ಸಪ್ತಪದಿ ತುಳಿಯಲು ರೆಡಿಯಾಗ್ತಿದ್ದಾರ ಬಾಹುಬಲಿ ಪ್ರಭಾಸ್ ….!

23 Jan 2019 10:01 AM | Entertainment
2769 Report

ಇಡೀ ಸಿನಿಮಾರಂಗದಲ್ಲಿಯೇ ಮದುವೆ ಸುದ್ದಿಗಳು ಸಿಕ್ಕಾಪಟ್ಟೆ ಕಳೆ ಕಟ್ಟುತ್ತಿವೆ.. ಕಳೆದ ವರ್ಷ ಸಾಕಷ್ಟು ಜೋಡಿಗಳು ಬ್ಯಾಚುಲರ್ ಲೈಫ್’ಗೆ ಗುಡ್ ಬಾಯ್ ಹೇಳಿ ಸಪ್ತ ಪದಿಯನ್ನು ತುಳಿದರು… ಇದೀಗ ಬಾಹುಬಲಿ ಸರದಿ ಅನಿಸುತ್ತದೆ.. ಪ್ರಭಾಸ್ ಮದುವೆ ವಿಚಾರ್ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಕ್ರೇಜ್ ಕ್ರಿಯೆಟ್ ಮಾಡಿತ್ತು.. ಪ್ರಭಾಸ್ ಮತ್ತು ಅನುಷ್ಕಾ ಜೋಡಿ ನೋಡಿ ಮೇಡ್ ಫಾರ್ ಈಚ್ ಅದರ್ ಎಂದವರು ಅದೆಷ್ಟು ಮಂದಿಯೋ ಗೊತ್ತಿಲ್ಲ,.. ಬಾಹುಬಲಿ ಸಿನಿಮಾ ಮುಗಿದ ಮೇಲೆ ಪ್ರಭಾಸ್ ಮದುವೆ ಬಗ್ಗೆ ಭಾರೀ ಸದ್ದು ಮಾಡಿತ್ತು.

ಪ್ರಭಾಸ್ ಅನುಷ್ಕಾರನ್ನೇ ಮದುವೆಯಾಗುತ್ತಾರೆ ಎಂದು ಸುದ್ದಿಯೂ ಕೂಡ ಹೆಚ್ಚು ಕೇಳಿ ಬಂದಿತ್ತು...ಆದರೆ ಇಬ್ಬರೂ  ಕೂಡ ಅದನ್ನು ನಿರಾಕರಿಸಿದ್ದರು. ಇದೀಗ ಮತ್ತೆ ಪ್ರಭಾಸ್ ಮದುವೆ ಬಗ್ಗೆ ಸುದ್ದಿ ಓಡಾಡುತ್ತಿದೆ. ಸದ್ಯಕ್ಕೆ ಪ್ರಭಾಸ್ ಸಾಹೋ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಆಗಸ್ಟ್ ನಲ್ಲಿ ತೆರೆ ಕಾಣಲಿದೆ. ಆ ಸಿನಿಮಾ ತೆರೆ ಕಂಡ ಬಳಿಕ ಪ್ರಭಾಸ್ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಕೇಳಿ ಬಂದಿದೆ. ಪ್ರಭಾಸ್ ಸಂಬಂಧಿಯೊಬ್ಬರು ತೆಲುಗು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಭಾಸ್ ಸಾಹೋ ನಂತರ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.. ಒಟ್ಟಾರೆ ಅಭಿಮಾನಿಗಳ ಆಸೆಯಂತೆ ಪ್ರಭಾಸ್ ಅನುಷ್ಕಾ ಮದುವೆಯಾಗ್ತಾರ ಅನ್ನೋದನ್ನ ಕಾದು ನೋಡಬೇಕಿದೆ..

Edited By

Manjula M

Reported By

Manjula M

Comments