ಕೊನೆಗೂ 'ಕುರುಕ್ಷೇತ್ರ' ರಿಲೀಸ್ ಡೇಟ್ ಫಿಕ್ಸ್..!? ಯಾವಾಗ ಗೊತ್ತಾ..?

04 Feb 2019 3:47 PM | Entertainment
387 Report

ಚಂದನವನದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿರುವ ಚಿತ್ರಗಳ ಪೈಕಿ ಕುರುಕ್ಷೇತ್ರ ಚಿತ್ರ ಕೂಡ.. ಈ ಚಿತ್ರ ಯಾವಾಗ  ರಿಲೀಸ್ ಆಗುತ್ತದೆಯೋ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ… ಚಿತ್ರ ತಂಡ ಮಾತ್ರ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎಂಬ ಮಾಹಿತಿಯನ್ನು ಹೊರಬಿಟ್ಟಿರಲಿಲ್ಲ..  ರಾಜಕೀಯ ಆಟದಲ್ಲಿ ಈಗ ಕುರುಕ್ಷೇತ್ರ ಚಿತ್ರವನ್ನೇ ನಿರ್ಮಾಪಕರು ಪಣಕ್ಕಿಟ್ಟಿದ್ದಾರೆ…. ಇದೀಗ, ಕುರುಕ್ಷೇತ್ರ ಚಿತ್ರವನ್ನೇ ಪಣಕ್ಕಿಟ್ಟು ಬೆಟ್ಟಿಂಗ್ ಕಟ್ಟಿದ್ದಾರೆ ನಿರ್ಮಾಪಕ ಮುನಿರತ್ನ ಇದೀಗ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಘೋಷಿಸಿದ್ದಾರೆ. 

ಕುರುಕ್ಷೇತ್ರ ಯಾವಾಗ, ಯಾವಾಗ ಎಂದು ಕೇಳುತ್ತಿದ್ದವರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ಕುರುಕ್ಷೇತ್ರ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದ್ದು, ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಮುನಿರತ್ನ ಅವರೇ ಹೇಳಿರುವಂತೆ ಕುರುಕ್ಷೇತ್ರ ಸಿನಿಮಾ ಏಪ್ರಿಲ್ 5  ರಂದು ತೆರೆಕಾಣಲಿದೆಯಂತೆ. ಅದಕ್ಕೂ ಮುಂಚೆ ಚಿತ್ರದ ಆಡಿಯೋ ರಿಲೀಸ್ ಸಮಾರಂಭ ನಡೆಯಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.. ಎರಡು ವಾರದ ಹಿಂದೆ ಮಾತನಾಡಿದ್ದ ನಿರ್ಮಾಪಕ ಮುನಿರತ್ನ ಅವರು, ಸದ್ಯ ನಾಲ್ಕು ಭಾಷೆಯಲ್ಲಿ ಕುರುಕ್ಷೇತ್ರ ಡಬ್ಬಿಂಗ್ ನಡೆಯುತ್ತಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಎಂದು ತಿಳಿಸಿದ್ದರು. ನಂತರ ಉತ್ತರ ಭಾರತದ ಭಾಷೆಯಲ್ಲೂ ಡಬ್ಬಿಂಗ್ ಕೆಲಸ ಆರಂಭವಾಗಲಿದೆ ಎಂದಿದ್ದರು..ಒಟ್ಟಾರೆ ಡಿ-ಬಾಸ್ ಅಭಿಮಾನಿಗಳಿಗೆ ಸಖತ್ ಸಿಹಿ ಸುದ್ದಿಯನ್ನೆ ನೀಡಿದ್ದಾರೆ.

Edited By

Manjula M

Reported By

Manjula M

Comments