ಬಿಗ್’ಬಾಸ್ ಮನೆಯಲ್ಲಿ ಕವಿತಾ ನನ್ನನ್ನು ಆ ದಿನ ಪ್ರಪೋಸ್ ಮಾಡಿದಾಗ....

29 Jan 2019 10:00 AM | Entertainment
1839 Report

ಬಿಗ್’ಬಾಸ್ ಸೀಸನ್ 6 ರಲ್ಲಿ ಶಶಿ ಕುಮಾರ ವಿನ್ನರ್  ಆಗಿದ್ದಾರೆ. ಅಂದಹಾಗೇ ಶಶಿ ಹೊರ ಬರುತ್ತಿದ್ದಂತೇ  ಎಲ್ಲರು ಕವಿತಾ ಅವರು ನಿಮ್ಮನ್ನು ಪ್ರಪೋಸ್ ಮಾಡಿದಾಗ ಹೇಗೆ ಅನಿಸಿತು ಅಂತಾ ಕೇಳ್ತಿದ್ದಾರೆ.. ನಿಜ ಹೇಳಬೇಕು ಅಂದ್ರೆ, ನನಗೆ ಕವಿತಾ ಲವ್ ಪ್ರಪೋಸ್ ಮಾಡಿದಾಗ…. ಆಗ ಏನು ಹೇಳಬೇಕು ಅಂತಾ ಗೊತ್ತಾಗಲೇ ಇಲ್ಲ. ನಾನು ಸ್ವಲ್ಪ ಹೊತ್ತು ಯೋಚನೆ ಮಾಡಿದೆ. ಆದರು ನಿಭಾಯಿಸಸೋಕೆ ರೆಡಿಯಾದೆ.

ಕವಿತಾ ಕ್ಯಾಂಡಲ್ ಲೈಟ್ ಡಿನ್ನರ್ ನಲ್ಲಿ ನನಗೆ ಬೇರೆ ಬೇರೆ ಥರದ್ದ  ಪ್ರಶ್ನೆಗಳನ್ನು ಕೇಳೋಕೆ ಶುರುಮಾಡಿದ್ರು. ನಾನು ಇದ್ಯಾಕೆ ಇವಳು ಹೀಗೆಲ್ಲಾ ಕೇಳ್ತಿದ್ದಾಳಾ…ಇದೆಲ್ಲಾ ಬಿಗ್ ಬಾಸ್  ಹೇಳಿ ಕಳುಹಿಸಿದ್ದಾ..? ಅಥವಾ ಇದ್ದಕ್ಕಿದ್ದ ಹಾಗೇ ಕವಿತಾನೇ ಹೀಗೆ ಕೇಳ್ತಿರೋದಾ ಅಂತಾ ಕ್ಷಣ ಹೀಟ್ ಆಗಿದ್ದಂತೂ ನಿಜ. ಅವಳು ಫೋನ್, ಸೀಕ್ರೆಟ್ ಲಾಕ್ ಇದೆಲ್ಲಾ ಹೇಳಿದಾಗ ಸ್ವಲ್ಪ  ಅಚ್ಚರಿಯಾಗಿದ್ದೂ ನಿಜ. ಆದರೆ ಮನಸಿನ ಮೂಲೆಯಲ್ಲಿ ಇದೆಲ್ಲಾ ಸೀಕ್ರೇಟ್ ಟಾಸ್ಕ್ ಇದ್ರೂ ಇರಬಹುದು ಎಂದು ಅನ್ಕೊಂಡು, ಏನೇ ಮಾಡಿದ್ರು ನಾನು ಇದರಿಂದ ಹೊರ ಬರಬಾರದು ಅಂತಾ ಕವಿತಾ ಕೇಳಿದ ಪ್ರಶ್ನೆಗೆಲ್ಲಾ ಉತ್ತರಿಸುತ್ತಾ ಬಂದೆ. ಇನ್ನು ನಾನು ಶಾಕ್ ಆಗಿ ಇದರಿಂದ ಹೊರ ಹೋದರೆ ಕವಿತಾ ವಿನ್ ಆಗ್ತಾಳೆ, ನಾನು ಟಾಸ್ಕ್ ಮಾಡದೇ ಸೋತು ಹೋಗ್ತೀನಿ ಅಂತೇಳಿ…ನಾನು ಡಿನ್ನರ್ ನೈಟ್'ನ್ನು  ಅದ್ಭುತವಾಗಿ ಮಾಡ್ದೆ .ನಾನು ಮತ್ತು ಕವಿತಾ ಲವ್ ಗಾಸಿಪ್ ಏನು ಅಂತಾ ಗೊತ್ತಿಲ್ಲ. ವೂಟ್ ‘ನಲ್ಲಿ ಎಪಿಸೋಡ್ ನೋಡ್ತೀನಿ . ಅದೇಗೆ ಟೆಲಿಕಾಸ್ಟ್ ಮಾಡಿದ್ದಾರೋ ಗೊತ್ತಿಲ್ಲ. ಇದರ ಬಗ್ಗೆ  ನಾನೇನು ಹೆಚ್ಚು ಹೇಳೋದಿಲ್ಲ. ನನ್ನನ್ನು ಕರ್ನಾಟಕದ ಜನ ಗೆಲ್ಸಿದ್ದಾರೆ ಅವರಿಗೆ ನಾನೆಂದಿಗೂ ಚಿರಋಣಿ ಎಂದಿದ್ದಾರೆ.

Edited By

Kavya shree

Reported By

Kavya shree

Comments