ಶುರುವಾಯ್ತು ಸ್ಯಾಂಡಲ್'ವುಡ್'ನಲ್ಲಿ ಆರಡಿ ಕಟೌಟ್'ಗಳದ್ದೇ ದರ್ಬಾರ್...!

24 Jan 2019 2:34 PM | Entertainment
245 Report

ಕನ್ನಡದ ಸಿನಿಮಾ ಇಂಡಸ್ಟ್ರಿಯಲ್ಲಿ  ಆರಡಿ ಕಟೌಟ್’ಗಳದ್ದೇ ಸೌಂಡು. ಗಾಂಧೀನಗರದಲ್ಲಿ ಮಾತ್ರ ರಾರಾಜಿಸುತ್ತಿದ್ದ ನಮ್ಮ ಸ್ಟಾರ್’ಗಳ ಪೋಸ್ಟರ್’ಗಳು ಇಂದು ರಾಜ್ಯ ಗಡಿ ದಾಡಿ ಬೇರೆ ರಾಷ್ಟ್ರದಲ್ಲೂ ಮಿಂಚುತ್ತಿವೆ.ಕನ್ನಡ ಸಿನಿಮಾಗಳು ಯೂಟ್ಯೂಬ್‌ನಲ್ಲಿ ಸಾವಿರಗಳ ಸಂಖ್ಯೆಯಲ್ಲಿ ಮಾತ್ರ ವೀಕ್ಷಕರನ್ನು ಸೆಳೆಯುತ್ತಿದ್ದವು. ಆದರೆ, ಈಗ ಮಿಲಿಯನ್‌ ಗಡಿಯನ್ನು ದಾಟಿವೆ. ಇತ್ತೀಚಿಗೆ ಹೊಸ ಸಿನಿಮಾಗಳು ದಾಖಲೆಗಳನ್ನು ಬ್ರೇಕ್ ಮಾಡಿ ನ್ಯಾಷನಲ್ ಮಟ್ಟದಲ್ಲಿ ಭರ್ಜರಿ ಸೌಂಡು ಮಾಡುತ್ತಿವೆ.

 ಕನ್ನಡ ಸಿನಿಮಾಗಳೆಂದರೆ, ಕನ್ನಡದ ನಟರೆಂದರೆ ಮೂಗು ಮುರಿಯುತ್ತಿದ್ದವರು ಇದೀಗ  ನಮ್ಮ ನಟರ ಕಾಲ್’ಶೀಟ್ಗಾಗಿ ವ್ಹೇಟ್ ಮಾಡುತ್ತಿದ್ದಾರೆ.ಸದ್ಯಕ್ಕೆ ಹಾಡು, ಟೀಸರ್‌, ಟ್ರೇಲರ್‌ ವೀಕ್ಷಣೆಯಲ್ಲಿ ಅತಿ ಹೆಚ್ಚು ದಾಖಲೆ ಮಾಡಿರುವುದು ನಟ ಯಶ್‌ ಅಭಿನಯದ 'ಕೆಜಿಎಫ್‌' ಸಿನಿಮಾ. 'ಕೆಜಿಎಫ್‌'ನ ಮೂರು ಹಾಡುಗಳ ಪೈಕಿ 'ಜೋಕೆ ನಾನು ಬಳ್ಳಿಯ ಮಿಂಚು' ಹಾಡು 9 ಮಿಲಿಯನ್‌ ಹಾಗೂ ಇದೇ ಹಾಡಿನ ಹಿಂದಿ ವರ್ಷನ್‌ 'ಗಲಿ ಗಲಿ' ಹಾಡು 105 ಮಿಲಿಯನ್‌ ವೀಕ್ಷಣೆ ಪಡೆದುಕೊಂಡಿದೆ. ಉಳಿದ ಹಾಡುಗಳು ಸರಾಸರಿ 2 ಮಿಲಿಯನ್‌ ದಾಟಿದೆ.ನಟ ಸುದೀಪ್‌ ಅಭಿನಯದ 'ಫೈಲ್ವಾನ್‌' ಚಿತ್ರದ ಕುಸ್ತಿ ಟೀಸರ್‌ಗೆ ಸಾಕಷ್ಟು ರೆಸ್ಪಾನ್ಸ್‌ ಬಂದಿದ್ದು, ಈಗಾಗಲೇ 4 ಮಿಲಿಯನ್‌ ಗಡಿ ದಾಟಿದೆ. ಈ ಟೀಸರ್‌ ಬೇರೆ ಬೇರೆ ಭಾಷಿಕರ ಗಮನ ಸೆಳೆಯುತ್ತಿದೆ. ಈ ಟೀಸರ್‌ ರಿಲೀಸಾದ ದಿನ ಟ್ವಿಟರ್‌ನಲ್ಲಿ ಭಾರಿ ಹವಾ ಮೇಂಟೇನ್‌ ಮಾಡಿತ್ತು. ಸಲ್ಮಾನ್‌ ಖಾನ್‌ ಕೂಡ ಸುದೀಪ್’ಗೆ ಶುಭ ಹಾರೈಸಿದ್ದರು.ನಿಖಿಲ್ ಕುಮಾರ ಸ್ವಾಮಿಯವರ ಸೀತಾರಾಮ ಕಲ್ಯಾಣ ಸಿನಿಮಾದ ಟ್ರೈಲರ್ 5 ಮಿಲಿಯನ್ ವೀವ್ಸ್ ದಾಟಿದೆ.

