ಸದ್ದಿಲ್ಲದೇ ಗುಟ್ಟಾಗಿ ಮದುವೆಯಾದ್ರಾ ಗೂಗ್ಲಿ ಬೆಡಗಿ…?!!!

28 Jan 2019 3:23 PM | Entertainment
2906 Report

ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಸೂಪರ್ ಹೀರೋಯಿನ್ ಆಗಿ ನಟಿಸಿದ್ದ ನಟಿ ಕೃತಿ ಕರಬಂಧಗೆ ಸಾಮಾಜಿಕ ಜಾಲತಾಣಗಳಲ್ಲಿ ಭರಪೂರ ವಿಶ್’ಗಳು ಬರುತ್ತಿವೆ. ಗೂಗ್ಲಿ ಬೆಡಗಿ ಯಾವುದೇ ಮಾಧ್ಯಮಗಳಲ್ಲೂ  ಸುದ್ದಿಯಿಲ್ಲದೇ  ಗುಟ್ಟಾಗಿ ಮದುವೆ ಮಾಡಿಕೊಂಡಿದ್ದಾರೆ. ಕೃತಿ ಸದ್ಯ ಮದುವೆ ಸಂಭ್ರಮದಲ್ಲಿದ್ದಾರೆ. ಆದರೆ ಈ ಬಗ್ಗೆ ಎಲ್ಲಿಯೂ ತುಟಿಕ್ ಫಿಟಿಕ್ ಎನ್ನದೇ ಯಾರ ಜೊತೆ ಹಸೆಮಣೆ ಏರಿದ್ದಾರೆ ಅಂತಾ ಯೋಚಿಸ್ತಿದ್ದೀರಾ…!

ಅಂದಹಾಗೇ  ಕೃತಿ ಕರಬಂಧ ಮದುವೆ ಖುಷಿಯಲ್ಲಿದ್ದಾರೆ, ಹೌದು. ಆದರೆ ಖಂಡಿತವಾಗಿಯೂ ಕೃತಿ ಕರಬಂಧ ಮದುವೆಯಾಗಿಲ್ಲ. ಮದುವೆ ವೇಷ ಭೂಷಣಗಳಲ್ಲಿ ಮಿಂಚ್ತಾಯಿರುವ ಕೃತಿ ಕರಬಂಧ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸೌಂಡು ಮಾಡುತ್ತಿವೆ.  ಅವರಿಗೆ ಶುಭಾಶಯದ ಸುರಿಮಳೆಗಳೇ ಬೀಳುತ್ತಿವೆ. ಹಾಗಾದರೆ ನಿಜವಾಗಲೂ ಕೃತಿ  ಕರಬಂದ ಮದುವೆ ಸಂಭ್ರಮದಲ್ಲಿರೋದು ನಿಜ, ಆದರೆ ಅವರ ಮದುವೆ ಸಂಭ್ರಮದಲಲ್ಲ, ಬದಲು ತಮ್ಮ ಸಹೋದರಿ ಇಶಿತಾ ಕರಬಂಧ ಅವರ ವಿವಾಹದಲ್ಲಿ.

ಮದುವೆಯ ಸಂಭ್ರಮದಲ್ಲಿರುವುದು ನಿಜ. ಆದರೆ ಕೃತಿ ಕರಬಂದ ಅವರ ಮದುವೆಯಲ್ಲ. ಅವರ ತಂಗಿಯ ಮದುವೆ. ಕೀರ್ತಿ ಕರಬಂಧ ಅವರ ತಂಗಿ ಇಶಿತಾ ಕರಬಂದ ಅವರ ಮದುವೆಯ ಸಂಭ್ರಮದಲ್ಲಿ ಭಾರೀ ಜಬರ್’ದಸ್ತ್ ಆಗಿ ಸಿಂಗಾರ ಮಾಡಿಕೊಂಡಿದ್ದಾರೆ. ಅಲ್ಲಿನ ಮದುವೆ ಫೋಟೋಗಳೇ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು, ಅಲ್ಲಿಯ ಅಭಿಮಾನಿಗಳು ಅದನ್ನು ತಪ್ಪಾಗಿ ತಿಳಿದು, ಕೃತಿಗೆ ಮದುವೆಯಾಗಿದೆ ಎಂದು ಮದುವೆಯ ಶುಭಾಶಯ ಕೋರಿದ್ದಾರೆ.

Edited By

Kavya shree

Reported By

Kavya shree

Comments