ಜೂನಿಯರ್ ದರ್ಶನ್ ನೋಡಿ ಕಕ್ಕಾಬಿಕ್ಕಿಯಾದ ಡಿಂಪಲ್ ಕ್ವೀನ್ ರಚಿತಾರಾಂ…!!!

01 Feb 2019 5:29 PM | Entertainment
1900 Report

ಇತ್ತೀಚಿಗೆ  ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಟಾಕ್ ಆದ ರಿಯಾಲಿಟಿ ಶೋ ಪ್ರೋಮೋ ಮಜಾಭಾರತ. ಸದ್ಯ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾಭಾರತ  ರಿಯಾಲಿಟಿ ಶೋಗೆ ಬಂದ ಸ್ಪರ್ಧಿ ಯೊಬ್ಬರನ್ನುನೋಡಿ ಕ್ಷಣ ಹೊತ್ತು ಅವಕ್ಕಾದ್ರು ಡಿಂಪಲ್ ಕ್ವೀನ್ ರಚಿತಾ ರಾಂ.ನೋಡಲು ಸ್ಯಾಂಡ್’ಲ್ವುಡ್ ನಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ರಂತೇ ಕಾಣುವ  ಅವಿನಾಶ್ ಎಂಬ ಸ್ಪರ್ಧಿ ನೋಡಿ, ಮಜಾ ಭಾರತ ಶೋ ತೀರ್ಪುಗಾರರಾದ  ಗುರುಕಿರಣ್ ಮತ್ತು ರಚಿತಾ ರಾಂ ಆಶ್ಚರ್ಯಗೊಂಡಿದ್ದಂತೂ ನಿಜ.

ದರ್ಶನ್ ಅವರ ಬಾಡಿ ಲಾಂಗ್ವೇಜ್, ದರ್ಶನ ಅವರ ಸ್ಟೈಲ್, ಖದರ್ , ವಾಯ್ಸ್ ಎಲ್ಲವನ್ನು ನೋಡಿ ಡಿಂಪಲ್ ಕ್ವೀನ್ ತಡವರಿಸಿಬಿಟ್ಟರಂತೆ.  ಆಟೋ ಡ್ರೈವರ್ ವೃತ್ತಿ ಮಾಡಿಕೊಂಡಿರುವ ಅವಿನಾಶ್ ಮೂಲತಃ ಚಿಕ್ಕಮಂಗಳೂರಿನವರು. ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅವರನ್ನು ಇಮಿಟೇಟ್ ಮಾಡಿ  ವಿಡಿಯೋ ಶೇರ್  ಮಾಡುತ್ತಿದ್ದರು. ಇವರನ್ನು ನೋಡಿಯೇ ಕಲರ್ಸ್ ಸೂಪರ್ ವಾಹಿನಿ ಅವರನ್ನು ಈ ಶೋಗೆ ಭಾಗವಹಿಸಲು ಅವಕಾಶ ಕೊಟ್ಟಿದ್ದಾರೆ.

ಅವಿನಾಶ್ ನೋಡಿ ಹೀಗೂ ಉಂಟಾ ಎಂದು ರಚಿತಾ ರಾಂ ಬಾಯಿಬಿಟ್ಟಿದಂತೂ ನಿಜ. ಕೆಲವರು ತಮ್ಮ ನೆಚ್ಚಿನ ಸ್ಟಾರ್'ಗಳನ್ನು ನೋಡುತ್ತಾ, ಅವರ ಹಾವ-ಭಾವ ಅಭ್ಯಾಸ ಮಾಡಿಕೊಳ್ಳುತ್ತಾ,ಅವರನ್ನು ಅನುಸರಿಸುತ್ತಾ ಅವರ ಹಾಗೇ  ನಡೆದುಕೊಳ್ಳುತ್ತಿರುತ್ತಾರೆ. ಮಜಾ ಭಾರತ ರಿಯಾಲಿಟಿ ಶೋ ನಲ್ಲಿ ಜೂನಿಯರ್ ದರ್ಶನ್ ನೋಡಿ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಕೂಡ ಮೂಗಿನ ಮೇಲೆ ಬೆರಳಿಟ್ಟಿದ್ದೂ ಸುಳ್ಳಲ್ಲ. ಅಂದಹಾಗೇ ದರ್ಶನ್ ಚಾಲೆಂಜಿಂಗ್ ಸ್ಟಾರ್ ಅವರ ಬಳಿ ರಚಿತಾ ರಾಂ  ನಿಮ್ಮ ಹೈಟು, ವ್ಹೇಟು ಯಾರಿಗೂ ಬರಲ್ಲ. ನಿಮ್ಮ ಸ್ಟೈಲು, ಸ್ಮೈಲಿಗೆ ಯಾರು ಸರಿಸಾಟಿಯಿಲ್ಲ ಅಂತಾ ಹೇಳ್ತಿದ್ರಂತೆ.. ಅವಿನಾಶ್, ದರ್ಶನ್ ಹೈಟ್ ಇಲ್ಲದೇ ಹೋದ್ರು,  ದರ್ಶನ್ ಅವರ ಪಕ್ಕಾ ಸ್ಟೈಲ್ ಇಮಿಟೇಟ್ ಮಾಡೋದ್ರಲ್ಲಿ ನಿಸ್ಸೀಮ. ಜೂನಿಯರ್ ಅಂಬರೀಶ್, ಜೂ, ರಾಜ್ ಕುಮಾರ್, ಜೂ, ವಿಷ್ಣು ಥರಾನೇ ಜೂ. ದರ್ಶನ್ ಕೂಡ ಇದ್ದಾರೆ.

Edited By

Kavya shree

Reported By

Kavya shree

Comments