ಶೂಟಿಂಗೆಂದು ಹೋದ ಆ ನಟ ಆಕೆಯನ್ನು ನೋಡಿ ಕಣ್ಣೀರಿಟ್ಟಿದ್ಯಾಕೆ…!!!

22 Jan 2019 6:03 PM | Entertainment
345 Report

ಇತ್ತೀಚಿಗೆ ಸ್ಟಾರ್ ನಟರೊಬ್ಬರು ಶೂಟಿಂಗ್ ಗೆಂದು ಹೋಗಿದ್ದ ಸಂದರ್ಭದಲ್ಲಿ ಅಲ್ಲಿದ್ದ ಅಸಹಾಯಕ ಮಹಿಳೆಯನ್ನು ಕಂಡು ಮಮ್ಮುಲ ಮರಗಿದ್ದಾರೆ. ಭಿಕ್ಷೆ ಬೇಡುತ್ತಿದ್ದ ಆಕೆಯನ್ನು ಕಂಡು ನಟ ಕಣ್ಣೀರಿಟ್ಟಿದ್ದಾರೆ. ತನ್ನೊಟ್ಟಿಗೆ  ಆಕೆಯನ್ನು ಬನ್ನಿ ಎಂದು ಒತ್ತಾಯ ಮಾಡಿದ್ರಂತೆ. ಅಂದಹಾಗೇ ಆ ಸ್ಟಾರ್ ನಟ ಬೇರೆ ಯಾರು ಅಲ್ಲ, ಉಗ್ರಂ ಖ್ಯಾತಿಯ ರೋರಿಂಗ್ ಸ್ಟಾರ್  ಶ್ರೀ ಮುರಳಿ.

ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಶೂಟಿಂಗ್ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿತ್ತು. ಈ ವೇಳೆ ಸ್ನಾನಘಟ್ಟದ ಬಳಿ ಮಹಿಳೆಯೊಬ್ಬರು ಭಿಕ್ಷೆ ಬೇಡುತ್ತಾ ಕುಳಿತಿದ್ದರು. ಇದನ್ನು ಕಂಡ ಶ್ರೀಮುರಳಿ ಮಹಿಳೆಯ ಬಳಿ ತೆರಳಿ ಆತ್ಮೀಯವಾಗಿ ಮಾತನಾಡಿದ್ದಾರೆ.  ತನ್ನನ್ನು ನೋಡಲು ಬಂದ ಆ ಸ್ಟಾರ್ ನಟನ ಹತ್ತಿರ ಮಾತನಾಡುತ್ತಾ ವೃದ್ಧ ಹೆಂಗಸು, ತನ್ನನ್ನು ತಾನೇ ಸಾಕಿದ ಹೆತ್ತ ಮಕ್ಕಳು ಹೊರಗೆ ಹಾಕಿದ್ದಾರೆ. ಅವರಿಗೆ ನಾನು ಬೇಡವಾಗಿದ್ದೇನೆ ಎಂದು ಅಳುತ್ತಾ, ತನ್ನ ಕಷ್ಟದ ಜೀವನವನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಇವರ ಪರಿಸ್ಥಿಯನ್ನು ನೋಡಿ ಮುರಳಿ  ಆಕೆಯನ್ನು  ತನ್ನೊಂದಿಗೆ ಬರುವಂತೆ ಆಹ್ವಾನವನ್ನು ನೀಡಿದರು. ತಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ, ಒಂದೊಳ್ಳೆ ಕಡೆ ಸೇರಿಸುತ್ತೇನೆ ಬನ್ನಿ ಎಂದು ಕರೆದರಂತೆ. ಆದರೆ ಮುರಳಿ ಆಹ್ವಾನವನ್ನು ಅಷ್ಟೇ ವಿನಯವಾಗಿ ತಿರಸ್ಕರಿದ ಹೆಂಗಸು ಆಶೀರ್ವಾದ ಕೂಡ ಮಾಡಿದ್ದಾರೆ. ಅದಕ್ಕೆ ಮುರಳಿ, ಆ ಹೆಂಗಸಿಗೆ ತಾವು ಖಂಡಿತ ನಿಮ್ಮ ಸಹಾಯಕ್ಕೆ ನಿಲ್ಲುತ್ತೇನೆ ಎಂದು ಭರವಸೆ ಕೂಡ ನೀಡಿದ್ದಾರೆ. ಮುರಳಿಯ ಈ ಕೆಲಸಕ್ಕೆ ಹಲವು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಹಿಂದೆಯೂ ಹಲವು ಬಾರಿ ಶೂಟಿಂಗ್ ಗೆಂದು ಹೋದಾಗ ಅಸಹಾಯಕರನ್ನು ಕಂಡರೆ ಮರಗುತ್ತಾರಂತೆ.

Edited By

Kavya shree

Reported By

Kavya shree

Comments