ಮಿಡ್'ನೈಟ್ ಎಲಿಮಿನೇಷನ್ ಸೀಕ್ರೇಟ್ ಬಿಚ್ಚಿಟ್ಟ ಬಿಗ್'ಬಾಸ್ ಸ್ಪರ್ಧಿ...!!!

24 Jan 2019 12:00 PM | Entertainment
3147 Report

ಧನರಾಜ್ ಮಿಡ್’ನೈಟ್ ಎಲಿಮಿನೇಷನ್ ಆಗಿದ್ದಾರೆ. ಇನ್ನೂ ಕೂಡ ಜನರು, ಧನರಾಜ್ ಸೀಕ್ರೇಟ್ ರೂಂನಲ್ಲೇ ಇದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸ್ತಾ ಇದ್ದಾರೆ. ಆದರೆ ಧನರಾಜ್ ಎಲಿಮಿನೇಟ್ ಆಗಿ ಹೊರ ಬಂದ ಮೇಲೆ ಆ ಶಾಕ್’ನಿಂದ ನಿಜಕ್ಕೂ ಅವರ ಹೊರ ಬಂದಿದ್ದಾರಾ…? ಖಾಸಗಿ ವಾಹಿನಿಯ ಮೊದಲ ಸಂದರ್ಶನದಲ್ಲಿ ಧನರಾಜ್ ಹೇಳೋದೇನು…..

ಬಿಗ್’ಬಾಸ್ ಸೀಸನ್-6 ರ ಸ್ಪರ್ಧಿ, ಎಲ್ಲರ ಫೇವರೀಟ್ ಧನರಾಜ್ ಮಿಡ್’ನೈಟ್ ಎಲಿಮಿನೇಷನ್ ಆದರು. ಈ ಪ್ರಕ್ರಿಯೆ  ಕಂಡು ಸ್ವತಃ ಧನರಾಜ್ ಕೂಡ ಶಾಕ್ ಆಗಿದ್ರಂತೆ. ಅಂದು ಭಾನುವಾರ ಸಡನ್ ಆಗಿ ಮಿಡ್ ನೈಟ್ ನಲ್ಲಿ ಬಿಗ್ ಬಾಸ್ ಎಲಿಮಿನೇಷನ್ ನಿಂದ ಕ್ಷಣ ಸ್ತಬ್ಧವಾಗಿಬಿಟ್ಟದ್ದೆ. ಎಕ್ಸ್ಪೆಕ್ಟೇ ಮಾಡದೇ ಆ ರೀತಿ ನನ್ನ ಫೋಟೋಗಳು ಬರ್ನ್ ಆಗಿದ್ದನ್ನು ಕಂಡು ಮನೆಯವರೆಲ್ಲರೂ ಶಾಕ್ ಆಗಿದ್ದರು. ನಾನು ಫೈನಲ್’ಗೆ ಹೋಗ್ತೀನಿ ಎಂದು ನಿರೀಕ್ಷೆ ಮಾಡಿದ್ದೆ ವಿನಹ ಗೆಲ್ತೀನಿ ಅನ್ನೋ ಕಾನ್ಫಿಡೆನ್ಸ್ ಸ್ವಲ್ಪ ಕಡಿಮೆಯಿತ್ತು. ಆದರೆ ಫಿನಾಲೆಗೆ ಹೋಗಬೇಕು ಅಂತಾ ಮಹಾದಾಸೆ ಇತ್ತು. ಕೇವಲ ಐದು ದಿನಗಳಿರುವಾಗಲೇ ಬಿಗ್ಬಾಸ್ ವಾಸ ಮುಗಿಯಿತು. ಬೇಜಾರಾಯ್ತು ತುಂಬಾನೇ ನಿರಾಸೆಯಾದಂತಾಯ್ತು. ನನಗೆ ಗೆಲ್ಲೋದಕ್ಕಿಂತ ಮನೆಯಿಂದ ಹೊರ ಬಂದ್ಮೇಲೆ ನನ್ನ ಪ್ರೀತ್ಸೋರು ಎಷ್ಟು ಜನ  ಇದ್ದಾರೆ ಅಂತಾ ಗೊತ್ತಾಯ್ತು. ಸೋಶಿಯಲ್ ಮಿಡಿಯಾದಲ್ಲಿ ನನ್ನ ಬಗ್ಗೆ ಹರಿದಾಡಿದ ಪಾಸೀಟೀವ್ ಸುದ್ದಿ ನೋಡಿ ಸಿಕ್ಕಾಪಟ್ಟೆ ಖುಷಿಯಾಯ್ತು. ನಾನು ನಮ್ಮ ಮನೆಯಲ್ಲಿ ಹೇಗೆ ಇದ್ನೋ ಹಾಗೇ ಬಿಗ್’ಬಾಸ್ ಮನೆಯಲ್ಲಿಯೂ ಇದ್ದೆ.  ಮನೆಯೊಳಗೆ, ನಾನು ಎಲಿಮಿನೇಟ್ ಆದಾಗ ಜನ ನನ್ನನ್ನು ಉಳಿಸಿಕೊಂಡಿಲ್ವಲ್ಲಾ ಅಂತಾ ಬೇಜಾರಾಯ್ತು.ಆದರೆ ಮನೆಯಿಂದ ಹೊರ ಬಂದಮೇಲೆ ಜನರ ರೆಸ್ಪಾನ್ಸ್ ನೋಡಿ ಕಣ್ಣೀರು ಬಂತು.

