ಕನ್ನಡದ ರಿಯಾಲಿಟಿ ಶೋ ಜಡ್ಜ್ ಮೇಲೆ ಲೈಂಗಿಕ ಆರೋಪ…!!!

04 Feb 2019 9:55 AM | Entertainment
2583 Report

ಕನ್ನಡದ ಡ್ಯಾನ್ಸ್ ರಿಯಾಲಿಟಿ ಶೋ ವೊಂದರ  ಜಡ್ಜ್ ಮೇಲೆ ಇದೀಗ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಹಾಲಿವುಡ್’ನಲ್ಲಿ ಆದ ಮೀಟೂ ಅಬ್ಬರ ಸ್ಯಾಂಡಲ್’ವುಡ್ ನಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿತ್ತು.ಅದಕ್ಕೆ ತಾಜಾ ಉದಾಹಣೆ ನಟ ಅರ್ಜುನ್ ಸರ್ಜಾ ಮತ್ತು ನಟಿ ಶೃತಿ ಹರಿಹರನ್ ಪ್ರಕರಣ. ಕೋರ್ಟು ಮೆಟ್ಟಿಲೇರಿರುವ ಇಬ್ಬರು, ವಿಚಾರಣೆ ಹಂತದಲ್ಲಿದ್ದಾರೆ.  ಕನ್ನಡದ ಕೆಲ ಹಿರಿ-ಕಿರಿಯ ನಟಿಯರು  ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ  ಮಾಧ್ಯಮಗಳ ಮುಂದೆ, ಸಾರ್ವಜನಿಕವಾಗಿ  ಬಾಯಿ ಬಿಟ್ಟು ಮಾತನಾಡಿದ್ದಾರೆ. ಈಗ ಇಂತಹದ್ದೇ ಲೈಂಗಿಕ ದೌರ್ಜನ್ಯ ನನಗೂ ಆಗಿದೆ ಎಂದು ಡ್ಯಾನ್ಸರ್ ಒಬ್ಬರು ಆಪಾಧೀಸಿದ್ದಾರೆ.

ಬೆಂಗಳೂರು ಮೂಲದ ಡ್ಯಾನ್ಸರ್, ನೃತ್ಯ ಸಂಯೋಜಕ ಸಲ್ಮಾನ್ ಯೂಸುಫ್ ಖಾನ್ ವಿರುದ್ಧ ಸದ್ಯ  ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ.ಯೂಸುಫ್ ಖಾನ್ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ ನನ್ನನ್ನು ಓಲೈಸಿಕೊಳ್ಳಲು, ಬೇರೆ ಬೇರೆ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಯೂಸುಫ್ ಖಾನ್ ಜೊತೆ ಡ್ಯಾನ್ಸ್ ಮಾಡುತ್ತಿದ್ದ ಸಹ ನೃತ್ಯಗಾರ್ತಿ ಆರೋಪಿಸುತ್ತಾರೆ.ಈ ವಿಚಾರವಾಗಿ ಜನವರಿ 30ರಂದು ಮುಂಬೈ'ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಸಲ್ಮಾನ್ ಅಷ್ಟೇ ಅಲ್ದೇ ಆತನ ಸೋದರ ಸಂಬಂಧಿಯೂ ಕೂಡ  ನನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರು ಬೇರೆ ಬೇರೆ ಸ್ಥಳಗಳಲ್ಲಿ ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆಂದು ತಿಳಿಸಿದ್ದಾರೆ.ನಾನು ಕೂಡ ಡ್ಯಾನ್ಸರ್ ಆಗಿದ್ದು, ನೃತ್ಯ ಸಂಯೋಜಕ ಯೂಸೂಫ್ ಅವರನ್ನು ಮೀಟ್ ಮಾಡುವ ಸಂದರ್ಭ ನನಗೆ ಬಂದಿತ್ತು. ಅದರಂತೇ  2018 ಆಗಸ್ಟ್ ನಲ್ಲಿ ಸಲ್ಮಾನ್ ಮ್ಯಾನೇಜರ್ ಅವರನ್ನು ನಾನು ಸಂಪರ್ಕಿಸಿದೆ. ಈ ಸಮಯದಲ್ಲಿ ನಾನು ಲಂಡನ್ ನಲ್ಲಿದ್ದೆ. ಕೆಲ ದಿನಗಳ ನಂತರ ಅಂಧೇರಿಯ ಕಾಫಿ ಶಾಪ್ ನಲ್ಲಿ ಸಲ್ಮಾನ್ ಮತ್ತು ನಾನು ಭೇಟಿಯಾಗಿದ್ದೆ.

