'ದೇವದಾಸ'ನಾದ ಸ್ಯಾಂಡಲ್’ವುಡ್ ಗೋಲ್ಡನ್ ಸ್ಟಾರ್ ಗಣೇಶ್..!!

30 Jan 2019 6:07 PM | Entertainment
340 Report

ಸ್ಯಾಂಡಲ್’ವುಡ್’ನ ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡದ ಸ್ಟೈಲಿಶ್ ನಟ ಎಂದರೆ ತಪ್ಪಾಗುವುದಿಲ್ಲ.. ತನ್ನದೆ ಆದ ಇಮೇಜ್ ಕ್ರಿಯೆಟ್ ಮಾಡಿರೋ ಗಣೇಶ್’ಗೆ ಪ್ಯಾನ್ಸ್ ಫಾಲೋಹರ್ಸ್ ತುಂಬಾ ಜನ ಇದ್ದಾರೆ.. ಸಿನಿಮಾಗಳ ಮೂಲಕ ವಿಭಿನ್ನ ಗೆಟಪ್’ನಲ್ಲಿ ಮಿಂಚುತ್ತಿರೋ ಗಣೇಶ್ ಸದ್ಯ ನ್ಯೂ ಲುಕ್’ನಲ್ಲಿ ಕಾಣಿಸಿಕೊಂಡಿದ್ದಾರೆ..  ಸಿನಿಮಾದಿಂದ ಸಿನಿಮಾಗೆ ಹೊಸ ರೀತಿಯ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಳ್ಳುವುದು ಗಣಿ ಸ್ಟೈಲ್. ಇದೀಗ, ಗಣೇಶ್ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ 'ದೇವದಾಸ'ನಾಗಿ ಬಿಟ್ಟಿದ್ದಾರೆ.

ಈ ಸಿನಿಮಾದಲ್ಲಿ ಎರಡು ವಿಭಿನ್ನ ಶೇಡ್ ನಲ್ಲಿ ನಟಿಸುತ್ತಿದ್ದಾರೆ... ಒಂದು ಲುಕ್’ನಲ್ಲಿ ಕ್ಲಾಸ್ ಆಗಿ ಮಿಂಚಿದ್ರೆ, ಇನ್ನೊಂದು ಲುಕ್ ನಲ್ಲಿ ಲವ್ ಫೆಲ್ಯೂರ್ ಹುಡುಗನಾಗಿ ಅಭಿನಯಿಸುತ್ತಿದ್ದಾರೆ... ಲವ್ ಫೆಲ್ಯೂರ್ ಲುಕ್ ನಲ್ಲಿ ಗಣೇಶ್ ಹೇಗಿದ್ದಾರೆ ಎಂಬುದರ ನೋಟ ಬಹಿರಂಗವಾಗಿದೆ. ಗಡ್ಡ ಬಿಟ್ಟು ಶಾಲೆಯ ಆವರಣದಲ್ಲಿ ಓಡಾಡುತ್ತಿರುವ ಗಣೇಶ್ ಅವರ ಫಸ್ಟ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಚಿತ್ರದ ಹೆಸರು 99… ಈ ಸಿನಿಮಾದಲ್ಲಿ ಗಣೇಶ್ ಅವರ ಈ ಲುಕ್ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗೋಲ್ಡನ್ ಸ್ಟಾರ್ ಗೆ ಈ ಗಡ್ಡ ಚೆನ್ನಾಗಿ ಕಾಣ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದು ರಿಯಲ್ ಗಡ್ಡನಾ ಅಥವಾ ಮೇಕಪ್ ಮಾಡಿರಬಹುದು ಎಂದು ಕನ್ ಪ್ಯೂಸ್ ಆಗಿದ್ದಾರೆ. ಇನ್ನುಳಿದಂತೆ '99' ಸಿನಿಮಾ ತಮಿಳಿನ ಸೂಪರ್ ಹಿಟ್ ಸಿನಿಮಾ '96' ಚಿತ್ರದ ರೀಮೇಕ್. ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನ ಕನ್ನಡದಲ್ಲಿ ಗಣೇಶ್ ನಿರ್ವಹಿಸುತ್ತಿದ್ದಾರೆ. ಭಾವನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಒಟ್ಟಾರೆ ಗಣೇಶ್ ದೇವದಾಸನಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ..

Edited By

Manjula M

Reported By

Manjula M

Comments