ಅಭಿಮಾನಿಯನ್ನು ನೋಡಲು ಶ್ರದ್ಧಾ ಕಪೂರ್ ಮಾಡಿದ್ದೇನು ಗೊತ್ತಾ…?

31 Jan 2019 5:40 PM | Entertainment
188 Report

ಸ್ಟಾರ್’ಗಳಿಗೆ ಒಂದು ಸಮಸ್ಯೆ ಎಂದರೆ ಹೊರಗಡೆ ಹೋಗೋದು… ಸ್ಟಾರ್’ಗಳು ಹೊರಗಡೆ ಹೋದರೆ ಅಭಿಮಾನಿಗಳು ಸುತ್ತುವರೆಯುತ್ತಾರೆ ಅಂತ ಸ್ಟಾರ್ ಗಳು ಭಯ ಬೀಳ್ತಾರೆ.. ಅದಕ್ಕೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಿಕ್ಕಾಪಟ್ಟೆ ಬುದ್ದಿವಂತೆ.. ಏನ್ ಮಾಡಿದ್ದಾರೆ ಗೊತ್ತಾ..? ಬಾಲಿವುಡ್ ನಟಿ ಶ್ರದ್ಧಾ ಕಪೂರ್ ತನ್ನ ಅಭಿಮಾನಿಯನ್ನು ಭೇಟಿ ಮಾಡಲು ಬುರ್ಖಾ ಧರಿಸಿ ಆಸ್ಪತ್ರೆಗೆ ಭೇಟಿ ನೀಡಿ ಅಭಿಮಾನಿಯನ್ನು ನೋಡಿದ್ದಾರೆ.. 13 ವರ್ಷದ ಸುಮಯ್ಯ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದಳು. ಸುಮಯ್ಯನಿಗೆ ಶ್ರದ್ಧಾ ಕಪೂರ್ ಎಂದರೆ ತುಂಬಾ ಇಷ್ಟ… ಶ್ರದ್ಧಾ ಕಪೂರ್ ಅಭಿಮಾನಿ ಆಗಿದ್ದು, ನೆಚ್ಚಿನ ನಟಿಯನ್ನು ಒಮ್ಮೆ ಭೇಟಿ ಮಾಡಬೇಕು ಎಂದು ತನ್ನ ಆಸೆಯನ್ನು ಹೇಳಿಕೊಂಡಿದ್ದಳು. ಹಾಗಾಗಿ ಶ್ರದ್ಧಾ ತಮ್ಮ ಬ್ಯುಸಿ ಶೆಡ್ಯೂಲ್‍ನಲ್ಲೂ ಅಭಿಮಾನಿಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದಿದ್ದರು.

ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಶ್ರದ್ಧಾ ಕಪೂರ್ ಅವರನ್ನು ಭೇಟಿ ಮಾಡಲು ಇಷ್ಟಪಡುತ್ತಿದ್ದಾಳೆ ಎಂದು ಸಂಸ್ಥೆಯೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು. ಪೋಸ್ಟ್ ಶ್ರದ್ಧಾ ಕಪೂರ್ ಅವರು ನೋಡಿ ಸಂಸ್ಥೆ ಬಳಿ ಬಾಲಕಿಯ ಮಾಹಿತಿ ತಿಳಿದುಕೊಂಡರು…. ಬಳಿಕ ತಮ್ಮ ಕೆಲಸದ ನಡುವೆ ಶ್ರದ್ಧಾ ಬಾಲಕಿಯನ್ನು ಭೇಟಿ ಮಾಡಿದ್ದಾರೆ. ಶ್ರದ್ಧಾ ಕಪೂರ್ ತನ್ನ ಅಭಿಮಾನಿಯನ್ನು ಭೇಟಿ ಮಾಡಿದ ನಂತರ ಆಕೆಯ ಜೊತೆಗಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ಇಂದು ನನಗೆ ಸುಮಯ್ಯಳನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿ ಆಗಿದ್ದೇನೆ. ಸುಮಯ್ಯ ಮುದ್ದು ಏಂಜಲ್ ಆಗಿದ್ದು, ಆಕೆ ಬೇಗ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಅಲ್ಲದೇ ಆಕೆಯ ಚಿಕಿತ್ಸೆಗೆ ನನ್ನಿಂದ ಏನಾದರೂ ಸಹಾಯ ಬೇಕೆಂದರೆ ನನ್ನನ್ನು ಕೇಳಿಎಂದು ಶ್ರದ್ಧಾ ಸಂಸ್ಥೆಯ ಬಳಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

Edited By

Manjula M

Reported By

Manjula M

Comments