‘ಬಿಗ್ಬಾಸ್ ಇದು ಮ್ಯಾಚ್ ಫಿಕ್ಸಿಂಗ್ : ವಿನ್ನರ್ ಆಗಬೇಕಿದ್ದು ಶಶಿ ಅಲ್ಲ, ಬಾಡಿಗೆ ಮನೆಯಲ್ಲಿದ್ದವನು.?!!!

28 Jan 2019 3:56 PM | Entertainment
17208 Report

ಅಂದಹಾಗೇ ಬಿಗ್ ಬಾಸ್ ಸೀಸನ್' 6 ರ ವಿನ್ನರ್ ಯಾರೆಂದು ಘೋಷಣೆಯಾಗಿದೆ. ನಿನ್ನೆ ತಾನೆ ಫಿನಾಲೆಯಲ್ಲಿ ಮಾರ್ಡನ್ ರೈತ ಶಶಿ ಕುಮಾರ್ ಬಿಗ್’ಬಾಸ್ 6 ನ ಆಗಿ ವಿನ್ನರ್ ಆಗಿದ್ದಾರೆ. ಇದರಿಂದ ಸಾಕಷ್ಟು ಬಿಗ್’ಬಾಸ್ ಅಭಿಮಾನಿಗಳು ಸಂಭ್ರಮ ಪಟ್ಟರೇ ಮತ್ತೊಂದಿಷ್ಟು ಜನ ಬಿಗ್’ಬಾಸ್ ಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಿಗ್ ಬಾಸ್ ನಡೆಸೋವರಿಗೆ ತಲೆ ಕೆಟ್ಟಿದ್ಯಾ... ಹೋಗಿ ಹೋಗಿ ಡವ್ ರಾಜನನ್ನು ಗೆಲ್ಸಿದ್ದೀರಲ್ಲ... ಅನ್ನದಾತರಿಗೆ ಮಾಡಿದ ಅವಮಾನ ಎಂದು ಬಿಗ್’ಬಾಸ್ ವಿರುದ್ಧ ರೊಚ್ಚಿಗೆದ್ದಿದ್ದಾರೆ ಅಭಿಮಾನಿಗಳು.

ಹೀಗಂತಾ ಹೇಳ್ತಿರೋದು ನಾವಲ್ಲ ರೀ, ಬಿಗ್ಬಾಸ್ ನೋಡುತ್ತಿದ್ದವರ ಮಾತು. ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಬಾಸ್ ಥರಾ ಮತ್ತೆ ಬಿಗ್ ಬಾಸ್ ಸ್ಟಾರ್ ವಾರ್ ಶುರುವಾಗಿದೆ. ನಿನ್ನೆ ಬಿಗ್ ಬಾಸ್ ವಿನ್ನರ್ ಶಶಿ ಅಂತಾ ಘೋಷಣೆಯಾಗಿದ್ದೇ ತಡ ಒಂದಷ್ಟು ಮಂದಿ ಖುಷಿಯಾದ್ರೆ ಮತ್ತಷ್ಟು ಜನಕ್ಕೆ ನಿರಾಸೆಯಾಗಿದೆ.  ಬಿಗ್ಬಾಸ್  ಮನೆಯಲ್ಲಿ ತಮ್ಮ ಹಾಡಿನ ಮೂಲಕ, ಸರಳ ಸಜ್ಜನಿಕೆಯಲ್ಲಿ ತಮ್ಮ ವ್ಯಕ್ತಿತ್ವ  ಬೆಸೆದ ಗಾಯಕ ನವೀನ್ ಸಜ್ಜು ಗೆ ಈ ಬಾರಿಗೆ ಬಿಗ್’ಬಾಸ್ ಟ್ರೋಫಿ ಸಿಗಭೇಕಿತ್ತು, ಆದರೆ ಅದರ ಬದಲು ಶಶಿ ಕುಮಾರ್ ಗೆ ಸಿಕ್ಕಿರೋದು ಎಷ್ಟು ಸರಿ. ಫೇಕ್ ಅಕೌಂಟ್ ಗಳನ್ನು ಕ್ರಿಯೇಟ್ ಮಾಡಿ ಓಟ್ ಮಾಡಿಸಿ ಶಶಿಯನ್ನ ಗೆಲ್ಲಿಸಲಾಗಿದೆ. ನಿಜವಾದ ಬಿಗ್ ಬಾಸ್ ಗೆಲುವು ಸಂಗೀತ ನಿರ್ದೇಶಕ ನವೀನ್ ಸಜ್ಜು ಸಿಗಬೇಕಿತ್ತು ಎಂಬುದು ಹಲವು ವೀಕ್ಷಕರ ಇಚ್ಛೆ ಆಗಿತ್ತು. ಆದ್ರೆ, ವೀಕ್ಷಕರ ಆಸೆಗೆ ವಿರುದ್ಧವಾಗಿ ಶಶಿ ಗೆಲುವಿನ ನಗೆ ಬೀರಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ನೂರು ದಿನಗಳ ಕಾಲ ಗದ್ದಲ-ಗಲಾಟೆ, ವಾದ-ವಿವಾದಗಳಿಗೆ ಸಾಕ್ಷಿ ಆಗದೆ, ಸರಳ-ಸಜ್ಜನ ವ್ಯಕ್ತಿತ್ವ ಹೊಂದಿದ್ದ ನವೀನ್ ಸಜ್ಜು ವಿನ್ನರ್ ಆಗಲು ಅರ್ಹರು ಎಂಬುದು ಹಲವರ ಅಭಿಪ್ರಾಯವಾಗಿತ್ತು. ಆದ್ರೆ, ಅದಕ್ಕೆ ತದ್ವಿರುದ್ಧ ತೀರ್ಪು ನಿನ್ನೆ ಹೊರಬಿತ್ತು.ಇದರಿಂದ ಕುಪಿತಗೊಂಡ ವೀಕ್ಷಕರು ಕಲರ್ಸ್ ಸೂಪರ್ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲೇ 'ಬಿಗ್ ಬಾಸ್'ಗೆ ಛೀಮಾರಿ ಹಾಕುತ್ತಿದ್ದಾರೆ.  ಅಂದಹಾಗೇ ಹಳ್ಳಿ ಹುಡುಗ, ಹೆಚ್ಚು ವಿದ್ಯಾಭ್ಯಾಸ ಗೊತ್ತಿರದ ಬಡ ಕುಟುಂಬದಿಂದ ಬಂದ ನವೀನ್ ಸಜ್ಜು,ಇಂದಿಗೂ ಬಾಡಿಗೆ ಮನೆಯಲ್ಲಿದ್ದಾರೆ. ಇದರ ಬಗ್ಗೆ ಯಾರಿಗೆ ಗೊತ್ತಿದೆ ಹೇಳಿ ಎನ್ನುತ್ತಾರೆ ಅಭಿಮಾನಿಗಳು. ನವೀನ್ ಗೆ ಈ ಬಾರಿ ಟ್ರೋಫಿ ಬಂದೇ ಬರುತ್ತೆ ಎಂದವರ ಆಸೆಗೆ ತಣ್ಣೀರೆರಚಿದೆ ಬಿಗ್ ಬಾಸ್. ಒಟ್ಟಾರೆ ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ನವೀನ್ ಸಜ್ಜು ಅವರ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ ಅವರ ಅಭಿಮಾನಿಗಳು.

Edited By

Kavya shree

Reported By

Kavya shree

Comments