ದಚ್ಚು ಪ್ರೆಂಡ್’ಶಿಫ್ ಬಗ್ಗೆ ಕಿಚ್ಚ ಹೇಳಿದ್ದೇನು..!! ಬಲವಂತದ ಸ್ನೇಹ ನನಗೆ ಬೇಡ ಎಂದ ‘ಹೆಬ್ಬುಲಿ’..!!!

24 Jan 2019 9:54 AM | Entertainment
2530 Report

ಸ್ಯಾಂಡಲ್ವುಡ್’ನಲ್ಲಿ ಸ್ಟಾರ್’ಗಳ ನಡುವೆ ಯಾಕೋ ವೈಮನಸ್ಸು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅಗುವುದಿಲ್ಲ, ಜೊತೆಗೆ ಸ್ಟಾರ್ ವಾರ್ ಈ ರೀತಿ ಮಾತುಗಳು ಯಾವಾಗಲೂ ಕೇಳುತ್ತಲೆ ಇರುತ್ತವೆ…ಇದರ ನಡುವೆ ಅಭಿಮಾನಿಗಳು  ಕೂಡ  ಕೆಲವೊಮ್ಮೆ ಉರಿಯುವ ಗಾಯಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿ ನಮ್ ಹೀರೋ ಫಸ್ಟ್  ನಿಮ್ ಹೀರೋ ಲಾಸ್ಟ್ ಈ ರೀತಿಯ ಮಾತುಗಳನ್ನ ಆಡುತ್ತಲೆ ಇರುತ್ತಾರೆ. ಆದರೆ ಇದೆಲ್ಲದರ ನಡುವೆ ಇದೀಗ ಸ್ಯಾಂಡಲ್ ವುಡ್ ದಿಗ್ಗಜ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕೆಂದು ಅಭಿಮಾನಿಗಳ ಬಯಕೆಯಾಗಿದೆ.

ಆದರೆ, ಕಾರಣಾಂತರದಿಂದ ಇಬ್ಬರು ನಟರು ದೂರವಾಗಿದ್ದಾರೆ. ಸಂದರ್ಶನವೊಂದರಲ್ಲಿ ದರ್ಶನ್ ಅವರ ಕುರಿತಾಗಿ ಮಾತನಾಡಿದ ಸುದೀಪ್, ಅವರೊಂದಿಗೆ ನಾನು ಎಲ್ಲಿಯೂ ಕೆಟ್ಟದ್ದನ್ನು ಮಾತಾಡಿಲ್ಲ. ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿಲ್ಲ. ದರ್ಶನ್ ವಿಚಾರದಲ್ಲಿ ಏನು ಸಮಸ್ಯೆ ಆಗಿದೆ ಎಂಬುದೇ ನನಗೆ ಗೊತ್ತಿಲ್ಲ ಎಂದು ಸುದೀಪ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ದರ್ಶನ್, ನಾವಿಬ್ಬರೂ ಸ್ನೇಹಿತರಲ್ಲ ನಟರು ಮಾತ್ರ ಎಂದು ಹೇಳಿದ್ದರು. ಗೌರವ ಸಿಗುತ್ತಿಲ್ಲ ಎಂದ ಮೇಲೆ ಫ್ರೆಂಡ್ ಶಿಪ್ ಗೆ ಗೌರವ ಎಲ್ಲಿರುತ್ತದೆ. ಯಾರೋ ಒಬ್ಬರಿಗೆ ಆಗಿ ಬರುತ್ತಿಲ್ಲ ಎಂದಾಗ ಬಲವಂತ ಆಗಬಾರದು ಎಂದು ಸುದೀಪ್ ಹೇಳಿದ್ದಾರೆ. ಸುದೀಪ್ ಹೇಳಿರುವ ಮಾತನ್ನು ಕೇಳಿರುವ ಅಭಿಮಾನಿಗಳು ಇವರಿಬ್ಬರ ಮಧ್ಯೆ ಮತ್ತೆ ಸ್ಟಾರ್ ವಾರ್ ಶುರುವಾಗಿದೆಯ ಎಂದು ಮಾತನಾಡಿಕೊಳ್ಳುತ್ತಿರುವುದಂತು ಸುಳ್ಳಲ್ಲ..

Edited By

Manjula M

Reported By

Manjula M

Comments