ಸಾನಿಯಾ ಮಿರ್ಜಾ ಗೆ ಗಿಫ್ಟ್ ಡಿಮ್ಯಾಂಡ್ ಮಾಡಿದ ಖ್ಯಾತ ನಟಿ..!! ಅಷ್ಟಕ್ಕೂ ಕೇಳಿದ್ದೇನು ಗೊತ್ತಾ..?

01 Feb 2019 3:32 PM | Entertainment
259 Report

ಸೆಲೆಬ್ರೆಟಿಗಳ ಲೈಫ್ ಅಂದರೆ ಒಂಥರಾ ಚೆಂದ… ಕೆಲವರು ಆ ಲೈಫ್ ಇಷ್ಟ ಪಟ್ಟರೆ ಮತ್ತೆ ಕೆಲವರು ಯಾರಿಗೆ ಬೇಕು ಆ ಲೈಫ್ ಅಂತಾರೆ.. ಅದೆಷ್ಟೋ ಬಾರಿ ಎಷ್ಟೇ ದೊಡ್ಡ ಸೆಲೆಬ್ರೆಟಿಗಳಾಗಿದ್ದರೂ, ಬೆಸ್ಟ್ ಫ್ರೆಂಡ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆಯುವುದು ,ಗಿಫ್ಟ್ ಕೇಳುವುದನ್ನು ಬಿಡೋಲ್ಲ… ಇದೇ ರೀತಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ ಸ್ನೇಹಿತೆಯೊಬ್ಬಳು ಗಿಫ್ಟ್ ಕೇಳಿರುವ ಕಾಮೆಂಟ್ ಸೋಷಿಯಲ್ ಮಿಡೀಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಮಿರ್ಜಾಗೆ ಈ ಗಿಫ್ಟ್ ಕೇಳಿರುವುದು ಆಪ್ತ‌ ಸ್ನೇಹಿತೆ, ನಟಿ ಪರಿಣಿತಿ ಚೋಪ್ರಾ.. ಎಂತಹ ಸೆಲೆಬ್ರೆಟಿಗಳಾದರೂ ಸ್ನೇಹಿತರಿಂದ ಕಾಲೆಳಿಸಿಕೊಳ್ಳೊಂದು ತಪ್ಪಲ್ಲ..

ಅದೇ ರೀತಿ ಸಾನಿಯಾ ಮಿರ್ಜಾ ಹಾಗೂ ಪರಿಣಿತಿ ಚೋಪ್ರಾ ಒಬ್ಬರ ಕಾಲನ್ನು ಒಬ್ಬರು ಎಳೆದುಕೊಳ್ಳುವುದು ಸಾಮಾನ್ಯ. ಇದೀಗ ಮಿರ್ಜಾ ಅವರು ಹಾಕಿರುವ ಪುಸ್ತಕದ ಫೋಟೋಗೂ ಇದು ಮುಂದುವರಿದಿದೆ. ಇತ್ತೀಚಿಗೆ ಮಿರ್ಜಾ ಅವರು ಪ್ರಜ್ವಲ್ ಹೆಗ್ಡೆ ಅವರು ಬರೆದಿರುವ ಪುಸ್ತಕವೊಂದನ್ನು ಓದುತ್ತಿದ್ದು, ಇದನ್ನು ಪ್ರತಿಯೊಬ್ಬರು ಓದಬೇಕು ಎಂದು ಪುಸ್ತಕದ ಸಮೇತ ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದರು. ಈ ಫೋಟೋ ಹಾಕಿದ ಕೂಡಲೇ ಕಾಮೆಂಟ್ ಮಾಡಿರುವ ಪರಿಣಿತಿ ಚೋಪ್ರಾ, ನನಗೂ ಈ ಪುಸ್ತಕ ಬೇಕು. ಆದರೆ ಫ್ರೀ ಆಗಿ ಕೊಡಬೇಕು ಎಂದಿದ್ದಾರೆ. ಇದಕ್ಕೆ ಹುಸಿಕೋಪದಲ್ಲಿಯೇ ಉತ್ತರಿಸಿರುವ ಸಾನಿಯಾ, ಆಗಲಿ ನಾನೇ ಸ್ವಂತ ದುಡ್ಡಲ್ಲಿ ಕೊಡಿಸುತ್ತೇನೆ ಎಂದು ರಿಪ್ಲೆ ಮಾಡಿದ್ದಾರೆ. ಇದೀಗ ಈ ಇಬ್ಬರು ಸೆಲೆಬ್ರೆಟಿಗಳ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾವಿರಾರು ಮಂದಿ ಇಬ್ಬರ ಚಾಟಿಂಗ್ ನೋಡಿ ನಸುನಕ್ಕಿದ್ದಾರೆ… ಒಟ್ಟಾರೆ ಸೆಲೆಬ್ರೆಟಿಗಳಾದರೂ ಕೂಡ  ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳೊದು ಕಾಮನ್ ಆಗಿಬಿಟ್ಟಿದೆ.

Edited By

Manjula M

Reported By

Manjula M

Comments