ಚಾಲೆಂಜ್ ನೆಪದಲ್ಲಿ ಕನ್ನಡ ನಟಿಯ ಜೊತೆ ಪ್ರೀತಿ ದೋಖ ಮಾಡಿದ ಕಿರಾತಕ..!!

23 Jan 2019 12:51 PM | Entertainment
943 Report

ಕೆಲವೊಮ್ಮೆ ಜೀವನ ಎನ್ನುವುದನ್ನು ಹಗುರವಾಗಿ ತೆಗೆದುಕೊಂಡು ಬಿಡುತ್ತೇವೆ.. ಯಾವ ಕೆಲಸವನ್ನು ಮಾಡಬೇಕೋ, ಯಾವ ಕೆಲಸವನ್ನು ಮಾಡಬಾರದೋ ಒಂದು ತಿಳಿಯುವುದಿಲ್ಲ.. ನಮ್ ಲೈಫ್ ಎಷ್ಟೆ ಬ್ಯುಸಿಯಿದ್ದರೂ ಪ್ರೀತಿ,ಪ್ರೇಮಕ್ಕೆಲ್ಲಾ ಒಂದಿಷ್ಟು ಟೈಮ್ ನ ಸ್ಪೆಂಡ್ ಮಾಡೋದಂತೂ ಕಾಮನ್, ಎಲ್ಲರ ಲೈಫ್ ನಲ್ಲಿ ಪ್ರೀತಿ ಪ್ರೇಮ ಆಗೋದು ಕಾಮನ್ ಬಿಡಿ…ಅದೇ ರೀತಿ ಕೆಲವೊಬ್ಬರು ಚಾಲೆಂಜ್ಗಾಗಿ ಪ್ರೀತಿ ಪ್ರೇಮ ಅಂತ ನಾಟಕ ಆಡ್ತಾರೆ… ಅದೇ ರೀತಿ ನಟಿಯ ಜೀವನದಲ್ಲೂ ಕೂಡ ಈ ರೀತಿಯೇ ಆಗಿದೆ..

ಒಬ್ಬ ಸೂಪರ್​ ಸ್ಟಾರ್​ ಆಗಿದ್ದ ನಟಿ ಲವ್​ ಮಾಡಿದ ಕಥೆ ಇದು.. ಎಸ್.. ಈ ಕಥೆ ಬೇರಾರದ್ದೂ ಅಲ್ಲ ಕನ್ನಡ ಮೂಲದ ಬಾಲಿವುಡ್​ನ ಟಾಪ್​ ನಟಿ ಶಿಲ್ಪಾ ಶೆಟ್ಟಿ ಅವರದು. ಒಬ್ಬ ಹುಡುಗ ಶಿಲ್ಪ ಶೆಟ್ಟಿಯನ್ನು ಲವ್​ನಲ್ಲಿ ಬೀಳಿಸುತ್ತೇನೆ ಎಂದು ತಮ್ಮ ಸ್ನೇಹಿತರೊಂದಿಗೆ ಬೆಟ್​ ಕಟ್ಟಿ ಅದರಂತೆ ಶಿಲ್ಪಾಶೆಟ್ಟಿಯೊಂದಿಗೆ ಸ್ನೇಹವನ್ನು ಗಳಿಸಿಕೊಂಡು, ಒಳ್ಳೆಯ ಸ್ನೇಹಿತನಾದ. ಹೀಗೆ ಸ್ನೇಹ ಮುಂದುವರೆಯಬೇಕಾದರೆ ಆತ ತನ್ನ ಭಾವನೆಗಳನ್ನು ಶಿಲ್ಪಾಶೆಟ್ಟಿಯ ಬಳಿ ಹೇಳಿಕೊಂಡ ಈತನ ಮಾತುಗಳನ್ನು ಕೇಳಿದ ಶಿಲ್ಪಾಶೆಟ್ಟಿ ಅವರು ಈತ ನಿಜವಾಗಿಯೂ ಪ್ರೀತಿಸುತ್ತಿದ್ದಾನೆ ಎಂದು ತಿಳಿದು ಅವರು ಕೂಡ ಪ್ರೀತಿಸುವುದಕ್ಕೆ ಪ್ರಾರಂಭ ಮಾಡಿದ್ದರಂತೆ... ಆತನನ್ನು ತುಂಬಾ ಹಚ್ಚಿಕೊಂಡ ಶಿಲ್ಪ ಆತನ ನೆನಪಲ್ಲೇ ಇರುತ್ತಿದ್ದಳು. ಕೆಲವು ದಿನಗಳ ನಂತರ ಬಂದ ಆ ಹುಡುಗ ತಾನು ನಿಜವಾಗಿಯೂ ನಿಮ್ಮನ್ನು ಪ್ರೀತಿಸಿಲ್ಲ, ನನ್ನ ಫ್ರೆಂಡ್​ ಜೊತೆಯಲ್ಲಿ ನಿನ್ನನ್ನು ಪ್ರೀತಿಸುವುದಾಗಿ ಬೆಟ್​ ಕಟ್ಟಿದ್ದೆ ಎಂದು ಹೇಳಿದ.. ಈ ಮಾತುಗಳನ್ನು ಕೇಳಿದ ಶಿಲ್ಪಾ ಕಣ್ಣಲ್ಲಿ ನೀರು ಹಾಕಿದ್ದಾರೆ, ಶಿಲ್ಪಾ ಅವರೇ ಸಂದರ್ಶನವೊಂದರಲ್ಲಿ ತಮ್ಮ ಹಳೆಯ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಸಿನಿ ಕಲಾವಿದರ ಜೀವನದಲ್ಲೂ ಕೂಡ ಈ ರೀತಿಯ ಕಹಿ ಅನುಭವಗಳು ನಡೆದಿರುತ್ತವೆ ಎನ್ನುವುದಕ್ಕೆ ಇದೆ ಸಾಕ್ಷಿ..

Edited By

Manjula M

Reported By

Manjula M

Comments