ಖ್ಯಾತ ನಟ ಆರ್ಯ ಕೈ ಹಿಡಿಯಲಿರುವ ನಟಿ ಇವರೇ ನೋಡಿ…?

01 Feb 2019 9:48 AM | Entertainment
162 Report

ಸಿನಿಮಾ ಇಂಡಸ್ಟ್ರಿಯಲ್ಲಿ ಸಾಲು ಸಾಲು ಮದುವೆ ಸುದ್ದಿಗಳು ಕೇಳಿಬರುತ್ತಿವೆ… ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಮದುವೆಯಾಗುವುದಾಗಿ ತಿಳಿಸಿದರು.. ಜೊತೆಗೆ ಕಾಜಲ್  ಅಗರವಾಲ್ ಕೂಡ ಮದುವೆ ವಿಷಯದ ಬಗ್ಗೆ ಮಾತಾಡಿದ್ದರು.. ಇದೀಗ ತಮಿಳಿನ ಖ್ಯಾತ ನಾಯಕ ನಟ ಆರ್ಯ ಕೊನೆಗೂ ಮದುವೆಯಾಗಲು ಮನಸ್ಸು ಮಾಡಿದ್ದಾರೆ. ಇದರಿಂದ ಆರ್ಯ ಅಭಿಮಾನಿಗಳಿಗೆ ಅಂದರೆ ಹುಡುಗಿಯರಿಗೆ ಕೊಂಚ ಬೇಜಾರಾಗಿದೆ.. ಆರ್ಯ ಕೈ ಹಿಡಿಯುತ್ತಿರುವುದು ಯಾರನ್ನ ಗೊತ್ತಾ…? ಅವರೇ ನಟಿ ಸಯ್ಯೇಷಾ ..

ನಟಿ ಸಯ್ಯೇಷಾ ಹಾಗೂ ಆರ್ಯ ಕಳೆದ ಕೆಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು…. ಇದೀಗ ಎರಡೂ ಮನೆಯವರು ಇಬ್ಬರ ಮದುವೆ ಮಾತುಕತೆ ನಡೆಸುತ್ತಿದ್ದಾರಂತೆ. ಮಾರ್ಚ್ 9 ಮತ್ತು 10 ರಂದು ಹೈದರಾಬಾದ್ ನಲ್ಲಿ ಮದುವೆ ನಡೆಸಲು ಎರಡೂ ಕುಟುಂಬಗಳೂ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಘಜನಿಕಾಂತ್ ಚಿತ್ರದ ಶೂಟಿಂಗ್ ವೇಳೆ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು ಎನ್ನಲಾಗಿದೆ. ಬಾಲಿವುಡ್ ತಾರೆ ದಿಲೀಪ್ ಕುಮಾರ್ ಸಂಬಂಧಿಯೂ ಆಗಿರುವ ಸಯ್ಯೇಷಾ ಜೊತೆಗೆ ಈಗ ಆರ್ಯ ಕಾಪ್ಪಾನ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಈ ಸಿನಿಮಾ ಚಿತ್ರೀಕರಣ ಮುಗಿದ ಬಳಿಕ ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

 

Edited By

Manjula M

Reported By

Manjula M

Comments