ಮಗಳ ಮದುವೆಯಲ್ಲಿ ಮುನಿಸಿಕೊಂಡಿದ್ಯಾಕೆ ಈ ಸ್ಟಾರ್ ನಟಿಯ ಅಮ್ಮ...!!!

01 Feb 2019 3:11 PM | Entertainment
216 Report

ನಟಿ ಪ್ರಿಯಾಂಕ ಚೋಪ್ರಾ ಕಳೆದ 2108 ರ ಡಿಸೆಂಬರ್ ನಲ್ಲಿ ಅಮೆರಿಕಾದ ಗಾಯಕ ನಿಕ್  ಎಂಬಾತನೊಂದಿಗೆ ಉಮೈದ್ ಭವನದಲ್ಲಿ   ಕಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯದಂತೇ ಮದುವೆಯಾಗಿದ್ದಾರೆ. ಒಂದಷ್ಟು ದಿನ ಲವ್, ಗಾಸಿಪ್ ಅಂತಾ ಸಿಕ್ಕಾಪಟ್ಟೆ  ಬಿಟೌನ್ ಮತ್ತು ಹಾಲಿವುಡ್’ನಲ್ಲಿ ಟಾಕ್ ಆಗಿದ್ದ ಪಿಗ್ಗಿ ಮತ್ತು ನಿಕ್ ಜೋಡಿ ಮದುವೆಯಾದ ಬಳಿಕ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೇ ಪ್ರಿಯಾಂಕ ಹಾಲಿವುಡ್ ನಲ್ಲಿ ಅಭಿನಯಿಸುತ್ತಿದ್ದಾಗ ನಿಕ್ ಪರಿಚಯವಾಗಿ, ಆ ನಂತರ ಅದು ಪ್ರೀತಿಗೆ ತಿರುಗಿತ್ತು.

ಆದರೆ  ಪಿಗ್ಗಿ, ಅಲಿಯಾಸ್ ಪ್ರಿಯಾಂಕ ಚೋಪ್ರಾ ಮದುವೆಯಲ್ಲಿ , ಅವರ ತಾಯಿಮಗಳ ಮೇಲೆ ಬೇಸರಿಸಿಕೊಂಡಿದ್ದರಂತೆ. ತಮ್ಮ ಮಗಳ ಮೇಲೆ  ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದರಂತೆ. ಅಂದಹಾಗೇ  ಪಿಗ್ಗಿ ಅಮ್ಮನ ಮಾತು ಕೇಳಿಲ್ಲದ್ದಕ್ಕೆ ಅವರ ತಾಯಿ ಮದುವೆಯಲ್ಲಿ ಮುನಿಸಿಕೊಂಡಿದ್ದರಂತೆ.ಮದುವೆಯಾದ ಬಳಿಕ ಪಿಗ್ಗಿ ತಮ್ಮ ತಾಯಿ ಯಾಕೆ ಕೋಪ ಮಾಡಿಕೊಂಡಿದ್ದಾರೆಂಬ ಸತ್ಯವನ್ನು ಇತ್ತೀಚಿಗೆ ಬಾಯ್ಬಿಟ್ಟಿದ್ದಾರೆ.ಭಾರತದ ಮದುವೆಯಲ್ಲಿ ಸಾವಿರಾರೂ ಮಂದಿ ಸೇರುತ್ತಾರೆ. ಆದರೆ ನನ್ನ ಮದುವೆಯಲ್ಲಿ ಕುಟುಂಬದ ಆಪ್ತರಿಗೆ ಮಾತ್ರ ನಾನು ಆಹ್ವಾನಿಸಲಾಗಿತ್ತು. ನನ್ನ ಹಾಗೂ ನಿಕ್ ಇಬ್ಬರ ಕುಟುಂಬದವರು ಸೇರಿ ಕೇವಲ 200 ಮಂದಿ ಮದುವೆಯಲ್ಲಿ ಭಾಗಿಯಾಗಿದ್ದರು. ನನ್ನ ಮದುವೆಯಲ್ಲಿ ಕೇವಲ ಆಪ್ತರು ಮಾತ್ರ ಆಗಮಿಸಬೇಕು ಎಂದು ನಾನು ನಿರ್ಧರಿಸಿದ್ದರಿಂದ ಅಮ್ಮ ಕೋಪಗೊಂಡಿದ್ದರು ಎಂದು ಪ್ರಿಯಾಂಕ  ಹೇಳಿಕೊಂಡಿದ್ದಾರೆ. ನನ್ನ ಮಾತಿನಂತೇ ಮದುವೆಗೆ ಬಂದಿದ್ದವರು ನನ್ನ ಆಪ್ತ ವರ್ಗ ಬಿಟ್ಟರೇ ಬೇರೆ ಯಾರು ಇರಲಿಲ್ಲ. ನನ್ನ ತಾಯಿಗೆ ನನ್ನ ಮದುವೆಗೆ ಸಿಕ್ಕಾಪಟ್ಟೆ ಜನ ಸೇರಿಸಬೇಕೆಂಬ ಆಸೆಯಿತ್ತು. ಆದರೆ ಅವರ ಆಸೆ ಈಡೇರಲಿಲ್ಲ. ಇದಕ್ಕಾಗಿ ಮನಸಲ್ಲಿ ನನ್ನ ಮೇಲೆ ಸಣ್ಣ ಕೋಪವಿತ್ತು ಅವರಿಗೆ ಎಂದು ಹೇಳಿದ್ದಾರೆ.

ಮದುವೆಗೆ ಕೇವಲ 200 ಮಂದಿಗೆ ಆಹ್ವಾನ ಮಾಡಿದ್ದು, ನನ್ನ ತಾಯಿಗೆ ಇಷ್ಟವಿರಲಿಲ್ಲ. ತನ್ನ ಮಗಳ ಮದುವೆಗೆ ಎಲ್ಲರನ್ನು ಕರೆಯಲು ಸಾಧ್ಯವಾಗಲಿಲ್ಲ ಎಂಬ ಬೇಸರ ನನ್ನ ತಾಯಿಗಿದೆ. ನನ್ನ ಮದುವೆ ಸಂದರ್ಭದಲ್ಲಿ ಅವರು ನನ್ನ ಮೇಲೆ ಬೇಸರಗೊಂಡಿದ್ದರು ಎಂದು ಕಾರ್ಯಕ್ರಮದಲ್ಲಿವೊಂದರಲ್ಲಿ ಇತ್ತೀಚೆಗೆ ಭಾಗವಹಿಸಿದ್ದ ಸಂದರ್ಭದಲ್ಲಿ ಈ ವಿಚಾರವನ್ನು ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಆಗಮಿಸಿ ನವದಂಪತಿಗೆ ಶುಭಕೋರಿದ್ದರು.

Edited By

Kavya shree

Reported By

Kavya shree

Comments