ಅಂದು ಮಿಡ್ನೈಟ್ ನಲ್ಲಿ ಬಿಗ್ ಬಾಸ್ ಕರೆದಾಗ, ನಾವೆಲ್ಲಾ ಹೊರ ಬಂದಮೇಲೆ. ಮನೆಯ ಆವರಣದಲ್ಲಿ ನಮ್ಮ ಆಕ್ಟಿವಿಟಿಯ ಕೆಲ ಫೋಟೋಗಳ ಕೊಲೇಜ್ ನಿಲ್ಲಿಸಲಾಗಿತ್ತು. ನಾನು ನಿಜವಾಗಿಯೂ ಅಂದ್ಕೊಂಡಿರಲಿಲ್ಲ ನನ್ನ ಫೋಟೋಗಳೇ ಉರಿದುಹೋಗುತ್ತವೆ ಎಂದು. ನಿಬೇರೆಯವರದ್ದೇ ಉರಿಯುತ್ತೆ. ಆದರೆ ಬಜರ್ ಒತ್ತಿದ ಮೇಲೆ ನನ್ನ  ಫೋಟೋಗಳು ಬ್ಲಾಸ್ಟ್ ಆಯ್ತು. ನನಗೆ ಒಂಥಾರಾ ಶಾಕ್ ಆಯ್ತು. ಕನಸೋ, ನನಸೋ ಅಂತಾ ನಿಂತ ಜಾಗದಲ್ಲೇ ಸೆಕೆಂಡ್ ಸ್ಟಿಲ್ ಆದೆ. ಆದರೆ ನಿಜವಾಗಿಯೂ ನನ್ನ ಫೋಟೋಗಳು ಸುಟ್ಟು ಹೋಗಿದ್ದವು. ನನ್ನ ಬಿಗ್ಬಾಸ್ ಮನೆಯೊಳಗಿನ ಜರ್ನಿ ಕೊನೆಯಾಯ್ತು ಅಂದ್ಕೊಂಡೆ ಸಮಾಧಾನಿಸಿಕೊಂಡೆ.ಬಿಗ್ಬಾಸ್ ಮನೆಯಲ್ಲಿ ಅಜಾತ ಶತೃ ಅಂತಾ ಕರೆದಿದ್ದೂ ನಿಜಕ್ಕೂ ನನಗೆ ಬೆಸ್ಟ್ ಅನುಭವ. ಇನ್ನು ನನ್ನ ಬಗ್ಗೆ ಜನರು ಸೋಶಿಯಲ್ ಮಿಡಿಯಾದಲ್ಲಿ ಧನರಾಜ್ ಸೀಕ್ರೇಟ್ ರೂಂನಲ್ಲಿದ್ದಾರೆ ಅನ್ಕೊಂಡಿದ್ದಾರೆ. ಅಷ್ಟು ಗೌರವ, ಪ್ರೀತಿ, ಕಂಡು ನಿಜಕ್ಕೂ ಬೆರಗಾದೆ. ನನ್ನೊಂದಿಗೆ ನನ್ನ ಪತ್ನಿ ಕೂಡ ಸೆಲೆಬ್ರಿಟಿ ಆಗಿದ್ದಾಳೆ. ಕ್ಯಾಂಪೇನ್ ಕೂಡ  ಮಾಡಿದ್ದಾಳೆ.ಒಟ್ಟಾರೆ ಟ್ರೋಫಿ ಸಿಗದಿದ್ದರೂ ಬಿಗ್’ಬಾಸ್ ಮನೆಯಲ್ಲಿ ಎಕ್ಸ್’ಪೀರಿಯನ್ಸ್ ನಿಜಕ್ಕೂ ಸ್ಮರಣೀಯ. ಜೀವನದಲ್ಲಿ ಸಾಕಷ್ಟು ಸೈಕಲ್ ಹೊಡೆದಿದ್ದೀನಿ. ನಿಜಕ್ಕು ಬಿಗ್ಬಾಸ್’ಮನೆಯಲ್ಲಿ ಸಿಕ್ಕ ಅವಕಾಶ ನನಗೊಂದು ವರ ಎನ್ನುತ್ತಾರೆ ಬಿಗ್ಬಾಸ್ ಸ್ಪರ್ಧಿ ಧನರಾಜ್.

Edited By

Manjula M

Reported By

Kavya shree

Comments