ಕನ್ನಡದ ಸ್ಟಾರ್ ನಟರ ಜೊತೆ ನಟಿಸಿದ್ದ ಸ್ಟಾರ್ ನಟಿ ಈಗ ಏನ್ ಮಾಡ್ತಿದ್ದಾರೆ ಗೊತ್ತಾ...!?

25 Jan 2019 1:14 PM | Entertainment
2245 Report

ಸಾಹಸಸಿಂಹ ವಿಷ್ಣು ವರ್ಧನ್, ದರ್ಶನ್, ಶ್ರೀ ಮುರಳಿ ಜೊತೆ ನಟಿಸಿದ್ದ ಟಾಪ್ ನಟಿ ಇವರು. ಒಂದೇ ವರ್ಷದಲ್ಲಿ ಸ್ಯಾಂಡಲ್’ವುಡ್’ನಲ್ಲಿ ಸಾಕಷ್ಟು ಬೇಡಿಕೆ ಗಿಟ್ಟಿಸಿಕೊಂಡಿದ್ದ ನಾಯಕಿ. ಕನ್ನಡವಷ್ಟೇ ಅಲ್ಲಾ ತಮಿಳು, ತೆಲಗು ಮಲಯಾಳಂ ನಲ್ಲೂ ನಟಿಸಿದ್ದರು.ಕನ್ನಡದಲ್ಲಿ ಮಾಡಿದ್ದು ಬೆರಳಣಿಕೆ ಸಿನಿಮಾಗಳಾದ್ರು, ಕನ್ನಡಾಭಿಮಾನಿಗಳಿಗೆ ಸಾಕಷ್ಟು ಚಿರಪಚಿತಳಾಗಿದ್ದರು.ಆದರೆ ಇದ್ದಕ್ಕಿದ್ದ ಹಾಗೇ ದಿಢೀರ್ ಅಂತಾ ಚಿತ್ರರಂಗದಿಂದ ದೂರವಾಗಿಬಿಟ್ಟರು.

ಈಗ ಅವರ ಲೈಫ್ ಸ್ಟೈಲ್ ಹೇಗಿದೆ..? ಎಲ್ಲಿದ್ದಾರೆ..? ಅಂದಹಾಗೇ ಆಕೆ ಯಾರು ಗೊತ್ತಾ..?  ಶಾಸ್ತ್ರಿ ಸಿನಿಮಾ ನಾಯಕಿ ಮಾನ್ಯ. ಸದ್ಯ ಈಗ ಏನ್ ಮಾಡ್ತಿದ್ದಾರೆ ಗೊತ್ತಾ…? ಮಾನ್ಯ ತಂದೆ ಡಾಕ್ಟರ್ ಆಗಿ ಇಂಗ್ಲೆಂಡ್ ನಲ್ಲಿ ಕೆಲಸ  ಮಾಡುತ್ತಿದ್ದರು. ಹಾಗಾಗಿಯೇ ಮಾನ್ಯ ಬೆಳೆದಿದ್ದು , ಓದಿದ್ದು ಎಲ್ಲವೂ ಇಂಗ್ಲೆಂಡ್ ನಲ್ಲಿಯೇ. 2008 ರಲ್ಲಿ ಸತ್ಯಭಟ್ ರನ್ನು ಮದುವೆಯಾದ ಮಾನ್ಯ  2012 ರಲ್ಲಿ ಆತನಿಗೆ ವಿಚ್ಛೇದನ ಕೊಟ್ಟರು. ಆ ನಂತರ ಉತ್ತರ ಭಾರತಕ್ಕೆ ಸೇರಿದ ವಿಕಾಸ್ ಎಂಬಾತನ್ನು  ಎರಡನೇ ಮದುವೆ ಮಾಡಿಕೊಂಡಿದ್ದಾರೆ. ಸದ್ಯ ಅವರಿಗೆ ಒಂದು ಮಗು ಕೂಡ ಇದೆ. ಅಮೇರಿಕಾದಲ್ಲಿ ನೆಲೆಸಿರುವ ಮಾನ್ಯ ಕಂಪನಿಯೊಂದರಲ್ಲಿ ಹೆಚ್ ಆರ್ ಆಗಿ ಕೆಲಸ ಮಾಡುತ್ತಿದ್ದಾರೆ. ಎಂಬಿಎ ಮಾಡಿಕೊಂಡಿರುವ ಮಾನ್ಯ ಸದ್ಯ ಕಂಪನಿಯೊಂದರ ಉದ್ಯೋಗಿ.  40 ಕ್ಕೂ  ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಈ ನಟಿ ಬೆಳಗ್ಗೆಯಿಂದ ಸಂಜೆಯವರೆಗೂ ಕೆಲಸ ಮಾಡುತ್ತಾ, ಕುಟುಂಬದವರೊಟ್ಟಿಗೆ ಖುಷಿಯಿಂದ ಇದ್ದಾರೆ.

Edited By

Kavya shree

Reported By

Kavya shree

Comments