ನಡು ರಸ್ತೆಯಲ್ಲಿಯೇ ಸ್ಟಾರ್ ನಟಿಯ ಮೇಲೆ ದುಷ್ಕರ್ಮಿಗಳ ಹಲ್ಲೆ…?!!!

30 Jan 2019 2:20 PM | Entertainment
484 Report

ಬಾಲಿವುಡ್’ನ ಖ್ಯಾತ ನಟಿ  ಶಿಲ್ಪಾ ಶಿಟ್ಟಿ ಸಹೋದರಿ ಹಾಗೂ ರಿಯಾಲಿಟಿ ಶೋ ವೊಂದರ ಸ್ಪರ್ಧಿ ಶಮಿತಾ ಶೆಟ್ಟಿ ಅವರ ಮೇಲೆ ರಸ್ತೆ ಮಧ್ಯೆದಲ್ಲಿ  ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಕತ್ರೋನ್ ಕಾ ಕಿಲಾಡಿ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಯಾಗಿರುವ ಹಾಗೂ ನಟಿಯಾಗಿರುವ ಶಮಿತಾ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರಿನ ಚಾಲನ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ಮಾಡಿದೆ, ಅಷ್ಟೇ ಅಲ್ಲದೇ ಕಾರಿನಲ್ಲಿ ಕುಳಿತಿದ್ದ ಖ್ಯಾತ ನಟಿ ಸಹೋದರಿಗೂ ಅವಾಚ್ಯ ಮಾತುಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

 ನಟಿ ಶಮಿತಾ ಶೆಟ್ಟಿ ಅವರನ್ನು ಕೂಡ ಅಶ್ಲೀಲ ಪದಗಳಿಂದ  ದುಷ್ಕರ್ಮಿಗಳು ನಿಂಧಿಸಿರುವ ಘಟನೆ  ಮಧ್ಯಾಹ್ನ ಮುಂಬೈನ ಥಾಣೆ ಬಳಿಯಿರುವ ವಿವಿಯಾನ ಮಾಲ್ ಬಳಿ ನಡೆದಿದೆ. ಅಂದ ಹಾಗೇ ಶಮಿತಾ ಶೆಟ್ಟಿ ಚಲಿಸುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ಚಾಲಕ ದರ್ಶನ್ ಸಾವಂತ್ ಏನಾಗಿದೆ ಎಂದು ನೋಡಲು ಕಾರಿನಿಂದ  ಕೆಳಗಿಳಿದಾಗ ಮತ್ತೊಂದು ಕಾರಿನಲ್ಲಿದ್ದ ಮೂವರು ಆತನನ್ನು ಏಕಾಏಕಿ ಥಳಿಸಿದ್ದಾರೆ. ಅಷ್ಟೇ ಅಲ್ಲ, ಕಾರಿನೊಳಗಿದ್ದ ಶಮಿತಾ ಶೆಟ್ಟಿ ಪ್ಯರಶ್ವನೆ ಮಾಡಿದಾಗ ಮನಬಂದಂತೆಅವಾಚ್ಯ ಶಬ್ದಗಳಿಂದ ಅವರನ್ನು ನಿಂದಿಸಲಾಗಿದೆ ಎಂದು ಕಾರು ಚಾಲಕ  ದರ್ಶನ್ ಸಾವಂತ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Edited By

Manjula M

Reported By

Kavya shree

Comments