ಬಿಗ್'ಬಾಸ್ ಕವಿತಾ ಲವ್ ಬಗ್ಗೆ ಶಶಿ ಅಪ್ಪ-ಅಮ್ಮ ಹೇಳಿದ್ದೇನು ಗೊತ್ತಾ..?

23 Jan 2019 3:39 PM | Entertainment
13054 Report

ಬಿಗ್’ಬಾಸ್  ಸೀಸನ್ -6 ಫೈನಲ್’ಗೆ ದಿನಗಣನೆ ಆರಂಭವಾಗಿದೆ. ಮನೆಯೊಳಗಿನ  ಸ್ಪರ್ಧಿ ಶಶಿ,  ಫೈನಲ್ ಗೆ ಸೆಲೆಕ್ಟ್  ಆಗಿರುವ  ಬಗ್ಗೆ ಅವರ ತಾಯಿ, ಹೇಳಿದ್ದೇನು ಗೊತ್ತಾ..? ಅವರ ಟ್ಯಾಲೆಂಟ್ ನಮಗೆ ಗೊತ್ತಿರಲಿಲ್ಲ. ಅವನು ಬಿಗ್’ಬಾಸ್  ಮನೆಗೆ ಹೋದ ಮೇಲೇನೆ ಗೊತ್ತಾಗಿದ್ದು, ಅವನಿಗೆ ಈ ಪರಿ ಟ್ಯಾಲೆಂಟ್ ಇದೆ ಅಂತಾ. ಅವನಿಗೆ ಕೃಷಿ ಬಗ್ಗೆ ಸಾಕಷ್ಟು ಜ್ಞಾನವಿದೆ ಎನ್ನುತ್ತಾರೆ ಶಶಿ ತಾಯಿ. ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಮ್ಮ ಆಸೆಯನ್ನು ಅವನು ನೆರವೇರಿಸಲಿಲ್ಲ.

 ಅವನು ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ಆಸೆ ಮೊದಲು ನಮಗಿತ್ತು. ಅವನು ಎಂಎಸ್ಸಿ ಅಗ್ರೀಕಲ್ಚರ್ ಮಾಡಿದ್ದಾನೆ. ಒಳ್ಳೆ ಕೆಲಸ ಸಿಗುತ್ತಿತ್ತು. ಲಕ್ಷಗಟ್ಟಲೇ ಸಂಭಾವನೆಯ ಕೆಲಸ ಬಿಟ್ಟು ಫಾರ್ಮಿಂಗ್ ಮಾಡ್ತಾ ಇದ್ದಾನೆ. ನಮಗೆ ತುಂಬಾ ಖುಷಿಯಾಗುತ್ತಿದೆ. ಮೊದಲೆಲ್ಲಾ ಅವನು ಕೆಲಸಕ್ಕೆ ಹೋಗಿಲ್ಲ ಎಂಬ ಬೇಸರವಿತ್ತು, ಆದರೆ ಈಗ ಹಾಗಿಲ್ಲ. ಕರ್ನಾಟಕದಾದ್ಯಂತ ಶಶಿಗೆ ಭಾರೀ ಅಭಿಮಾನ  ತೋರುತ್ತಾರೆ, ನಮಗೆ ಅದೇ ಖುಷಿ ಎನ್ನುತ್ತಾರೆ ಶಶಿ ತಂದೆ. ಇನ್ನು ಬಿಗ್ಬಾಸ್ ಮನೆಯಲ್ಲಿ ಶಶಿ, ಆ್ಯಂಡಿ ವಿಚಾರಕ್ಕೆ ಸಂಬಂಧಿಸಿದಂತೇ ಕವಿತಾ ಪರ ಶಶಿ ಗೋಡೆಗೆ ಕೈ ಗುದ್ದಿಕೊಂಡಿದ್ದು ಭಾರೀ ಸುದ್ದಿಯಾಯ್ತು. ಈ ಬಗ್ಗೆ ಮಾತನಾಡುತ್ತಾ ಶಶಿ ತಾಯಿ, ತನ್ನ ಮಗ ಪಾಸೀಟೀವ್ ಇದ್ರೆ ಎಷ್ಟು ಬೇಕಾದ್ರು ಬೆಂಡಾಗ್ತಾನೆ, ಆದರೆ ನೆಗಟೀವ್ ಆದ್ರೆ ತಡ್ಕೊಳಲ್ಲ ಎನ್ನುತ್ತಾರೆ.

