ವಿಷ್ಣುವರ್ಧನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ಖ್ಯಾತ ನಟಿ ಮೇಲೆ ಕೇಸ್...!!!

28 Jan 2019 10:27 AM | Entertainment
903 Report

ಡಾ. ವಿಷ್ಣುವರ್ಧನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ನಟಿ ಭಾನು ಪ್ರಿಯಾ ಮೇಲೆ ದೂರು ದಾಖಲಾಗಿದೆ. 14 ವರ್ಷದ ಮಗಳಿಗೆ ಕಿರುಕುಳ ನೀಡಿದ್ದಾರೆಂದು ಮಹಿಳೆಯೊಬ್ಬರು ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಆಂದ್ರದ ಗೋದಾವರಿ ಜಿಲ್ಲೆಯ  ಮಹಿಳೆಯೊಬ್ಬರು ಸಮಲ್ ಕೋಟ್ ಪೊಲೀಸ್ ಠಾಣೆಯಲ್ಲಿ ಭಾನು ಪ್ರಿಯಾ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ಮನೆಕೆಲಸಕ್ಕಾಗಿ ತನ್ನ 14 ವರ್ಷದ ಮಗಳನ್ನು ಚೆನ್ನೈಗೆ ಕರೆದೊಯ್ದು ಕಿರುಕುಳ ನೀಡಿದ್ದಾಗಿ ದೂರು ನೀಡಿರುವ ಮಹಿಳೆ  ನಟಿಯ ವಿರುದ್ಧ ಆರೋಪಿಸಿದ್ದಾರೆ.  ಅಂದಹಾಗೇ ಭಾನು ಪ್ರಿಯಾ ಚೆನ್ನೈನ ನಿವಾಸದಲ್ಲಿ ವಾಸವಾಗಿದ್ದಾರೆ. ಆ ಮನೆಯಲ್ಲಿ 14 ವರ್ಷದ ಹೆಣ್ಣು ಮಗುವಿಗೆ ಮಾನಸಿಕವಾಗಿ, ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಭಾನು ಪ್ರಿಯಾ ಅವರ ಸಹೋದರ ಕೂಡ ಅಕ್ಕನ ಜೊತೆ ಸೇರಿಕೊಂಡು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ನನಗೆ ಯಾವುದೋ ಅನಾಮಧೇಯ ಕರೆ ಮೂಲಕ ತಮಗೆ ಈ ಸಂಗತಿ ಗೊತ್ತಾಗಿದ್ದಾಗಿ ಆ ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಭಾನುಪ್ರಿಯಾ ಬಾಲಕಿಯು ತಮ್ಮ ಮನೆಯಲ್ಲಿ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ, ಆದರೆ ಇನ್ನೂ ಬಾಲಕಿ ಅವರ ಮನೆಯಲ್ಲಿಯೇ ಇದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By

Kavya shree

Reported By

Kavya shree

Comments