ನಮ್ಮ ಮಧ್ಯೆ ಕಿಚ್ಚು ಹಚ್ಚಬೇಡಿ..! ನಾವ್ ಚೆನ್ನಾಗಿದ್ದೇವೆ..!!  ಖಾಸಗಿ ವಾಹಿನಿಗೆ ಯಶ್ ಫ್ಯಾನ್ಸ್ ಎಚ್ಚರಿಕೆ..!!!

31 Jan 2019 11:52 AM | Entertainment
1000 Report

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಅನ್ನೋದು ಬಹಳ ಹಿಂದಿನಿಂದಲೂ ಕೂಡ ಕೇಳಿ ಬಂದಿದೆ.. ಇದೆಕ್ಕೆಲ್ಲಾ ಕೆಲವೊಮ್ಮೆ ಕಿಚ್ಚು ಹಚ್ಚೋದು ಕೂಡ ಅಭಿಮಾನಿಗಳು ಅಂತ ಕೆಲವರು ಹೇಳುತ್ತಾರೆ..… ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಈ ಎರಡೂ ಸ್ಟಾರ್ ನಟರ ಅಭಿಮಾನಿಗಳ ನಡುವೆ ವಾರ್ ಪ್ರಾರಂಭವಾಗಿದೆ.. ಈ ರೀತಿಯ ಸುದ್ದಿ ಪ್ರಸಾರ ಮಾಡಿದ್ದ ಖಾಸಗಿ ವಾಹಿನಿ ವಿರುದ್ಧ ಇದೀಗ ಅಭಿಮಾನಿಗಳೇ ತಿರುಗಿಬಿದ್ದಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಖಾಸಗಿ ವಾಹಿನಿಗೆ ಎಚ್ಚರಿಕೆ ನೀಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ನಾವು ಚೆನ್ನಾಗಿಯೇ ಇದ್ದೇವೆ ಎಂದಿದ್ದಾರೆ..

ದಯವಿಟ್ಟು ನಮ್ಮ ನಡುವೆ ತಂದಿಡಬೇಡಿ ಎಂದಿದ್ದಾರೆ.'ಈ ರೀತಿ ಇಲ್ಲದೇ ಇರುವ ವಿಚಾರದ ಬಗ್ಗೆ ಕಾರ್ಯಕ್ರಮ ಮಾಡಿ ಇಬ್ಬರ ಮಧ್ಯೆ ತಂದಿಡುವ ಕೆಲಸವನ್ನು ದಯವಿಟ್ಟು ಮಾಡಬೇಡಿ' ಎಂದು ಯಶ್ ಅಭಿಮಾನಿಗಳು ಮನವಿ ಮಾಡಿಕೊಳ್ಳುವುದರ ಜೊತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಪುನೀತ್-ಯಶ್ ಅಭಿಮಾನಿಗಳ ನಡುವೆ ವಾರ್ ಪ್ರಾರಂಭವಾಗಿದೆ. ಇದೀಗ ದರ್ಶನ್-ಪುನೀತ್ ಅಭಿಮಾನಿಗಳು ಒಂದಾಗಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿತ್ತು. ಚೆನ್ನಾಗಿರುವವರ ಮದ್ಯೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದಿದ್ದಾರೆ. ನೀವು ಪ್ರತಿಬಿಂಬಿಸುವ ರೀತಿ ಸ್ಯಾಂಡಲ್ ವುಡ್ ಇಲ್ಲ,,,ಎಲ್ಲರೂ ಕೂಡ ಚೆನ್ನಾಗಿ ಇದ್ದೇವೆ.. ಅಭಿಮಾನಿಗಳು ಕೂಡ ಚೆನ್ನಾಗಿದ್ದಾರೆ ಎಂದು ತಿಳಿಸಿದ್ದಾರೆ..

Edited By

Manjula M

Reported By

Manjula M

Comments