 ದರ್ಶನ್‌ ಚಿತ್ರದ ಹಾಡು ಸೃಷ್ಟಿಸಿರುವ ಅಬ್ಬರದ್ದೇ ಮತ್ತೊಂದು ಕತೆ. ಯಜಮಾನ ಚಿತ್ರದ 'ಶಿವನಂದಿ' ಹೆಸರಿನ ಹಾಡು ಯೂಟ್ಯೂಬ್‌ವೊಂದರಲ್ಲೇ 6 ಮಿಲಿಯನ್‌ ವೀಕ್ಷಕರನ್ನು ತನ್ನತ್ತ ಸೆಳೆದಿದೆ. 'ಒಂದು ಮುಂಜಾನೆ' ಎಂದು ಸಾಗುವ ಮೆಲೋಡಿ ಹಾಡಿನ ಖದರ್‌, ಬರೋಬ್ಬರಿ 4 ಮಿಲಿಯನ್‌ ಗಡಿ ದಾಟಿದೆ. ಹಾಗೆ ಪುನೀತ್‌ರಾಜ್‌ಕುಮಾರ್‌ ಅವರು ಕಾಣಿಸಿಕೊಂಡಿರುವ 'ನಟ ಸಾರ್ವಭೌಮ' ಚಿತ್ರದ ಟೀಸರ್‌ 1 ಮಿಲಿಯನ್‌ ಕ್ರಾಸ್‌ ಮಾಡಿದರೆ, ಹೊಸ ವರ್ಷದ ಸಂಭ್ರಮಕ್ಕೆ ಬಂದ ಹಾಡು 2 ಮಿಲಿಯನ್‌ ಹಿಟ್ಸ್‌ ಪಡೆದುಕೊಂಡಿದೆ. ಅಲ್ಲದೆ ಧ್ರುವ ಸರ್ಜಾ ನಟನೆಯ 'ಪೊಗರು' ಟೀಸರ್‌ ಸದ್ದಿಲ್ಲದೆ ಬಂದರೂ ಯೂಟ್ಯೂಬ್‌ನಲ್ಲಿ ಮಾತ್ರ ಸದ್ದು ಮಾಡುತ್ತಿದೆ. ಇದನ್ನು ನೋಡಿದವರ ಸಂಖ್ಯೆ 3 ಮಿಲಿಯನ್‌. ಅಂದಹಾಗೇ ಸ್ಯಾಂಡಲ್’ವುಡ್’ನಲ್ಲಿ  ಭರ್ಜರಿ ಇನ್ನಿಂಗ್ಸ್ ಬಾರಿಸುತ್ತಿರುವುದು ಆರಡಿ ಸ್ಟಾರ್'ಗಳು. ಸದ್ಯ ಗಾಂಧಿನಗರದ ಟಾಪ್ ಸ್ಟಾರ್’ಗಳ ಕಟೌಟ್ ಗಳು ಬಾನೆತ್ತರದಲ್ಲಿ ಕಾಣುತ್ತಿವೆ.

Edited By

Kavya shree

Reported By

Kavya shree

Comments