ಬಿಗ್’ಬಾಸ್ ಆ್ಯಂಗ್ರಿ ಯಂಗ್ ಮ್ಯಾನ್ ಗೆ ಸಿಕ್ತಿಗೆ ಬೆಳ್ಳಿತೆರೆಗೆ ಗ್ರ್ಯಾಂಡ್ಎಂಟ್ರಿ..?

23 Jan 2019 5:34 PM | Entertainment
463 Report

ಬಿಗ್’ಬಾಸ್ ಸ್ಪರ್ಧಿ ಜಗನ್ ನೆನೆಪಿರ ಬೇಕಲ್ಲವೇ.. ಗಾಂಧಾರಿ ಸೀರಿಯಲ್’ನಲ್ಲಿ ನಾಯಕನಟನಾಗಿ ಅಭಿನಯಿಸಿದ್ದ  ಬಿಗ್’ಬಾಸ್ ಸೀಸನ್-5 ನ ಕಂಟೆಸ್ಟಂಟ್ ಗಳಲ್ಲಿ ಒಬ್ಬರು. ಆ್ಯಂಗ್ರಿ ಯಂಗ್ ಮ್ಯಾನ್ ಅಂತಾನೇ ಜಗನ್ ಅವರನ್ನು ಎಲ್ಲರು ಗುರುತಿಸೋದು. ಬಿಗ್ ಬಾಸ್ ಮನೆಯಲ್ಲಿ  ಸಣ್ಣ-ಪುಟ್ಟದ್ದಕ್ಕು  ಹೆಚ್ಚು ಟೆಂಪರ್ ಆಗ್ತಿದ್ದ ಜಗನ್’ಗೆ ಮೂಗಿನ ತುದಿಯಲ್ಲಿ ಕೋಪ ಇದ್ಯಂತೆ. ಜಗನ್, 'ಬಿಗ್ ಬಾಸ್ ಫೈನಲ್ 5' ಹಂತ ತಲುಪಲಿಲ್ಲ. ಆದರೂ ಜಗನ್ ಗೆ ಮಾತ್ರ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಡಿಮ್ಯಾಂಡ್ ಕಮ್ಮಿ ಆಗಿಲ್ಲ.

ಬಿಗ್’ಬಾಸ್ ಮನೆಯಿಂದ ಹೊರ ಬಂದ ನಂತರ ಜಗನ್ ಗೆ ಕಿರುತೆರೆಯಲ್ಲಿ ಚಾನ್ಸ್ ಸಿಕ್ಕಿತು. ಈ ಹಿಂದೆಯೇ ಗಾಂಧಾರಿ ಧಾರವಾಹಿ ಮೂಲಕ ಮನೆಮಾತಾಗಿದ್ದ ಜಗನ್ ಗೆ, ಇತ್ತೀಚೆಗೆ ಪ್ರಸಾರವಾಗುತ್ತಿರುವ ಸೀತಾವಲ್ಲಭ ಸೀರಿಯಲ್ ಬಹಳ ಹೆಸರು ತಂದುಕೊಟ್ಟಿದೆ.  ಇದರ ಜೊತೆಗೆ ಜಗನ್ ಲಕ್ ಕೂಡ ಚೇಂಜ್ ಆಗಿದೆ. ಬೆಳ್ಳಿ ಪರದೆ ಮೇಲೆ ಜಗನ್ ಮಿಂಚೋಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈಗಾಗಲೇ ಸ್ಕ್ರಿಪ್ಟ್ ಫೈನಲೈಸ್ ಆಗಿದ್ದು, ಫೆಬ್ರವರಿ ತಿಂಗಳಲ್ಲಿ ಪ್ರಾಜೆಕ್ಟ್ ಬಗ್ಗೆ ಘೋಷಿಸಲಿದ್ದಾರೆ ನಟ ಜಗನ್. ಅಂದಹಾಗೇ ಸಿಲ್ವರ್ ಸ್ಕ್ರೀನ್ ಗೆ ಎಂಟ್ರಿ ಕೊಡ್ತಿರೋದು ಇದೇ ಮೊದಲೇನಲ್ಲ ಬಿಡಿ. ಇದಕ್ಕೂ ಮುನ್ನ ಜೋಶ್ ಚಿತ್ರದಲ್ಲಿ ಜಗನ್  ನಟಿಸಿದ್ದರು. ಲ್ಯಾಂಗ್   ಗ್ಯಾಪ್ ಬಳಿಕ ಮತ್ತೆ ಕಂ ಬ್ಯಾಕ್ ಮಾಡಿದ್ದಾರೆ. ಆದರೆ ಜಗನ್ ಈ ಬಗ್ಗ ಏನ್ ಹೇಳಿದ್ದಾರೆ ಗೊತ್ತಾ…? ನಾನೆಂದಿಗೂ ಸ್ಮಾಲ್ ಸ್ಕ್ರೀನ್ ಬಿಡಲ್ಲ , ಸಿನಿಮಾಗಳಲ್ಲಿ ಅಭಿನಯಿಸುವ ಕನಸು ಜಗನ್ ಗೆ ಮೊದಲಿನಿಂದಲೂ ಇದೆ. ಆದ್ರೆ, ಅವರ ವೃತ್ತಿ ಬದುಕಿಗೆ ತಿರುವು ಕೊಟ್ಟಿದ್ದು ಕಿರುತೆರೆ. ಹೀಗಾಗಿ, ''ಸ್ಮಾಲ್ ಸ್ಕ್ರೀನ್ ಬಿಡಲ್ಲ'' ಅಂತಾರೆ ಜಗನ್. ಏಳೆಂಟು ವರ್ಷಗಳಲ್ಲಿ ಜಗನ್ ಗೆ ಚಿತ್ರರಂಗದಿಂದ ಹಲವು ಅವಕಾಶಗಳು ಹುಡುಕಿಕೊಂಡು ಬಂದ್ವು. ಆದ್ರೆ, ಸೀರಿಯಲ್ ಗೆ ಕಮಿಟ್ ಆಗಿದ್ದ ಕಾರಣ ಯಾವ ಆಫರ್ ನೂ ಜಗನ್ ಒಪ್ಪಿಕೊಂಡಿರಲಿಲ್ಲ. ಈಗ, ಬಿಗ್ ಬಜೆಟ್ ಚಿತ್ರವೊಂದರಲ್ಲಿ ಸೆಕೆಂಡ್ ಹೀರೋ ಆಗಿ ನಟಿಸಲು ಜಗನ್ ಒಪ್ಪಿಕೊಂಡಿದ್ದಾರೆ.

Edited By

Kavya shree

Reported By

Kavya shree

Comments