ಹೀರೋಯಿನ್ ಭಾನುಪ್ರಿಯಾ ಅರೆಸ್ಟ್...?!!! ಬಾಲಕಿ ವಿರುದ್ಧ ನಟಿ ಹೇಳಿದ್ದೇನು ಗೊತ್ತಾ...?

04 Feb 2019 3:02 PM | Entertainment
220 Report

ಅಂದಹಾಗೇ ನಟಿ ಭಾನುಪ್ರಿಯಾ ವಿರುದ್ಧ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದಾರೆಂಬ ಆರೋಪದ ಮೇಲೆ ದೂರು ದಾಖಲಾಗಿದೆ. ನಟಿ ವಿರುದ್ಧ ಬಾಲಕಿ ತಾಯಿ ದೂರು ನೀಡಿದ್ದಾರೆ. ಈ ಸಂಬಂಧವಾಗಿ ನಟಿ ಭಾನುಪ್ರಿಯಾ ಪ್ರತಿಕ್ರಿಯಿಸಿದ್ದು  ನಾನು ಯಾವ ಹುಡುಗಿಗೂ ಕಿರುಕುಳ ನೀಡಿಲ್ಲ, ಅಲ್ಲದೇ ಆಕೆಗೆ 18 ತುಂಬಿದ್ದು, ಮನೆ ಕೆಲಸ ಮಾಡುತ್ತಿದ್ದಳು. ನಮ್ಮ ಮನೆಯಲ್ಲಿಯೇ ಕಳ್ಳತನ ಮಾಡಿದ್ದಳು, ಇದೀಗ ನನ್ನ ವಿರುದ್ಧವೇ ದೂರು ದಾಖಲು ಮಾಡಿದ್ದಾರೆ.

ಕಳ್ಳತನ ಮಾಡಿ ತೆಗೆದುಕೊಂಡ ಹೋದ ವಸ್ತುಗಳನ್ನು ಮತ್ತೆ ವಾಪಸ್ ತೆಗೆದುಕೊಂಡು ಬರುವಂತೆ ಸೂಚಿಸಿದ್ದೆ, ಸ್ವಲ್ಪ ಗದರಿಸಿದ್ದಕ್ಕೆ  ಆಕೆ ಐಪಾಡ್, ಮೊಬೈಲ್ ಮತ್ತು ವಾಚ್ ನ್ನು ಮಾತ್ರ ನಮಗೆ ರಿಟರ್ನ್ ಮಾಡಿದ್ದಾಳೆ. ನಮ್ಮ ಮನೆಯಿಂದ ಮೌಲ್ಯಯುತವಾದ ವಸ್ತುಗಳನ್ನೇ ತೆಗೆದುಕೊಂಡು ಹೋಗಿದ್ದಾಳೆ ಎಂದು ತಿಳಿಸಿದ್ದಾರೆ. ಬಾಲಕಿ ತಾಯಿ ನನ್ನ ಬಳಿ ಹಣ ಹೊಡೆಯಲು ಸುಳ್ಳು ದೂರು ದಾಖಲಿಸಿದ್ದಾರೆ.ನಾನ್ಯಾಕೆ ಹೆದರಲೀ, ನನ್ನದೇನು ತಪ್ಪಿಲ್ಲವೆಂದಿದ್ದಾರೆ. ತಿಂಗಳಿಗೆ ಹತ್ತು  ಸಾವಿರ ರೂಪಾಯಿ ಸಂಬಳ ಕೊಡುವೆ ಎಂದು ನಟಿ ಭಾನುಪ್ರಿಯಾ ಸೇರಿಸಿಕೊಂಡಿದ್ದರು. ಆದರೆ ಕಳೆದ 18 ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಹುಡುಗಿಯ ತಾಯಿ ಆರೋಪಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಮಡು ತನಿಖೆ ನಡೆಸುತ್ತಿದ್ದಾರೆ.ಮಕ್ಕಳ ಹಕ್ಕು ಸಂರಕ್ಷಣಾ ಕಾರ್ಯಕರ್ತರಾದ ಅಚ್ಯುತ್ ರಾವ್ ಅವರು  ರಾಷ್ಟ್ರೀಯ ಮಕ್ಕಳ ಆಯೋಗ್ಕಕೆ ಪತ್ರ ಬರೆದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ, ಭಾನುಪ್ರಿಯಾ ಅವರನ್ನು ಬಂಧಿಸುವಂತೆಯೂ ಕೋರಿದ್ದಾರೆ. ಈ ಸಂಬಂಧವಾಗಿ ನಟಿ ಭಾನುಪ್ರಿಯಾ ಅರೆಸ್ಟ್ ಆಗುವ ಸಂಭವಿದೆ ಎನ್ನುತ್ತಿವೆ ಕೆಲ ಮೂಲಗಳು.

Edited By

Kavya shree

Reported By

Kavya shree

Comments