ಸಾವನ್ನು ಗೆದ್ದು ಬಂದ ಖ್ಯಾತ ನಟಿಯ ರೋಚಕ ಕಥೆ...!

29 Jan 2019 4:32 PM | Entertainment
506 Report

ನನಗೆ ಕ್ಯಾನ್ಸರ್ ಬಂದಾಗ ತುಂಬಾ ಬೇಸರಿದ್ದೂ ಇದೆ. ನನಗೆ ಇದೆಂಥಾ ಶಿಕ್ಷೆ ಎಂದುಕೊಂಡೆ. ಬದುಕನ್ನು  ಹೇಗೆ ಗೆಲ್ಲೋದು  ಅಂತಾ  ಯೋಚಿಸ್ತಿದ್ದಾಗ ನನಗೆ ಸ್ಫೂರ್ತಿ ಆಗಿದ್ದು ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಬಾಲಿವುಡ್ ನಟಿ ಲೀಸಾ ರೇ ಎಂದಿದ್ದಾರೆ, ಸಾವನ್ನು ಗೆದ್ದು ಬಂದಿರುವ ನಟಿ ಮನಿಶಾ ಕೊಯಿರಾಲಾ.42 ವರ್ಷದ ಬಾಲಿವುಡ್ ನಟಿ ಮನಿಷಾ ಕೊಯಿರಾಲ ಅನಾರೋಗ್ಯದ ಬಗ್ಗೆ ಮತ್ತು ಕ್ಯಾನ್ಸರ್ ವಿರುದ್ಧದ ಹೋರಾಟದ ಬಗ್ಗೆ ಮಾಧ್ಯಮಗಳೊಂದಿಗೆ ಹಂಚಿಕೊಂಡರು.

ನಾನು ಆನಾರೋಗ್ಯದಿಂದ ಬಳಲುತ್ತಿದ್ದ ವೇಳೆ ಸಕಾರಾತ್ಮಕ ಕಥೆಗಳನ್ನು ಕೇಳಲು ಬಯಸುತ್ತಿದ್ದೆ. ಆದರೆ ಕ್ಯಾನ್ಸರ್ ಗೆದ್ದ ಉದಾಹರಣೆಗಳು ಬಹಳ ಕಡಿಮೆ ಇದ್ದವು. ಇಂದಹ ಸಂದರ್ಭದಲ್ಲಿ ನನಗೆ ಸ್ಫೂರ್ತಿಯಾಗಿದ್ದು, ಯುವರಾಜ್ ಸಿಂಗ್ ಹಾಗೂ ಲಿಸಾ ರೇ ಪ್ರಕರಣಗಳು. ಈ ಸ್ಪೂರ್ತಿಯೇ ನಾನು ಪುಸ್ತಕ ಬರೆಯುವಂತಾಯಿತು ಎಂದರು. ನನಗೆ ಕ್ಯಾನ್ಸರ್ ಇದೆ  ಎಂದು ಗೊತ್ತಾಗಿದ್ದು ಕಠ್ಮಂಡುವಿನ ಆಸ್ಪತ್ರೆಯಲ್ಲಿ. ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನಂತರ ಮುಂಬೈನ ವೈದ್ಯರೂ ನನಗೆ ಕ್ಯಾನ್ಸರ್ ಇರುವುದನ್ನು ಖಚಿತಪಡಿಸಿದರು ಎಂದು ಮನಿಶಾ ತಾನು ಮಾರಣಾಂತಿಕ ಕಾಯಿಲೆಗೆ ತುತ್ತಾದ ದಿನಗಳನ್ನು ನೆನಪಿಸಿಕೊಂಡರು. ನನಗೆ ಮುಂದಿದ್ದ ಎರಡೇ ಎರಡು ಆಯ್ಕೆಗಳಲ್ಲಿ ನಾನು ಒಂದನ್ನು ಆಯ್ಕೆ ಮಾಡಿಕೊಂಡೆ. ಸಂಕಷ್ಟದ ಪರಿಸ್ಥಿತಿಯನ್ನು ಒಂದು ಸವಾಲಾಗಿ ಸ್ವೀಕರಿಸುವುದು. ನಾನು ಎರಡನೆಯದ್ದನ್ನು ಆಯ್ಕೆ ಮಾಡಿಕೊಂಡೆ ಎಂದು ವಿವರಿಸಿದರು ಇದೇ ವೇಳೆ ತಾವು ಬರೆದ 'ಹೀಲಡ್'(ವಾಸಿಯಾದ) ಪುಸ್ತಕದ ಬಗ್ಗೆಯೂ ಮಾತನಾಡಿದ ೪೨ ವರ್ಷದ ಬಾಲಿವುಡ್ ನಟಿ, ನನ್ನ ಪುಸ್ತಕ ಓದಿದೆ ಎಲ್ಲರಿಗೂ ಧನ್ಯವಾದ. ಅನಾರೋಗ್ಯಕ್ಕಿಡಾದ ವೇಳೆ ನನಗೆ ಬೆಂಬಲವಾಗಿ ನಿಂತ ಬಾಲಿವುಡ್ ಗೆ, ವಿಶೇಷವಾಗಿ ನನ್ನ ಕುಟುಂಬಕ್ಕೆ ಧನ್ಯವಾದ ಎಂದರು.ಒವೇರಿಯನ್ ಕ್ಯಾನ್ಸರ್ ವಿರುದ್ಧ ಹೋರಾಡಿ ಸಾವು ಗೆದ್ದ ಮನಿಶಾ ಇತ್ತೀಚಿಗಷ್ಟೇ ವಿದೇಶದಿಂದ ಭಾರತಕ್ಕೆ ಹಿಂದಿರುಗಿದ್ದಾರೆ.

 

Edited By

Kavya shree

Reported By

Kavya shree

Comments