ಬಿಗ್’ಬಾಸ್ ಸೀಸನ್-7 ಗೆಲ್ಲೋಕೆ ರೆಡಿಯಾಗಿ….?!!!

29 Jan 2019 5:36 PM | Entertainment
1833 Report

ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್’ಬಾಸ್  ಸೀಸನ್ -5, ಕೆಲ ದಿನಗಳ ಹಿಂದಷ್ಟೇ ಮುಕ್ತಾಯವಾಗಿದೆ. ಮಾರ್ಡನ್ ರೈತ ಶಶಿ ಕುಮಾರ್ ಈ ಸೀಸನ್ ನ ವಿನ್ನರ್ ಆಗಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಶಿಕುಮಾರ್ ವಿನ್ನರ್ ಆಗಿದ್ದರ ಬಗ್ಗೆ ಪರ-ವಿರೋಧ ಚರ್ಚೆಗಳು ಹೆಚ್ಚಾಗುತ್ತಿದೆ. ಫೈನಲ್ ನಲ್ಲಿ ಬಿಗ್’ಬಾಸ್ ಟ್ವಿಸ್ಟ್ ಕೊಟ್ಟಿದ್ದು, ಗಾಯಕ ನವೀನ್ ಸಜ್ಜು ನೇ ಈ ಬಾರಿ ಬಿಗ್’ಬಾಸ್ ಗೆಲ್ಲೋದೂ ಎಂದು ಭಾವಿಸಿದವರಿಗೆ ನಿರಾಸೆಯಾಗಿದೆ.

ಅಪಾರ ಅಭಿಮಾನಿಗಳನ್ನು ಹೊಂದಿರುವ ಆಧುನಿಕ ರೈತ ಶಶಿ ಕುಮಾರ್ ಬಿಗ್’ಬಾಸ್ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಆದರೆ ಸೋಶಿಯಲ್ ಮಿಡಿಯಾದಲ್ಲಿ ಶಶಿ ವಿರುದ್ಧ ಆಕ್ರೋಶಗಳು ನಿಂತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಗಟೀವ್ ಕಮೆಂಟ್'ಗಳು ಈ ರೀತಿ ಬರುತ್ತಿವೆ. ಮುಂಬರುವ ಬಿಗ್'ಬಾಸ್ ಸೀಸನ್ ನಲ್ಲಿ ನೀವು ಗೆಲ್ಲಬೇಕಾದರೇ ಈ ಥರ ಟ್ರಿಕ್ಸ್ ಇರಬೇಕಂತೆ. ರೈತ ಅಂತ ಹೇಳ್ಕೊಂಡ್ ಬನ್ನಿ...1st ಯಾವ್ದಾದ್ರು ಹುಡ್ಗಿ ಜೊತೆಲೀ ಇರಿ... ಹುಡ್ಗಿಗೋಸ್ಕರ ಕೈ ಬೆರಳ್ ಮುರ್ಕೋಳಿ ಆಗ ಕಲರ್ಸ್ ಚಾನಲ್ ನವ್ರು ಫಿಸಿಕಲ್ ಟಾಸ್ಕ್ ಕೊಡೋದ್ ಕಡಿಮೆ ಮಾಡ್ತಾರೆ.....ಆರಾಮಾಗಿ ಫೈನಲ್ಗೆ ಬಂದು ಕಪ್ ಗೆಲ್ಲಬಹುದು ಎಂಬೆಲ್ಲಾ ಕಮೆಂಟ್‌ಗಳು ಬಂದಿದೆ. ಅಂದಹಾಗೇ ರೈತರ ಹೆಸರನ್ನು ಹೇಗೆ ಬೇಕೋ ಹಾಗೇ ಬಳಸಿಕೊಳ್ತಾರೆ. ಒಂದು ರೈತರ ಹೆಸರು ಹೇಳ್ಕೊಂಡು ಒಬ್ಬರು ಮುಖ್ಯಮಂತ್ರಿಯಾದ್ರು. ಅದೇ ರೈತರ ಹೆಸರು ಹೇಳ್ಕೊಂಡು ಬಿಗ್ ಬಾಸ್ ಗೆದ್ರು ಎಂದು ಕಮೆಂಟ್ ಹಾಕುತ್ತಿದ್ದಾರೆ. ಸೀಸನ್ 1 ರಿಂದಲೂ ಬಿಗ್ ಬಾಸ್ ವಿನ್ನರ್-ರನ್ನರ್  ಬಗ್ಗೆ ಪರ-ವಿರೋಧ ಚರ್ಚೆಗಳಾಗುತ್ತಿವೆ.

Edited By

Kavya shree

Reported By

Kavya shree

Comments