ಸ್ಟಾರ್ ನಟನ ಆಟೋಗ್ರಾಫ್’ಗಾಗಿ ಅಭಿಮಾನಿ ಹೀಗ್ ಮಾಡೋದಾ….?!!!

29 Jan 2019 2:16 PM | Entertainment
290 Report

ತಮ್ಮ ಸ್ಟಾರ್ ಅಭಿಮಾನ ಪಡೆಯಲು ಅಭಿಮಾನಿಗಳು ಏನೆಲ್ಲಾ ಮಾಡ್ತಾರೆ, ಸ್ಟಾರ್’ಗಳ ಸಣ್ಣದೊಂದು ಸ್ಮೈಲ್ ಗೆ,ಒಂದು ಸೆಲ್ಫಿಗೆ ಅಭಿಮಾನಿಗಳು ಫಿದಾ ಆಗ್ತಾರೆ. ತಮ್ಮ ನೆಚ್ಚಿನ ನಟ-ನಟಿಯರ ಆಟೋಗ್ರಾಫ್‌ಗಾಗಿ ಯುವಕ-ಯುವತಿಯರು ಏನೆಲ್ಲಾ ಕಸರತ್ತು ಮಾಡುತ್ತಾರೆ. ಇಲ್ಲೊಬ್ಬ ಯುವತಿ ತಮ್ಮ ನೆಚ್ಚಿನ ನಟನ ಆಟೋಗ್ರಾಫ್‌ಗಾಗಿ ಜಾಕೆಟ್ ಬಿಚ್ಚಿರುವ ಫೋಟೋ ವೈರಲ್ ಆಗಿದೆ. 

ಉತ್ತರ ಖಂಡ್ ನ ಮಸ್ಸೂರಿಯಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ಚಿತ್ರವೊಂದರ ಶೂಟಿಂಗ್ ನಲ್ಲಿ ತೊಡಗಿದ್ದಾಗ ಅಲ್ಲಿಗೆ ಬಂದ ಅಭಿಮಾನಿಯೊರ್ವಳು ತಾನು ಧರಿಸಿದ್ದ ಜಾಕೆಟ್ ಬಿಚ್ಚಿ ಶರ್ಟ್ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡಿದ್ದಾರೆ.  ಇದನ್ನು ನೋಡಿ ಅಲ್ಲಿದ್ದವರು ಇಂದೆಂಥಾ ಅಭಿಮಾನ ಎಂದು ಉದ್ಘರಿಸಿದ್ದಾರೆ. ಈ ಹಿಂದೆ ಶಾಹಿದ್ ಸಂದರ್ಶನವೊಂದರಲ್ಲಿ ಒಬ್ಬ ಫ್ಯಾನ್ ರ ಮಿಡ್ ನೈಟ್ ರಾಮಾಯಣದ ಬಗ್ಗೆ ಹೇಳಿಕೊಂಡಿದ್ದರು. ರಾತ್ರಿ 2 ಗಂಟೆ ಅಂದು ಅಭಿಮಾನಿಯೊಬ್ಬರು ಶಾಹಿದ್ ವಾಸ ಮಾಡುತ್ತಿದ್ದ ಮನೆಯ ಕಾಂಪೌಂಡ್ ಅನ್ನು ಹತ್ತಿ ಭೇಟಿ ಮಾಡಲು ಬಂದಿದ್ದು ಗಾಬರಿ ಉಂಟು ಮಾಡಿತ್ತು.  ಮೊದ ಮೊದಲು ಅಭಿಮಾನಿಗಳು ಇದೆನೆಲ್ಲಾ ಮಾಡಿದ್ದು ಕಂಡು ಸ್ವಲ್ಪ ಗಾಬರಿ ಪಡುತ್ತಿದ್ದ ಮೀರಾ ಆ ನಂತರ ಅರ್ಥ ಮಾಡಿಕೊಂಡು ಸುಮ್ಮನಾದಳು ಎಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

Edited By

Kavya shree

Reported By

Kavya shree

Comments