ಅಪ್ಪನ ಹಾದಿಯಲ್ಲಿ ನಡೆಯದ ಮಗ : ಎದುರಾಯ್ತು ಡೈನಾಮಿಕ್ ಸ್ಟಾರ್'ಗೆ ಸಂಕಷ್ಟ..!!!

25 Jan 2019 4:27 PM | Entertainment
8204 Report

ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಪ್ರಣಾಮ್ ದೇವರಾಜ್ ಗಾಂಜಾ ಸೇವಿಸಿದ್ದಾರೆಂದು ಇದೀಗ ವೈದ್ಯಕೀಯ ವರದಿಯಿಂದ ಸಾಬೀತಾಗಿದೆ. ಆಂಧ್ರಪ್ರದೇಶದ ರಾಜಕಾರಣಿ ದಿ. ಆದಿಕೇಶವಲು ಅವರ ಮೊಮ್ಮಗ ಗೀತಾವಿಷ್ಣು ವಿರುದ್ಧ ದಾಖಲಾಗಿದ್ದ ಅಪಘಾತ ಹಾಗೂ ಎನ್‌ಡಿಪಿಎಸ್ (ಮಾದಕವಸ್ತು ನಿಯಂತ್ರಣ ಕಾಯ್ದೆ) ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು, ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಆರೋಪಿಯಾಗಿರುವ ಗೀತಾವಿಷ್ಣು ಗಾಂಜಾ ಸೇವಿಸಿಯೇ ಕಾರು ಚಲಾಯಿಸುತ್ತಿದ್ದನು. ಆತನ ಕಾರಿನಲ್ಲಿ ಪ್ರಣಾಮ್ ದೇವರಾಜ್, ಮೊಹಮ್ಮದ್ ಫೈಜಲ್ ರಫಿ, ಶಶಾಂಕ್, ಮೊಹಮ್ಮದ್ ಜುನೈದ್ ರಫಿ  ಕೂಡ ಇದ್ದರು. ಇದೀಗ ಇವರು ಸಹ ಗಾಂಜಾ ಸೇವಿಸಿದ್ದಾರೆ ಎನ್ನುವ ವರದಿಯನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಆರೋಪಿ ಗೀತಾವಿಷ್ಣು ಸೇರಿದಂತೇ ಪ್ರಣಾಮ್ ದೇವರಾಜ್, ಮೊಹಮ್ಮದ್ ಫೈಜಲ್ ರಫಿ, ಶಶಾಂಕ್ ಹಾಗೂ ಮೊಹಮ್ಮದ್ ಜುನೈದ್ ರಫಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ಮಾದರಿಯಲ್ಲಿ ಗಾಂಜಾ ಅಂಶವಿರುವುದು ಸಾಬೀತಾಗಿದ್ದು, ಅದರ ವರದಿಯನ್ನು ದೋಷಾರೋಪ ಪಟ್ಟಿಯೊಂದಿಗೆ ಲಗತ್ತಿಸಲಾಗಿದೆ. 217r ಅಂದು ಬೆಂಗಳೂರಿನ ಜಯನಗರದ ಸೌತ್ ಎಂಡ್  ಸರ್ಕಲ್ ನಲ್ಲಿ ಕಾರು ಅಪಘಾತ​ ಪ್ರಕರಣವೊಂದು ನಡೆದಿತ್ತು. ಅಂದು ಗೀತಾವಿಷ್ಣು ಕಾರನ್ನು ಅಡ್ಡಾದಿಟ್ಟಿಯಾಗಿ ಚಲಾಯಿಸಿ ಅಪಘಾತ ಮಾಡಿದ್ದರು. ಅಂದು ಗಾಂಜಾ ಸೇವಿಸಿದ ಆರೋಪಿಯಾಗಿರುವ ಗೀತಾವಿಷ್ಣು ಮತ್ತಿನಲ್ಲಿ ಕಾರು ಚಲಾಯಿಸಿ ಈ ಅಪಘಾತ ಆಗಿದೆ ಎಂಬುದು ಪೊಲೀಸರ ವರದಿಯಾಗಿತ್ತು. ಪ್ರತ್ಯಕ್ಷದರ್ಶಿಗಳ  ವರದಿಯನ್ನು ಸಾಕ್ಷಿಯಾಗಿ ಇಟ್ಟುಕೊಳ್ಳಲಾಗಿತ್ತು. ಪೊಲೀಸರು ತನಿಖಾ ಕಾರ್ಯ ನಡೆಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರಕ್ತದ ಮಾದರಿಯನ್ನು ಕಳುಹಿಸಲಾಗಿತ್ತು. ಸದ್ಯ ಕಾರಿನಲ್ಲಿದ್ದವರು ಸಹ ಗಾಂಜಾ ಸೇವನೆ ಮಾಡಿದ್ದಾರೆಂದು ಸಾಬೀತಾಗಿದೆ. ಇದೀಗ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಅಂದು ಡೈನಾಮಿಕ್ ಸ್ಟಾರ್ ದೇವರಾಜ್ ತಮ್ಮ ಪುತ್ರನ ಬಗ್ಗೆ ಪ್ರತಿಕ್ರಿಯೆ ನೀಡಿ, ನನ್ನ ಮಗ ಯಾವುದೇ ತಪ್ಪು ಮಾಆಡಿಲ್ಲ. ಅದು ಸಾಬೀತಾದರೇ ಕೊರ್ಟು, ನ್ಯಾಯ ಎಲ್ಲರಿಗೂ ಒಂದೇ ಎಂದಿದ್ದರು.

 

Edited By

Kavya shree

Reported By

Kavya shree

Comments