ನಾನು ಮಾಡಿದ್ದು ರಿಯಲ್ಲೇ ಹೊರತು ರೀಲ್ ಅಲ್ಲ : ಗುಡ್'ನೆಸ್ ರಾಕಿ ಹೀಗಂದಿದ್ಯಾಕೆ...?

24 Jan 2019 3:35 PM | Entertainment
2405 Report

ಬಿಗ್’ಬಾಸ್ ಸೀಸನ್-5 ಫೈನಲ್ ಕಾವು ಮತ್ತಷ್ಟು ಹೆಚ್ಚಾಗುತ್ತಿದೆ. ಮನೆಯಲ್ಲಿ ಫೈನಲ್’ಗೆ ಐದು ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಹೋದ ರಾಕೇಶ್ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿರುವ ನವೀನ್ ಸಜ್ಜು ಅವರನ್ನು ತುಂಬಾ ಮಿಸ್ ಮಾಡ್ಕೊಳ್ತಿದ್ದೀನಿ. ಅಲ್ದೇ ಗೆಸ್ಟ್ ಆಗಿ ಬಂದಿದ್ದ ನಿವೇದಿತಾ ಗೌಡರನ್ನು ಸಾಕಷ್ಟು ಮಿಸ್ ಮಾಡ್ಕೊಳ್ತಿದ್ದೀನಿ, ಅವರು ಮನೆಗೆ ಬಂದಾಗ ಮನೆಯೇ ಒಂದು ಪ್ಲೇ ಗ್ರೌಂಡ್ ಆಗಿಬಿಟ್ಟಿತ್ತು ಎಂದರು . ಬಿಗ್’ಬಾಸ್ ವಿನ್ನರ್ ಒಬ್ಬರಲ್ಲ ಇಬ್ಬರು ಎನ್ನುತ್ತಾರೆ ರೇಡಿಯೋ ಜಾಕಿ ರಾಕೇಶ್ .

ಅಂದಹಾಗೇ ರಾಕೇಶ್ ಹೇಳುವ ಪ್ರಕಾರ, ನಾನು ಎಲ್ಲಿಯೂ ಫೇಕ್ ಮಾಡಿಲ್ಲ. ಮನೆಯಲ್ಲಿ ನಾನು ನನ್ನ ಫೀಲಿಂಗ್ಸ್ ನ ಎಕ್ಸ್ಪ್ರೆಸ್ ಮಾಡಿದ್ದೀನಿ. ಅದೆಲ್ಲಾ ರಿಯಲ್ ಆಗಿ ಮಾಡಿದ್ದೀನಿ ಹೊರತು ಎಲ್ಲಿಯೂ ಫೇಕ್ ಮಾಡಿಲ್ಲ.  ಅಲ್ಲದೇ ರಾಕೇಶ್ ಮತ್ತು ಅಕ್ಷತಾ ಬಗ್ಗೆ  ಸಾಕಷ್ಟು ಟ್ರೋಲ್ ಆಗಿತ್ತು. ಈ ಬಗ್ಗೆ ಮಾತನಾಡಿದ ರಾಕೇಶ್….ನನಗೆ ಬಿಗ್’ಬಾಸ್ ಮನೆಯಿಂದ ಹೊರ ಬಂದ ಮೇಲೆ ಸಾಕಷ್ಟು ಜನ ಕರೆ ಮಾಡಿದ್ದರು. ಅವರೆಲ್ಲಾ ಪಾಸಿಟೀವ್ ಆಗಿಯೇ ಮಾತನಾಡಿದ್ದಾರೆ. ಬಿಗ್’ಬಾಸ್ ಮನೆಯಲ್ಲಿನ ಕೆಲ ದೃಶ್ಯಗಳು ಕೆಲವರಿಗೆ ನೆಗಟೀವ್ ಆಗಿ ಕಂಡರೆ ಅದು ಅವರವರ ವಿವೇಚನೆಗೆ ಬಿಟ್ಟಿದ್ದು. ನಾನು ಅಕ್ಷತಾ ಬಗ್ಗೆ ಮಾತನಾಡಿದ್ರೆ ಹೇಗೆ ತೆಗೆದುಕೊಳ್ತಿರೋ ಗೊತ್ತಿಲ್ಲ. ನಾನು ಅಕ್ಷತಾ ಕ್ಲೋಸ್ ಆಗಿದ್ದೇ ತಪ್ಪಾ…? ನನ್ನೊಂದಿಗೆ ಇರಲು ಅಕ್ಷತಾ ಕಂಫರ್ಟಬಲ್ ಫೀಲ್ ಅನಿಸಿತು. ನನಗೂ ಅಕ್ಷತಾಗೂ ಕಾಮನ್ ಥಾಟ್ಸ್ ಇತ್ತು.