ಇದಾದ ಬಳಿಕ ಸಲ್ಮಾನ್ ಬಾಲಿವುಡ್ ಪಾರ್ಕ್, ದುಬೈನಲ್ಲಿ ತಮ್ಮೊಂದಿಗೆ ನರ್ತಿಸುವ ಅವಕಾಶ ನೀಡಿದ್ದರು. ಹೀಗೆ ಡ್ಯಾನ್ಸ್ ಮಾಡುವ ಸಂದರ್ಭದಲ್ಲಿ ಆತ ಮೈ –ಕೈ ಮುಟ್ಟಿ ಸ್ಪರ್ಶಿಸುತ್ತಾ ಅಸಭ್ಯವಾಗಿ ವರ್ತಿಸಿದನ್ನು ಪ್ರಶ್ನಿಸಿದ್ದಕ್ಕೆ ಬಾಲಿವುಡ್ ನಲ್ಲಿ ಇದೆಲ್ಲಾ ಕಾಮನ್ ಅಂತ ಹೇಳಿದ್ದರು. ಈ ಘಟನೆ ಬಳಿಕ ಮತ್ತೊಮ್ಮೆ ಸಲ್ಮಾನ್ ಮ್ಯಾನೇಜರ್ ಕರೆ ಮಾಡಿ ದುಬೈ ಕಾರ್ಯಕ್ರಮದ ಅವಕಾಶ ನೀಡಿದ್ದರು. ಆಗಸ್ಟ್ 30ರಂದು ಮತ್ತೊಂದು ಶೋಗಾಗಿ ನಮ್ಮ ಡ್ಯಾನ್ಸ್ ತಂಡವನ್ನು ಬಹರೈನ್ ಗೆ ಕಳುಹಿಸಲಾಯ್ತು.ವಿಮಾನ ನಿಲ್ದಾಣವೊಂದರಲ್ಲಿ ತಮ್ಮ ಸೋದರನನ್ನು ಪರಿಚಯಿಸಿದರು. ಆತ ಪ್ರಯಾಣದ ವೇಳೆ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ. ಇದಾದ ನಂತರ ಸಲ್ಮಾನ್ ನನಗೆ ಅನೇಕ ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದೆಲ್ಲಾ ಬಾಲಿವುಡ್ ನಲ್ಲಿ ಕಾಮನ್ ಅಡ್ಜ್ ಸ್ಟ್ ಮಾಡ್ಕೋ..ಹೊರಗಡೆ ಬಾಯಿ ಬಿಟ್ಟರೆ ಪರಿಣಾಮ ಸರಿಯಾಗಿರಲ್ಲ ಎಂದು ಕೂಡ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.ಈ ಸಂಬಂಧ ಮುಂಬೈನ ಅಂಧೇರಿಯ ಓಶಿವರಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಸಲ್ಮಾನ್ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಬಾಲಿವುಡ್‍ನಲ್ಲಿ ಕೆಲ ಚಿತ್ರಗಳಿಗೂ ನೃತ್ಯ ಸಂಯೋಜನೆ ಮಾಡಿದ್ದಾರೆ. ಕನ್ನಡದ ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋವೊಂದರ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ. ಮಹಿಳೆಯ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Edited By

Kavya shree

Reported By

Kavya shree

Comments