‘ದಶರಥ’ನೊಂದಿಗೆ ಒಂದಾದ ‘ಸಾರಥಿ’..!! ‘ಅಂಜದಗಂಡ’ನ್ನು ಹಾಡಿ ಹೊಗಳಿರುವ ‘ದಾಸ’..!!!

24 Jan 2019 3:08 PM | Entertainment
1009 Report

ಸ್ಯಾಂಡಲ್ವುಡ್ ನಲ್ಲಿ  ಒಂದು ಕಾಲದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಇದ್ದ ಅಭಿಮಾನಿಗಳು ಯಾರಿಗೂ ಇರಲಿಲ್ಲ.. ಚಂದನವನವನ್ನ ಬಹಳಷ್ಟು ಕಾಲ ಆಳಿದ ಹೀರೋ ಅಂದ್ರೆ ಅದು ಕ್ರೇಜಿಸ್ಟಾರ್…ಇದೀಗ ಕ್ರೇಜಿಸ್ಟಾರ್​ ರವಿಚಂದ್ರನ್​ ಲಾಯರ್​ ಆಗಿ ನಟಿಸಿರುವ ಚಿತ್ರ ದಶರಥ ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಮುಂದೆ ತೆರೆಗೆ ಬರಲು ಸಿದ್ದವಾಗುತ್ತದೆ. ಈ ಚಿತ್ರದಲ್ಲಿ ವಿರೋಧಿಗಳಿಗೆ ತಮ್ಮ ಲಾ ಪಾಯಿಂಟ್​ ಮೂಲಕ ಶಿಕ್ಷೆ ಕೊಡಿಸುವ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಷ್ಯಾ ಏನಪ್ಪಾ ಅಂದ್ರೆ ರವಿಚಂದ್ರನ್​ ಅವರ ಈ ದಶರಥ ಸಿನಿಮಾದಲ್ಲಿನ ಒಂದು ಹಾಡಿಗೆ ಡಿ ಬಾಸ್ ಧ್ವನಿಯಾಗಿದ್ಧಾರೆ ಈಗಾಗಲೇ ಚಲನಚಿತ್ರಗಳಲ್ಲಿ  ನರೇಷನ್​ ಮೂಲಕ ಎಲ್ಲರ ಕೈಯಲ್ಲೂ ಸೈ ಎನಿಸಕೊಂಡಿದ್ದ ದರ್ಶನ್​ ಅವರು ಈ ಚಿತ್ರದಲ್ಲಿ ರವಿಚಂದ್ರನ್​ ಅವರ ಗುಣಗಾನವನ್ನು ಹಾಡಿನಲ್ಲಿ ಹಾಡಿ ಹೊಗಳಿದ್ದಾರೆ ಎಂದು ಹೇಳಲಾಗುತ್ತಿದೆ... ಇನ್ನು ಈ ಹಾಡು ಹೇಗಿರಲಿದೆ ಎಂದು ರವಿಚಂದ್ರನ್​ ಮತ್ತು ದರ್ಶನ್​ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದ್ದು ಈ ಹಾಡಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ರವಿಚಂದ್ರನ್​ ಮತ್ತು ದರ್ಶನ್​ ಅವರು ಕುರುಕ್ಷೇತ್ರದಲ್ಲಿ ನಟಿಸಿದ್ದಾರೆ..ಈ ಸಿನಿಮಾಗಾಗಿಯೂ ಕೂಡ ಅಭಿಮಾನಿಗಳು ಕಾಯುತ್ತಿದ್ದಾರೆ.

Edited By

Manjula M

Reported By

Manjula M

Comments