ಕಿರಾತಕ-2.. ? ಕೆಜಿಎಫ್-2… ? ರಾಕಿಂಗ್ ಸ್ಟಾರ್ ಆಯ್ಕೆ ಯಾವುದು?

30 Jan 2019 3:12 PM | Entertainment
136 Report

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.. ಒಂದು ಕಡೆ ಮಗಳು ಮನೆಗೆ ಬಂದ ಸಂಭ್ರಮವಾದರೆ ಮತ್ತೊಂದು ಕಡೆ ಕೆಜಿಎಫ್ ಸಿನಿಮಾದ ಯಶಸ್ಸು…  ಸಿನಿಮಾ ಯಶಸ್ಸಿನ ನಂತರ ಯಶ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.. ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗುವ ಮೊದಲು ಕಿರಾತಕ 2 ಸಿನಿಮಾವನ್ನು ಯಶ್ ಯಾವಾಗ ಮಾಡ್ತಾರೆ? ಅಥವಾ ಕೆಜಿಎಫ್ ಸಕ್ಸಸ್ ಬಳಿಕ ಇಂತಹ ಸಿನಿಮಾ ಮಾಡೋದೇ ಇಲ್ವಾ? ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ಕೆಜಿಎಫ್ ಸುದ್ದಿಗೋಷ್ಠಿಯಲ್ಲೇ ಯಶ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.. ನಾನು ಕಿರಾತಕ 2 ಸಿನಿಮಾ ಮಾಡೇ ಮಾಡ್ತೀನಿ ಎಂದಿದ್ದರು. ಆದರೆ ಯಾವಾಗ? ಕೆಜಿಎಫ್ ಚಾಪ್ಟರ್ 2 ರ ನಂತರವಾ ಮೊದಲಾ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಈಗಾಗಲೇ ಕೆಜಿಎಫ್ 2 ಭಾಗದ ಶೇ. 15 ಭಾಗ ಚಿತ್ರೀಕರಣವಾಗಿದೆ. ಹೀಗಾಗಿ ಉಳಿದ ಭಾಗವನ್ನು ಮೊದಲು ಪೂರ್ತಿಗೊಳಿಸಿ ನಂತರ ಕಿರಾತಕ ಕಡೆಗೆ ಗಮನಹರಿಸಲು ಯಶ್ ತೀರ್ಮಾನಿಸಿದ್ದಾರೆ ಎಂಬುದು ತಿಳಿದುಬಂದಿದೆ.. ಯಶ್ ಗೆ ಬ್ರೇಕ್ ಕೊಟ್ಟ ಸಿನಿಮಾಗಳಲ್ಲಿ ಕಿರಾತಕ ಕೂಡ ಒಂದು.. ಪಕ್ಕಾ ಹಳ್ಳಿಯ ಭಾಷೆಯ ಸೊಗಡು ಇರುವ ಸಿನಿಮಾವನ್ನು ಸಿನಿರಸಿಕರು ಸಿಕ್ಕಾಪಟ್ಟೆ ಮೆಚ್ಚಿಕೊಂಡರು.. ಅಣ್ತಮ್ಮ ಎನ್ನುವ ಡೈಲಾಗ್ ಅಂತೂ ಮಂಡ್ಯ ಅಭಿಮಾನಿಗಳ ಪೇವರೆಟ್ ಆಗೋಯ್ತು…

Edited By

Manjula M

Reported By

Manjula M

Comments