ರಾಯರ ದರ್ಶನ ಪಡೆದ್ರೂ ಅಪ್ಪು, ಬೇಸರಿಸಿಕೊಂಡಿದ್ಯಾಕೆ...!!!

24 Jan 2019 4:46 PM | Entertainment
1292 Report

ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದುಕೊಂಡಿದ್ದಾರೆ. ಅವರ ಬಹು ನಿರೀಕ್ಷಿತ ಸಿನಿಮಾ  ನಟ ಸಾರ್ವಭೌಮ ಫೆಬ್ರವರಿಗೆ   ರಿಲೀಸ್ ಆಗುತ್ತಿದ್ದು, ಇದೇ ಸಂದರ್ಭದಲ್ಲಿ ರಾಯರನ್ನು ಭೇಟಿ ಮಾಡಿದ್ದಾರೆ. ಪತ್ನಿ ಜೊತೆ ಮಠಕ್ಕೆ ಆಗಮಿಸಿದ ಪುನೀತ್ ರಾಜ್’ಕುಮಾರ್ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಆಶೀರ್ವಾದ ಪಡೆದರು.

ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ರಾಯರ ಆಶೀರ್ವಾದ ಪಡೆಯಲೆಂದು ಬಂದಿದ್ದೇನೆ. ಅಲ್ಲದೇ ಬಹಳ ದಿನಗಳಿಂದ ನಾನು ಮಂತ್ರಾಲಯಕ್ಕೆ ಭೇಟಿ ನೀಡಿರಲಿಲ್ಲ. ಅಷ್ಟೇ ಅಲ್ಲಾ, ಮಂತ್ರಾಲಯದಲ್ಲಿನ ರಾಜ್‍ಕುಮಾರ್ ಭವನದ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಈಗ ಸಾರ್ವಜನಿಕರ ಉಪಯೋಗಕ್ಕೆ ಬರುತ್ತದೆ” ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪುನೀತ್ ಅವರನ್ನು ಮುತ್ತಿದ ಮಾಧ್ಯಮ ವರದಿಗಾರರು, ಅವರನ್ನು ಐಟಿ ಕುರಿತಾಗಿ ಪ್ರಶ್ನೆ ಕೇಳಿದ್ದಾರೆ.  ಉತ್ತರ ನೀಡಲು ನಿರಾಕರಿಸಿ ಅಪ್ಪು, ನಾನು ರಾಯರ ಮಠಕ್ಕೆ ಬಂದಿದ್ದೇನೆ. ಅದೇನಿದ್ದರೂ ಅಧಿಕಾರಿಗಳಿಗೆ ಬಿಟ್ಟಿದ್ದು, ಈ ಬಗ್ಗೆ ನಾನು  ಮಾತನಾಡುವುದಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ. ಇನ್ನು ನಟ ಸಾರ್ವಭೌಮವನ್ನು ಪವನ್ ಒಡೆಯರ್ ನಿರ್ದೇಶನ ಮಾಡಿದ್ದು, ರಾಕ್‍ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗೆ ನಾಯಕಿಯಾಗಿ ಡಿಂಪಲ್ ಬೆಡಗಿ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ನಟಿಸಿದ್ದಾರೆ.

Edited By

Kavya shree

Reported By

Kavya shree

Comments