ಇನ್ನು ಕವಿತಾ ಮತ್ತು  ಶಶಿ ಲವ್ ಗಾಸಿಪ್ ಬಗ್ಗೆ ಕೇಳಿದ್ರೆ, ಶಶಿ ತಾಯಿ ಹೀಗ್ ಹೇಳಿದ್ರು, ಅವರ ನಡುವೆ ಪ್ರೀತಿ ಏನು ಇಲ್ಲ. ಕೇವಲ ಫ್ರೆಂಡ್’ಶಿಪ್ ಅಷ್ಟೆ. ಒಂದು ವೇಳೆ ಅವರಿಬ್ಬರು ಹೊರಗೆ ಬಂದಮೇಲೆ ಅವರವರ ಆಸೆ ತಿಳಿಸಿದ್ರೆ ಆಮೇಲೆ ನೋಡೋಣ ಎನ್ನುತ್ತಾರೆ.  ಆ ಥರಾ ಪ್ರೀತಿ-ಪ್ರೇಮ ಏನು ಇಲ್ಲ. ಧನರಾಜ್ ಮತ್ತು ಜಯಶ್ರೀ ಕವಿತಾ, ಶಶಿ ಒಳ್ಳೆ ಫ್ರೆಂಡ್ಸ್ ಆಗಿದ್ದರು ಅಷ್ಟೆ ಎನ್ನುತ್ತಾರೆ.  ಇನ್ನು ಶಶಿಗೆ ಈಗ ವಯಸ್ಸು 26 ಅಷ್ಟೆ. ಇನ್ನು ಎರಡು ವರ್ಷ ಅವನಿಗೆ ಮದುವೆ ಮಾಡುವುದಿಲ್ಲ. ಮದುವೆಯ ತೀರ್ಮಾನ ಇಬ್ಬರಿಗೂ ಸೇರಿಯೇ ನಿರ್ಧಾರ ಮಾಡುತ್ತೇವೆ ಎಂದರು. ಬಿಗ್ಬಾಸ್ ಮನೆಯಲ್ಲಿ ಶಶಿಯನ್ನು ಹೊರತು ಪಡಿಸಿ ನೀವು ಯಾರನ್ನು ಬಿಗ್’ಬಾಸ್ ವಿನ್ನರ್ ಆಗಬೇಕು ಎಂದು ಬಯಸ್ತೀರಾ ಅಂದ್ರೆ,  ಧನರಾಜ್ ಬಿಟ್ರೆ ಅಂಥಾ ಕಂಟೆಸ್ಟಂಟ್ಸ್ ಫೈನಲ್ ಲೀಸ್ಟ್ ನಲ್ಲಿ ಇಲ್ಲ ಎನ್ನುತ್ತಾರೆ ಶಶಿ ಹೆತ್ತವರು. ಸದ್ಯ ಬಿಗ್ ಬಾಸ್ ಮನೆಯಲ್ಲಿ ಫೈನಲ್ ತಲುಪಿದ್ದಾರೆ 5 ಮಂದಿ. ಶಶಿ, ಕವಿತಾ, ನವೀನ್, ರಶ್ಮಿ, ಆ್ಯಂಡಿ ಈ ಐರ್ವರಲ್ಲಿ ಯಾರು ಬಿಗ್ಬಾಸ್ ಟ್ರೋಫಿ ಗೆ ಒಡೆಯರಾಗುತ್ತಾರೋ ಕಾದು ನೋಡಬೇಕಿದೆ.

Edited By

Kavya shree

Reported By

Kavya shree

Comments