ನವೀನ್ ಸಜ್ಜು ಬಿಗ್ ಬಾಸ್ ನಲ್ಲಿ ತೆಗೆದುಕೊಂಡ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ…?!!!

31 Jan 2019 10:44 AM | Entertainment
1588 Report

ಬಿಗ್ ಬಾಸ್ ಸೀಸನ್-6 ಯಶಸ್ವಿಯಾಗಿ ಮುಕ್ತಾಯವಾಗಿದೆ. ಕಳೆದ ಭಾನುವರವಷ್ಟೇ 100 ದಿನಗಳ ಬಿಗ್ ಬಾಸ್ ರಿಯಾಲಿಟಿ ಶೋ ಕೊನೆಗೊಂಡಿದೆ. ಬಿಗ್ ಬಾಸ್ ಮನೆಗೆ ಹೋದ 21 ಸ್ಪರ್ಧಿಗಳ ಪೈಕಿ ಮಾರ್ಡನ್ ರೈತ ಕೃಷಿಕ ಶಶಿಕುಮಾರ್ ವಿನ್ ಆಗಿದ್ದಾರೆ. 50 ಲಕ್ಷ ಬಹುಮಾನ ಗೆದ್ದು ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಅದರಂತೇ ರನ್ನರ್ ಅಪ್ ಆದ ಗಾಯಕ ನವೀನ್ ಸಜ್ಜು ಅವರು   ಬಿಗ್ ಬಾಸ್ ಮನೆಯಲ್ಲಿ ತೆಗೆದುಕೊಂಡ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ.!

ಬಿಗ್ ಬಾಸ್ ಮನೆಯಲ್ಲಿ ವಿನ್ನರ್ ಶಶಿ ಆಗಿದ್ದಕ್ಕೆ ಸಾರ್ವಜನಿಕ ವಲಯದಿಂದ ಸಾಕಷ್ಟು ಪರ-ವಿರೋಧ ಚರ್ಚೆಗಳು ಬರತೊಡಗಿದವು.ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಕಮೆಂಟ್’ಗಳು ಕೂಡ ಹರಿದಾಡಿದವು. 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡ ಗಾಯಕ ನವೀನ್ ಸಜ್ಜು ಅವರು ಬಿಗ್ ಬಾಸ್ ಮನೆಗೆ ಸೆಲೆಬ್ರಿಟಿ ಆಗಿ ಎಂಟ್ರಿ ಕೊಟ್ಟಿದ್ದರು. ಸಜ್ಜು ಅವರು ಒಟ್ಟು 14 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದರು,ಇನ್ನು ವಾರಕ್ಕೆ 70 ಸಾವಿರ ರೂಪಾಯಿಯಂತೆ 14 ವಾರಕ್ಕೆ ಸರಿಸುಮಾರು 10 ಲಕ್ಷ ರೂಪಾಯಿಗಳನ್ನ ಬಿಗ್ ಬಾಸ್ ಮನೆಯಿಂದ ಪಡೆದುಕೊಂಡಿದ್ದಾರೆ.ಹಾಗೆ ಕ್ಲಾಸಿಕ್ ಬಾಸ್ಮತಿ ರೈಸ್ ಕಡೆಯಿಂದ 3 ಲಕ್ಷ ರೂಪಾಯಿಯ ಸ್ಪೆಷಲ್ ಗಿಫ್ಟ್ ಓಚರ್ ನ್ನು ಕೂಡ ಪಡೆದಿದ್ದಾರೆ. ಒಟ್ಟು ಬಿಗ್ ಬಾಸ್ ಮನೆಯಿಂದ ಸುಮಾರು 13 ಲಕ್ಷ ರೂ. ನವೀನ್ ಸಜ್ಜು ಸಂಭಾವನೆ ರೂಪದಲ್ಲಿ ಪಡೆದಿದ್ದಾರೆಂದು ಹೇಳಬಹುದು. ಅಷ್ಟೇ ಅಲ್ಲದೇ ವೇದಿಕೆ ಮೇಲೆಯೇ ನವೀನ್ ಸಜ್ಜುಗೆ ಕಿಚ್ಚ ಸುದೀಪ್ ಕೂಡ ಗಾಯಕ ನವೀನ್ ಗೆ ಸ್ಟುಡಿಯೋ ಮಾಡೋಕೇ ನಾನು ನೆರವಾಗ್ತೀನಿ ಅಂತಾ ಮಾತುಕೊಟ್ಟಿದ್ದಾರೆ. ಒಟ್ಟಾರೆ  ಬಿಗ್ ಬಾಸ್ ಟ್ರೋಫಿ ಗೆದ್ದಿದ್ದು ಶಶಿ ಆಗಿರಬಹುದು ಆದರೆ ಜನರ ಹೃದಯವನ್ನು ನಾನು ಕೂಡ ಗೆದ್ದಿದ್ದೀನಿ ಎನ್ನುತ್ತಾರೆ ಗಾಯಕ ನವೀನ್ ಸಜ್ಜು.

Edited By

Kavya shree

Reported By

Kavya shree

Comments