುಗೆ ಹುಡುಗ ಫಿಕ್ಸ್ ಆಗಿರಬಹುದೆಂಬ ಅನುಮಾನ ಕೂಡ ಬರತೊಡಗಿತು.

ಸದ್ಯಇದೀಗ ಇದಕ್ಕೆ ಪೂರಕವೆಂಬಂತೆ ರಚಿತಾ ಮತ್ತು ನಿಖಿಲ್ 'ಮಜಾ ಟಾಕೀಸ್'ನಲ್ಲಿ ಬಂದಿದ್ದಾಗ, ಻ವರ ಆ್ಯಕ್ಷನ್ ಮತ್ತು ರಿಯಾಕ್ಷನ್ ಮತ್ತಷ್ಟು ಊಹಾಪೋಹಗಳಿಗೆ ಎಡೆ ಮಾಡಿ ಕೊಟ್ಟಿವೆ.ಕಾರ್ಯಕ್ರಮಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಸೃಜನ್ ಕಾಲೆಳೆದು ನಗಿಸುತ್ತಿದ್ದರು. ಇಬ್ಬರು ಸೇಮ್ ಕಲರ್ ಡ್ರೆಸ್ ತೊಟ್ಟಿರುವುದು ಗಮನಕ್ಕೆ ಬಂತು. 'ಆಗಲೇ ನಮ್ಮಿಬ್ಬರ ಕಾಂಬಿನೇಷನ್ ಕ್ಲಾಸ್- ಮಾಸ್..' ಎಂದು ನಿಖಿಲ್ ಹೇಳಿದ್ದು ಯಾವುದರ ಸುಳಿವು ಎಂಬುವುದು ಗೊತ್ತಾಗಲಿಲ್ಲ. ಅಂದಹಾಗೇ ನಿಖಿಲ್ ಕುಮಾರಸ್ವಾಮಿ ಅವರು ಕ್ಯಾಶ್ಯುಯಲ್ ಆಗಿ ಮಾತನಾಡಿರಬಹುದು ಎಂದರೂ, ರಚಿತಾ ಡಯೆಟ್ ವಿಚಾರವಾಗಿ ಹೇಳಿದ ಮಾತು  ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.  ಅಂದಹಾಗೇ ಅಂತದ್ದೇನು  ಹೇಳಿದ್ದಾರೆ ಡಿಂಪಲ್ ಕ್ವೀನ್ ಅಂತೀರಾ…?!

ಡಯೆಟ್ ವಿಚಾರವಾಗಿ ಮಾತನಾಡುತ್ತಾ ರಚ್ಚು, ನಾನು ಸಿನಿಮಾ ಮಾಡುವಾಗ ಇದನ್ನೆಲ್ಲಾ ಮ್ಯಾಂಟೇನ್ ಮಾಡಲಿಲ್ಲ.ನನಗೆ ಐಸ್ ಕ್ರೀಂ ತಿನ್ನಬೇಕು ಅಂತಾ ಅನಿಸಿತು. ನನಗೆ ಚಾಕಲೇಟ್ ಫ್ಲೇವರ್ ಇಷ್ಟ, ಸರಿ ಅಂತಾ ನಿಖಿಲ್ ಗೆ ಸೂಟಿಂಗ್ ಸ್ಪಾಟ್ ನಲ್ಲೇ ಹೇಳಿದೆ. ನನಗೆ ಯಾಕೋ ಐಸ್ ಕ್ರೀಂ ತಿನ್ನಬೇಕು ಅಂತಾ ಅನಿಸ್ತಿದೆ ಅಂತಾ, ಸರಿ ಅವರು ತರಿಸಿಕೊಟ್ರು ಎಂದು ಹೇಳಿದರು.  ಅದಕ್ಕೆ ಸೃಜನ್ , ನಿಖಿಲ್’ಗೆ ನಿಮಗೆ ಯಾವ ಐಸ್ ಕ್ರೀಂ ಅಂತಾ ಹೇಳಿದ್ರೆ ನನಗೆ ಚಾಕಲೇಟ್ ಇಷ್ಟ ಅಂಥಾನೇ ಹೇಳಿದ್ರು .ಬೇರೆ ಯಾವ ಆಪ್ಶನ್ ಇಲ್ವಲ್ಲಾ ಎಂದು ನಕ್ಕಿದ್ದಾರೆ. ಅಂದಹಾಗೇ ಇವರಿಬ್ಬರ ಮಾತಿನ  ಕಾಂಬಿನೇಷನ್ ನೋಡಿದ್ರೆ ಏನೋ ಸಿಂಕ್ ಆಗ್ತಿದೆ ಎಂಬುದು ಚಿತ್ರಾಭಿಮಾನಿಗಳ ಅಭಿಪ್ರಾಯ. ಯಾಕೆ ನಿಖಿಲ್ ಗೆ ಬೇರೆ ಐಸ್ ಕ್ರೀಂ ಇಷ್ಟವಾಗಬಹುದಿತ್ತಲ್ವಾ, ಅದೂ ಸರಿ ಬೇರೆ ಆಪ್ಶನ್ ಇಲ್ಲಾ ಅಂತಾ ಯಾಕೆ ಹೇಳಿದ್ರು ಇದೆಲ್ಲಾ ಮಿಲಿಯನ್ ಡಾಲರ್ ಪ್ರಶ್ನೆ. ಒಟ್ಟಾರೆ ರಚ್ಚು, ಗೌಡ್ರು ಹುಡುಗನೇ ಬೇಕು ಎಂಬ ಸ್ಟೇಟ್ ಮೆಂಟ್ ಗೂ ಮಜಾ ಟಾಕೀಸ್ ನ ಲ್ಲಿ ಇಬ್ಬರ ಮಾತಿನ ಕಾಂಬಿನೇಷನ್ ಗೂ  ಏನೋ ಸಂಬಂಧವಿದೆ ಎಂದು ಚಿತ್ರರಸಿಕರ ಕ್ಯಾಲ್ಯುಕ್ಲೇಷನ್.

Edited By

Kavya shree

Reported By

Kavya shree

Comments