ಬಿಗ್'ಬಾಸ್ ಗೆದ್ದರೆ ನವೀನ್ ಸಜ್ಜು ಆ ಹಣವನ್ನು ಏನ್ ಮಾಡ್ತಾರಂತೆ ಗೊತ್ತಾ...!

23 Jan 2019 2:20 PM | Entertainment
2270 Report

ಕನ್ನಡದ ಅತೀ ದೊಡ್ಡ ರಿಯಾಲಿಟಿ ಷೋಗಳಲ್ಲಿ ಬಿಗ್ ಬಾಸ್ ಕೂಡ ಒಂದು..  ಬಿಗ್ಬಾಸ್ ಸೀಸನ್-6 ನಿಂದ ಕಳೆದ  ಶನಿವಾರವಷ್ಟೆ ರಾಕೇಶ್ ನಾಮಿನೇಟ್ ಆಗಿದ್ದರು.. ಇನ್ನೊಂದು ವಾರ ಬಾಕಿ ಇರುವ ಕಾರಣದಿಂದ ಭಾನುವಾರದ ಮಧ್ಯರಾತ್ರಿ ಎಲಿಮಿನೇಷನ್​ ನಡೆದಿದ್ದು, ಧನರಾಜ್​  ಮನೆಯಿಂದ ಹೊರ ಬಂದಿದ್ದಾರೆ.. ಇದರಿಂದ ಅಭಿಮಾನಿಗಳಲ್ಲಿ ತೀವ್ರ ನೋವನ್ನು ಉಂಟು ಮಾಡಿದೆ. ಈ ಬಾರಿಯ ಬಿಗ್​ಬಾಸ್​ನಲ್ಲಿ ಧನರಾಜ್​ ಅವರೇ ವಿನ್​ ಆಗುತ್ತಾರೆ ಎನ್ನುವ ಆತ್ಮ ವಿಶ್ವಾಸವನ್ನು ಅವರ ಅಭಿಮಾನಿಗಳು ಇಟ್ಟುಕೊಂಡಿದ್ದರು..

ತಮ್ಮ ಸರಳತೆ ಮತ್ತು ತನ್ನ ಗಾಯನದಿಂದಲೇ ಬಿಗ್’ಬಾಸ್ ಮನೆಯಲ್ಲಿ ಎಲ್ಲರ ಮನೆ ಗೆದ್ದ ಮಂಡ್ಯದ ಹುಡುಗ ನವೀನ್ ಸಜ್ಜು. ಬಡ ಕುಟುಂಬದಿಂದ ಬಂದಿರುವ ನವೀನ್, ಬಡ ಜನರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಹೊಂದಿದ್ದಾರೆ. ನಿನ್ನೆ ಬಿಗ್ ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ವಿಶೇಷ ಚಟುವಟಿಕೆ ನೀಡಿದ್ದರು. ಸ್ಪರ್ಧಿಗಳು ಒಂದು ವೇಳೆ ಬಿಗ್ ಬಾಸ್ ಗೆದ್ದರೆ ಅದರಿಂದ ಬಂದ ಹಣದಲ್ಲಿ ಏನು ಮಾಡುತ್ತಾರೆ ಎಂಬುದನ್ನ ತಿಳಿಸಬೇಕಿತ್ತು.. ಈ ಸಂದರ್ಭದಲ್ಲಿ ಎಲ್ಲಾ ಸ್ಪರ್ಧಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದರು.. ಗಾಯಕ ನವೀನ್ ಸಜ್ಜು ಸಹ ತಮ್ಮ ಆಸೆಯನ್ನು ಕೂಡ ಹೇಳಿಕೊಂಡಿದ್ದಾರೆ.. ನನ್ನದೇ ಸ್ಟುಡಿಯೋ ಓಪನ್ ಮಾಡುವೆ ಹಾಗೂ ನಾನ್ನೊಂದು ತಂಡ ರಚಿಸಿ ಒಂದಿಷ್ಟು ಹಳ್ಳಿ ದತ್ತು ಪಡೆದುಕೊಳ್ಳುವ ಯೋಚನೆ ಇದೆ. ಹಳ್ಳಿ ಜನಗಳ ಸೇವೆ ಮಾಡುವ ಹಂಬಲ ಬಹಳ ದಿನಗಳಿಂದ ಇದೆ. ಹೀಗಾಗಿ ಬಿಗ್ ಬಾಸ್ ಮೂಲಕವಾದರೂ ನನ್ನ ಕನಸು ಈಡೇರಿಸಿಕೊಳ್ಳುವ ಉದ್ದೇಶ ಇದೆ ಎಂದಿದ್ದಾರೆ ಗಾಯಕ ನವೀನ್ ಸಜ್ಜು. ವೀಕ್ಷಕರು ನವೀನ್ ಮಾತುಗಳನ್ನು ಕೇಳಿ ಅಟವರಿಗೆ ಓಟ್ ಮಾಡಿದರೆ ನವೀನ್ ಗೆಲುವು ಬಿಗ್ ಬಾಸ್ ಮನೆಯಲ್ಲಿ ಗೆಲುವು ಖಚಿತ..

Edited By

Manjula M

Reported By

Manjula M

Comments