ಹೀಗಾಗಿಯೇ  ನಾವಿಬ್ರು ಕನೆಕ್ಟ್ ಆದ್ವಿ, ಫ್ರೆಂಡ್ಸ್ ಆದ್ವಿ. ಯಾರು ಏನೇ ಅಂದ್ರು ನಮ್ಮಿಬ್ಬರಲ್ಲಿ ಕ್ಲಿಯರ್ ಇತ್ತು. ನಾವಿಬ್ಬರು ಒಳ್ಳೆ ಫ್ರೆಂಡ್ಸ್ ಅಂತಾ.  ನಾನು ಎಲ್ಲಿಯೂ ಅಕ್ಷತಾಳನ್ನು ಟಾಸ್ಕ್ ಗಾಗಿ ಬಳಸಿಲ್ಲ. ಅದು ನೋಡುವವರಿಗೆ ಬಿಟ್ಟಿದ್ದು. ಅಕ್ಷತಾ ತಾಯಿ ಮನೆಗೆ ಬಂದಾಗ ನನ್ನಿಂದ, ಅಕ್ಷತಾಳಿಗೆ ದೂರವಿರುವಂತೆ ಬುದ್ಧಿ ಮಾತು ಹೇಳಿದ್ರು, ಅದರಂತೇ ನಾವಿಬ್ರು ಜೊತೆಯಲ್ಲಿ ಸೇರೊದನ್ನು ಸ್ವಲ್ಪ ಕಡಿಮೆ ಮಾಡಿದ್ವಿ. ನಾನು ಅಕ್ಷತಾ ಗುಡ್ ಅಂಡ್ ಹೆಲ್ದಿ ಜೆನ್ಯೂನ್ ಫ್ರೆಂಡ್ ಆಗಿದ್ವಿ. ಅವರಿಗೂ ಒಂದು ಲೈಫ್ ಇದೆ, ನನಗೂ ಒಂದು ಲೈಫ್ ಇದೆ. ಅದನ್ನೇ ಎಲ್ಲರು ಬೇರೆ ಸಂಬಂಧ ಕಟ್ಟಿದ್ರೆ ನಾವೇನು ಮಾಡೋಕಾಗುತ್ತೆ ಹೇಳಿ ಅಂತಾರೆ ರಾಕಿ. ಇನ್ನು ಬಿಗ್ ಬಾಸ್ ಮನೆಯಲ್ಲಿ ವಿನ್ನರ್ ಆಗೋದು ಇಬ್ಬರು ಸ್ಪರ್ಧಿಗಳು. ಒಂದು ಸುದೀಪ್  ಘೋಷಣೆ ಮಾಡುವ ಕಂಟೆಸ್ಟಂಟ್, ಇನ್ನೊಂದು ನಾನು ಎನ್ನುತ್ತಾರೆ ರಾಕೇಶ್. ಅಂದಹಾಗೇ ಬಿಗ್’ಬಾಸ್ ಮನೆಯಲ್ಲಿ ಯಾರು ಗೆಲ್ಲಬೇಕು ಅನಿಸುತ್ತೆ, ಅಥವಾ ಗೆಲ್ಲಬಹುದು ಅಂದ್ರೆ ಅದು ನವೀನ್  ಸಜ್ಜುನೇ ಆಗಿರಬೇಕು ಎನ್ನುತ್ತಾರೆ. ನನ್ನ ಗುಡ್’ನೆಸ್ ನ್ನು ನಾನು ಬಿಗ್’ಬಾಸ್ ಮನೆಯಲ್ಲಿ ಹರಡಿಸಿದ್ದೇನೆ. ನನಗೆ ಅದೇ ಖುಷಿ ಎನ್ನುತ್ತಾರೆ ರಾಕಿ.

Edited By

Kavya shree

Reported By

Kavya shree

Comments