ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಕ್ಕಾಪಟ್ಟೆ ಅದೃಷ್ಟ ಮಾಡಿದ್ದಾರಂತೆ..!! ಯಾಕ್ ಗೊತ್ತಾ…?

29 Jan 2019 1:04 PM | Entertainment
4317 Report

ಸ್ಯಾಂಡಲ್  ವುಡ್ ಸ್ಟಾರ್’ಗಳು ಯಾವಾಗಲೂ ಸ್ಟಾರ್’ಗಳಾಗಿಯೇ ಉಳಿಯಬೇಕು ಅಂದರೆ ಅದಕ್ಕೆ ಅಭಿಮಾನಿಗಳು ತುಂಬಾ ಮುಖ್ಯ.. ನಟ ದರ್ಶನ್ ಈ ವಿಷಯದಲ್ಲಿ ನಿಜಕ್ಕೂ ಸಿಕ್ಕಾಪಟ್ಟೆ ಅದೃಷ್ಟ ಮಾಡಿದ್ದಾರೆ ಅನಿಸುತ್ತದೆ... ಅಭಿಮಾನಿಗಳು ದರ್ಶನ್ ರನ್ನು ಇಷ್ಟ ಪಡುತ್ತಿರುವುದನ್ನು ನೋಡಿದರೆ ಸ್ವತಹ ದರ್ಶನ್ ಕೂಡ ಬೆಕ್ಕಸ ಬೆರಗಾಗೋದರಲ್ಲಿ ನೋ ಡೌಟ್… ಸ್ಟಾರ್ ನಟರ ಚಿತ್ರವನ್ನು ಅವರ ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಳ್ಳುವುದನ್ನು ಎಲ್ಲರೂ ಕೂಡ ನೋಡಿಯೇ ಇರುತ್ತಾರೆ... ಆದರೆ, ದರ್ಶನ್ ಅವರ ಅಭಿಮಾನಿಯೊಬ್ಬ ತನ್ನ ಅಭಿಮಾನವನ್ನು ಪ್ರದರ್ಶನ ಮಾಡಿರುವ ರೀತಿ ಅಚ್ಚರಿ ಮೂಡಿಸುವಂತೆ ಇದೆ.

ಈತ ಡಿ ಬಾಸ್ ನ ಅಪ್ಪಟ ಅಭಿಮಾನಿ …ಈತ ಬೆನ್ನ ಮೇಲೆ ದರ್ಶನ್ ಅವರ ದೊಡ್ಡ ಟ್ಯಾಟೂ ಹಾಕಿಸಿಕೊಂಡು ಇದೀಗ ಎಲ್ಲರ ಗಮನವನ್ನು ಸೆಳೆದಿದ್ದಾನೆ. ಆತನ ಅಭಿಮಾನ ನೋಡಿ ನಟ ಅಭಿಷೇಕ್ ಅಂಬರೀಶ್ ಕೂಡ ಆಶ್ಚರ್ಯ ಪಟ್ಟಿದ್ದಾರೆ..ಈ ಅಭಿಮಾನಿಯ ಹೆಸರು  ಆನಂದ ರಾಮ್.. ಅವರು ಟ್ಯಾಟೂ ಹಾಕಿಸಿಕೊಂಡಿರುವುದು ದರ್ಶನ್ ಹುಟ್ಟುಹಬ್ಬದ ಉಡುಗೊರೆಗಾಗಿ. ಇದೇ ಫೆಬ್ರವರಿ 16 ರಂದು ದರ್ಶನ್ ತಮ್ಮ ಜನ್ಮದಿನ ಆಚರಣೆ ಮಾಡುತ್ತಿದ್ದು, ಅದಕ್ಕೆ ಆನಂದ್ ಈ ಗಿಫ್ಟ್ ನೀಡಿದ್ದಾರೆ. ಅವರ ಟ್ಯಾಟೂ 1.5 ಫೀಟ್​ ಉದ್ದ 1.5 ಫೀಟ್​ ಅಗಲ ಇದೆ. 'ಯಜಮಾನ್ರು' ಎಂಬ ಬರಹ ಹೊಂದಿದೆ. ಬೀಡಿ ಸೇರುತ್ತಿರುವ ದರ್ಶನ್ ಚಿತ್ರದ ದರ್ಶನ್ ಟ್ಯಾಟೂ ಸೋಷಿಯಲ್ ಮೀಡಿಯಾದಲ್ಲಿಯೂ ಸಿಕ್ಕಾಪಟ್ಟೆ ವೈರಲ್ ಆಗಿದೆ..

Edited By

Manjula M

Reported By

Manjula M

Comments